Top

ಸತ್ತೇ ಹೋಗ್ತಿನಿ ಅಂತ ಹೇಳಿದ್ದ ಅಪ್ರಬುದ್ಧ ಸಿಎಂ: ಅನಂತ್​ಕುಮಾರ್ ಹೆಗ್ಡೆ ಟ್ವೀಟ್​

ಸತ್ತೇ ಹೋಗ್ತಿನಿ ಅಂತ ಹೇಳಿದ್ದ ಅಪ್ರಬುದ್ಧ ಸಿಎಂ: ಅನಂತ್​ಕುಮಾರ್ ಹೆಗ್ಡೆ ಟ್ವೀಟ್​
X

ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಕೆಲಸ ಮಾಡಿದ್ದಕ್ಕಿಂತ ಮಾತನಾಡಿ ವಿವಾದಕ್ಕೆ ಒಳಗಾಗಿದ್ದೆ ಹೆಚ್ಚು. ಸದಾ ಒಂದೊಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡುತ್ತಾ ಬಂದಿರುವ ಈ ಬಿಜೆಪಿ ಮುಖಂಡ ಇದೀಗ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ವಿರುದ್ಧ ಫಿಟ್ನೆಸ್​ ಕುರಿತು ನೀಡಿದ ಪ್ರತಿಕ್ರಿಯೆ ವಿವಾದಕ್ಕೆ ಗುರಿಯಾಗಿದೆ.

ಪ್ರಧಾನಿ ಮೋದಿ ಇತ್ತೀಚೆಗೆ ಫಿಟ್ನೆಸ್ ಸಾಬೀತುಪಡಿಸುವ ಚಾಲೆಂಜ್ ಅನ್ನು ಸಿಎಂ ಕುಮಾರಸ್ವಾಮಿ ಅವರಿಗೆ ನೀಡಿದ್ದರು. ಈ ಚಾಲೆಂಜ್ ಅನ್ನು ನಯವಾಗಿ ತಿರಸ್ಕರಿಸಿದ್ದ ಕುಮಾರಸ್ವಾಮಿ, ನನ್ನ ಫಿಟ್ನೆಸ್​ಗಿಂತ ರಾಜ್ಯದ ಅಭಿವೃದ್ಧಿಯ ಫಿಟ್ನೆಸ್ ಅಗತ್ಯವಿದೆ. ಈ ನಿಟ್ಟಿನಲ್ಲಿ ನಿಮ್ಮ ಸಹಕಾರ ಅಗತ್ಯ ಎಂದು ತಿರುಗೇಟು ನೀಡಿದ್ದರು.

ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿರುವ ಅನಂತಕುಮಾರ ಹೆಗ್ಡೆ, ದೇಹ ಹಾಗೂ ಮಾನಸಿಕ ಫಿಟ್ ನೆಸ್ ಇಲ್ಲದವರು ರಾಜ್ಯದ ಕಾಳಜೆ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ. ಅಧಿಕಾರ ಸಿಗದಿದ್ದರೆ ನನಗೆ ಜಾಸ್ತಿ ಆಯುಷ್ಯ ಇಲ್ಲ. ಸತ್ತೇ ಹೋಗುತ್ತೇನೆ ಎಂದು ಗೋಳಾಡಿದ್ದ ಅಪ್ರಬುದ್ಧ ಮುಖ್ಯಮಂತ್ರಿ ಗೆ ಫಿಟ್ ನೆಸ್ ಸವಾಲು ಚಾಲೆಂಜ್ ಅನ್ನು ಸೂಕ್ತವಾಗಿಯೇ ನೀಡಿರುತ್ತಾರೆ ಎಂದು ಟೀಕಿಸಿದ್ದಾರೆ.

Next Story

RELATED STORIES