Top

ಇದು ವಿದ್ಯೆ ಜೊತೆ ಜೀವದಾನಕ್ಕೆ ಪ್ರೋತ್ಸಾಹಿಸುವ ರಾಜ್ಯದ ಏಕೈಕ ವಿದ್ಯಾಸಂಸ್ಥೆ ಕತೆ

ಇದು ವಿದ್ಯೆ ಜೊತೆ ಜೀವದಾನಕ್ಕೆ ಪ್ರೋತ್ಸಾಹಿಸುವ ರಾಜ್ಯದ ಏಕೈಕ ವಿದ್ಯಾಸಂಸ್ಥೆ ಕತೆ
X

ದಾವಣಗೆರೆ : ದಾನಕ್ಕಿಂತ ಶ್ರೇಷ್ಠದಾನ ಅನ್ನದಾನ, ವಿದ್ಯಾದಾನ ಅಂತಾರೆ. ಇದನ್ನಾ ಯಾರು ಬೇಕಾದರೂ ಕೊಡ್ತಾರೆ. ಆದರೆ ಜೀವದಾನ ಮಾಡೋರ ಸಂಖ್ಯೆ ತೀರಾ ಕಡಿಮೆ. ಅಂತಹ ಜೀವದಾನ ಮಾಡೋ ಯುವಕರ ಗುಂಪೊಂದು ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ದಾವಣಗೆರೆ ನಗರದ ಐಟಿಐ ಕಾಲೇಜು ವಿದ್ಯಾರ್ಥಿಗಳು ಪ್ರಾಧ್ಯಾಪಕರ ಜೊತೆ ರಕ್ತದಾನ ಮಾಡುವ ಕಾಯಕ ಮೈಗೂಡಿಸಿಕೊಂಡಿದ್ದಾರೆ.

ವಿದ್ಯಾದಾನದ ಜೊತೆಗೆ ರಕ್ತದಾನ

ಈ ವಿದ್ಯಾರ್ಥಿಗಳು ರಕ್ತದಾನಿಗಳು ಗುಂಪು ಮಾಡಿಕೊಂಡು ಲೈಫ್ ಲೈನ್ ಅನ್ನೋ ಸಂಸ್ಥೆ ಜೊತೆ ಕೆಲಸ ಮಾಡುತ್ತಿದ್ದಾರೆ. ರಕ್ತದ ತುರ್ತು ಅವಶ್ಯಕತೆ ಇದ್ದು ಇಲ್ಲಿಗೆ ಬಂದವರು ಎಂದೂ ಖಾಲಿ ಕೈಯಲ್ಲಿ ವಾಪಸ್ ಹೋಗಿಲ್ಲ. ಈ ವಿದ್ಯಾರ್ಥಿಗಳ ಗುಂಪು 1000 ಕ್ಕೂ ಹೆಚ್ಚು ಅಮೂಲ್ಯ ಜೀವಗಳನ್ನ ಉಳಿಸಿದೆ. ಐಟಿಐ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರಲ್ಲಿ ಪ್ರತಿ ತಿಂಗಳು ಕನಿಷ್ಠ 20 ಮಂದಿ ಕಡ್ಡಾಯವಾಗಿ ರಕ್ತದಾನ ಮಾಡುತ್ತಾರೆ. ರಕ್ತ ಅರಸಿ ಬಂದವರ ಬಳಿ ನಯಾಪೈಸೆಯೂ ಹಣ ಕೇಳದೆ ಉಚಿತವಾಗಿ ದಾನ ಮಾಡಿ ಬರ್ತೀದ್ದಾರೆ ವಿದ್ಯಾರ್ಥಿಗಳು.

