Top

ಅಕ್ಷಯ್‌ಕುಮಾರ್‌ಗೆ ನಾಯಕಿಯಾಗ್ತಾರಾ ಕೃತಿ..?!

ಅಕ್ಷಯ್‌ಕುಮಾರ್‌ಗೆ ನಾಯಕಿಯಾಗ್ತಾರಾ ಕೃತಿ..?!
X

ಪ್ರಿಯಾಂಕ ತಳವಾರ, ಟಿವಿ5

ಕನ್ನಡತಿ ಅಲ್ಲದೆ ಇದ್ರೂ ಕನ್ನಡದಲ್ಲಿ ಮಿಂಚು ಹರಿಸಿದ ನಟಿ ಕೃತಿ ಕರಬಂಧ. ಚಿರು ಚಿತ್ರದ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟು ಪರ ಭಾಷೆಗಳ ಚಿತ್ರರಂಗದಲ್ಲೂ ಹೆಸರು ಮಾಡಿದ್ದಾರೆ. ಸೌತ್​ ಸಿನಿ ದುನಿಯಾದಿಂದ ಬಾಲಿವುಡ್​ಗೆ ಹಾರಿದ ಈ ಚೆಲುವೆ ಇಮ್ರಾನ್​ ಹಾಶ್ಮಿ ಜೊತೆ ರಾಝ್​ ರೀಬೂಟ್​ ಚಿತ್ರದಲ್ಲಿ ನಟಿಸಿದ್ರು.

ಈ ಚಿತ್ರ ಅಷ್ಟಾಗಿ ಹಿಟ್​ ಆಗದೇ ಇದ್ರು ಕೂಡ ಬಾಲಿವುಡ್​ನಲ್ಲಿ ಈಕೆಗೆ ಡಿಮ್ಯಾಂಡ್​ ಕಮ್ಮಿಯಾಗಲಿಲ್ಲ. ಯೆಸ್​, ಕೃತಿ ಮತ್ತೊಂದು ಬಾಲಿವುಡ್​ನ ದೊಡ್ಡ ಪ್ರಾಜೆಕ್ಟ್​ಗೆ ಸಹಿ ಹಾಕಿದ್ದಾರೆ. ಹೌಸ್​ಫುಲ್​-4 ಭಾಗದಲ್ಲಿ ಕೃತಿ ನಟಿಸಿಲಿದ್ದಾರೆ. ಇನ್ನು ಹೌಸ್​ಫುಲ್​-4 ಚಿತ್ರದಲ್ಲಿ ಬಾಲಿವುಡ್​ ಕಿಲಾಡಿ ಅಕ್ಷಯ್​ ಕುಮಾರ್​, ನಟ ಅಭಿಷೇಕ್​ ಬಚ್ಚನ್, ರಿತೇಶ್​ ದೇಶ್​ಮುಖ್​, ಬಾಬಿ ಡಿಯೋಲ್​ರಂತಹ ಸ್ಟಾರ್​ ನಟರ ಜೊತೆ ಕೃತಿ ಸ್ಕ್ರೀನ್​ ಶೇರ್​ ಮಾಡಲಿದ್ದಾರೆ.

4 ಜನ ಹೀರೋಗಳು ಅಂದ್ರೆ ಅಲ್ಲಿ 4 ಜನ ಹೀರೋಯಿನ್​ಗಳು ಇದ್ದೇ ಇರ್ತಾರೆ. ಆ ನಾಲ್ಕು ಜನ ಹೀರೋನ್​ಗಳಲ್ಲಿ ಕೃತಿ ಕೂಡ ಒಬ್ಬರು. ಅಂದ್ಹಾಗೆ ಗೂಗ್ಲಿ ಚೆಲುವೆ ತಮ್ಮ ಎರಡನೇ ಬಾಲಿವುಡ್​ ಚಿತ್ರದಲ್ಲಿ ಯಾರ ಜೋಡಿಯಾಗಿ ಕಾಣಿಸಿಕೊಳ್ಳಲ್ಲಿದ್ದಾರೆ ಅಂತ ಕಾದು ನೋಡಬೇಕಿದೆ.

Next Story

RELATED STORIES