Top

ಧವನ್​, ಮುರಳಿ ಶತಕ: ಭಾರತ ಭರ್ಜರಿ ಆರಂಭ

ಧವನ್​, ಮುರಳಿ ಶತಕ: ಭಾರತ ಭರ್ಜರಿ ಆರಂಭ
X

ಬೆಂಗಳೂರು: ಚೊಚ್ಚಲ ಟೆಸ್ಟ್ ಪಂದ್ಯವಾಡಿದ ಆಫ್ಘಾನಿಸ್ತಾನ ತಂಡದ ಬೌಲರ್​ಗಳನ್ನು ಚೆಂಡಾಡಿದ ಆರಂಭಿಕ ಬ್ಯಾಟ್ಸ್​ಮನ್​ಗಳು ಶತಕದ ಗೌರವಕ್ಕೆ ಪಾತ್ರರಾಗಿದ್ದೂ ಅಲ್ಲದೇ ಬೃಹತ್​ ಮೊತ್ತದ ಸುಳಿವು ನೀಡಿದ್ದಾರೆ. ಆದರೆ ದಿನದ ಕೊನೆಯಲ್ಲಿ ತಿರುಗೇಟು ನೀಡುವ ಮೂಲಕ ಆಫ್ಘಾನಿಸ್ತಾನ ಸಮ ಗೌರವ ಹಂಚಿಕೊಳ್ಳುವಲ್ಲಿ ಯಶಸ್ವಿಯಾಯಿತು.

[story-lines]

ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ಇದರ ನಡುವೆಯೂ ನಡೆದ 78 ಓವರ್​ಗಳ ಆಟದಲ್ಲಿ ಭಾರತ ಮೊದಲ ಇನಿಂಗ್ಸ್​ನಲ್ಲಿ 6 ವಿಕೆಟ್ ಕಳೆದುಕೊಂಡು 347 ರನ್ ಸಂಪಾದಿಸಿತು.

ಒಂದು ಹಂತದಲ್ಲಿ 284ಕ್ಕೆ 2 ವಿಕೆಟ್ ಕಳೆದುಕೊಂಡು ಭಾರೀ ಮೊತ್ತದತ್ತ ಮುಖ ಮಾಡಿದ್ದ ಭಾರತ ದಿನದ ಕೊನೆಯಲ್ಲಿ ಆಫ್ಘಾನ್ ಬೌಲರ್​ಗಳ ತಿರುಗೇಟಿಗೆ ತತ್ತರಿಸಿತು. ಅಮಿನ್ 2 ವಿಕೆಟ್ ಕಿತ್ತರೆ, ರಶೀದ್ ಖಾನ್​, ಮುಜೀಬ್​ ರೆಹಮಾನ್ ತಲಾ 1 ವಿಕೆಟ್ ಪಡೆದು ಭಾರತದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್​ಗೆ ಕಡಿವಾಣ ಹಾಕಿದರು.

ಇನಿಂಗ್ಸ್ ಆರಂಭಿಸಿದ ಶಿಖರ್​ ಧವನ್ ಮತ್ತು ಮುರಳಿ ವಿಜಯ್ ಮೊದಲ ವಿಕೆಟ್​ಗೆ 168 ರನ್ ಕಲೆಹಾಕಿದರು. ಟಿ-20 ಗುಂಗಿನಲ್ಲಿದ್ದ ಧವನ್ 96 ಎಸೆತಗಳಲ್ಲಿ 19 ಬೌಂಡರಿ ಹಾಗೂ 3 ಸಿಕ್ಸರ್ ಒಳಗೊಂಡ 107 ರನ್ ಸಿಡಿಸಿದರು. ಇದು ಧವನ್​ಗೆ 7ನೇ ಶತಕವಾಗಿದೆ.

ಮತ್ತೊಂದು ಕಡೆ ನಿಧಾನಗತಿ ಆಡಿದ ಮುರಳಿ ವಿಜಯ್ 153 ಎಸೆತಗಳಲ್ಲಿ 15 ಬೌಂಡರಿ ಹಾಗೂ 1 ಸಿಕ್ಸರ್ ಸೇರಿದ 105 ರನ್ ಗಳಿಸಿದರು. ಇದು ಮುರಳಿ ವಿಜಯ್​ಗೆ 12ನೇ ಶತಕವಾಗಿದೆ.

ಟಿ-20ಯಲ್ಲಿ ನೀಡಿದ ಉತ್ತಮ ಪ್ರದರ್ಶನದಿಂದ ಟೆಸ್ಟ್​ಗೆ ಮರಳಿದ್ದ ಕೆ.ಎಲ್​.ರಾಹುಲ್ ಅರ್ಧಶತಕದ ಗೌರವಕ್ಕೆ ಪಾತ್ರರಾದರು. ದಿನದ ಕೊನೆಯಲ್ಲಿ ರಾಹುಲ್ 64 ಎಸೆತಗಳಲ್ಲಿ 8 ಬೌಂಡರಿ ಸೇರಿದಂತೆ 54 ರನ್ ಬಾರಿಸಿ ಔಟಾದರು.

  • ಸಂಕ್ಷಿಪ್ತ ಸ್ಕೋರ್​
  • ಭಾರತ ಮೊದಲ ಇನಿಂಗ್ಸ್ 78 ಓವರ್ 6 ವಿಕೆಟ್​ಗೆ 347 (ಧವನ್ 107, ಮುರಳಿ 105, ರಾಹುಲ್ 54, ಪೂಜಾರ 35, ಯಾಮಿನ್ ಅಹ್ಮದಜಾಯಿ 32/2).

Next Story

RELATED STORIES