ಸ್ವಯಂ ಪ್ರೇರಣೆಯಿಂದ ವಿದ್ಯಾರ್ಥಿಗಳಲ್ಲಿ ರಕ್ತದಾನದ ಜಾಗೃತಿ

ರಕ್ತ ಕೇಳಿಕೊಂಡು ಇಲ್ಲಿಗೆ ಬಂದವರು ಎಂದೂ ಬರೀ ಕೈಯಲ್ಲಿ ವಾಪಸ್ ಹೋಗಿಲ್ಲ. ವಿದ್ಯಾರ್ಥಿಗಳು ತಮ್ಮದೇ ಆದ ವಾಟ್ಸಾಪ್ ಗ್ರೂಪ್ ರಚಿಸಿಕೊಂಡು ಅದರಲ್ಲಿ ಬರುವ ಮಾಹಿತಿ ಮೇರೆಗೆ ಕುದ್ದು ವಿದ್ಯಾರ್ಥಿಗಳೇ ಹೋಗಿ ರಕ್ತ ಕೊಟ್ಟು ಬರ್ತಾರೆ. ರಕ್ತದಾನಿಗಳ ಬಳಗ ಪ್ರಾರಂಭವಾಗಿದ್ದು,1987ರಲ್ಲಿ. ನಾಲ್ಕು ಹುಡುಗರು ಸೇರಿಕೊಂಡು ಕಟ್ಟಿದ ಗುಂಪು ಇಂದು 3 ಸಾವಿರಕ್ಕೂ ಅಧಿಕ ಮಂದಿಯನ್ನ ಹೊಂದಿದೆ.

ಇಲ್ಲಿದ್ದಾರೆ 50ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ ದಾನಿಗಳು

ಲೈಫ್ ಲೈನ್ ಸ್ವಯಂ ಪ್ರೇರಿತರ ರಕ್ತದಾನಿಗಳ ಗುಂಪಲ್ಲಿ 15 ರಕ್ತದಾನಿಗಳು 50 ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ್ದಾರೆ. ಆದಿಕೇಶವ ಎಂಬುವರು 134 ಬಾರಿ ರಕ್ತದಾನ ಮಾಡಿರುವುದು ವಿಶೇಷ. ಬರೀ ರಕ್ತದಾನ ಮಾತ್ರ ಮಾಡದೇ ಬೇರೆಯವರಿಗೂ ರಕ್ತದಾನದ ಮಹತ್ವ ಸಾರುವ ಕೆಲಸ ಮಾಡುತ್ತಿದ್ದಾರೆ. ನಗರದ ಕೆಲವು ರೆಸ್ಟೋರೆಂಟ್, ಹೊಟೇಲ್ ಮತ್ತು ಸಾರ್ವಜನಿಕರ ಸ್ಥಳದಲ್ಲಿ ರಕ್ತದ ಅವಶ್ಯಕತೆ ಇರುವ ಸೂಚನ ಫಲಕಗಳನ್ನು ಅಳವಡಿಸಿದ್ದಾರೆ.

ರಾಜ್ಯಕ್ಕೆ ಮಾದರಿ "ಲೈಫ್ ಲೈನ್ ಸ್ವಯಂ ರಕ್ತದಾನಿ"ಗಳ ಗುಂಪು

ಒಟ್ಟಾರೆ 30 ವರ್ಷಗಳಿಂದ ರಕ್ತದಾನ ಮಾಡುತ್ತ ಬಂದಿರುವ ಬಳಗದ ಕಾರ್ಯ ಎಲ್ಲರಿಗೂ ಪ್ರೇರಣೆ ನೀಡಿದೆ. ಇವರನ್ನ ನೋಡಿ ಹುಬ್ಬಳ್ಳಿ, ಚಿತ್ರದುರ್ಗ, ಬೆಂಗಳೂರು, ಬಳ್ಳಾರಿ, ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳಲ್ಲೂ ಸ್ವಯಂ ಪ್ರೇರಿತ ರಕ್ತದಾನಿಗಳ ಗುಂಪುಕಟ್ಟಿಕೊಂಡು ಕೆಲಸ ಮಾಡುತ್ತಿರುವುದು ಶ್ಲಾಘನೀಯ.

ವರದಿ : ಪ್ರವೀಣ್ ಬಾಡ, ಟಿವಿ5 ದಾವಣಗೆರೆ

Next Story

RELATED STORIES