Top

ಕೇರಳದಲ್ಲಿ ಭಾರೀ ಮಳೆಗೆ ಬಾಲಕಿ ಬಲಿ: 27ಕ್ಕೇರಿದ ಸಾವಿನ ಸಂಖ್ಯೆ

ಕೇರಳದಲ್ಲಿ ಭಾರೀ ಮಳೆಗೆ ಬಾಲಕಿ ಬಲಿ: 27ಕ್ಕೇರಿದ ಸಾವಿನ ಸಂಖ್ಯೆ
X

ಕೇರಳದಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮುಂಗಾರು ಮಳೆಯ ಆರ್ಭಟಕ್ಕೆ ಗುರುವಾರ 9 ವರ್ಷದ ಬಾಲಕಿ ಸೇರಿದಂತೆ 9 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಒಂದು ವಾರದಿಂದ ಕೇರಳದಲ್ಲಿ ಸಾವಿನ ಸಂಖ್ಯೆ 27ಕ್ಕೇರಿದೆ.

ಕೋಜಿಕೋಡ್​ನಲ್ಲಿ ಮಳೆಯ ಅಬ್ಬರಕ್ಕೆ 9 ಮಂದಿ ನಾಪತ್ತೆಯಾಗಿದ್ದಾರೆ. ಕೇರಳದ ಇತರೆ ಜಿಲ್ಲೆಗಳಾದ ಅಲಪುಜಾ, ಮಲ್ಲಪುರಂ, ವೈನಾಡ್​ ಮುಂತಾದ ಕಡೆಗಳಲ್ಲಿ ಭೂಕುಸಿತ ವರದಿಯಾಗಿದೆ.

ಬಿರುಸಿನ ಮಳೆಗೆ ಸಾಕಷ್ಟು ಪ್ರಮಾಣದಲ್ಲ ಬೆಳೆ ಹಾನಿಕೂಡ ಸಂಭವಿಸಿದೆ. ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಅಲ್ಲದೇ ನೂರಾರು ಮನೆಗಳು ಹಾನಿಗೊಳಗಾಗಿವೆ.

ಕೇರಳ ಸೇರಿದಂತೆ ಮುಂದಿನ 5 ದಿನಗಳ ಕಾಲ ಈಗಿನ ಮಳೆಗಿಂತ ಹೆಚ್ಚು ಮತ್ತು ಅತೀ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚುನೆ ನೀಡಿದೆ.

Next Story

RELATED STORIES