Top

15 ರೂಪಾಯಿ ಸಿಗರೇಟಿಗಾಗಿ ಡಬಲ್ ಮರ್ಡರ್..!

15 ರೂಪಾಯಿ ಸಿಗರೇಟಿಗಾಗಿ ಡಬಲ್ ಮರ್ಡರ್..!
X

[story-lines]

ಬೆಂಗಳೂರು: ಕೇವಲ 15 ರೂಪಾಯಿ ಸಿಗರೇಟಿಗಾಗಿ ಸಿಲಿಕಾನ್ ಸಿಟಿಯಲ್ಲಿ ಡಬಲ್ ಮರ್ಡರ್ ಆಗಿದೆ. ಕೆ.ಜಿ ಹಳ್ಳಿ ಠಾಣಾ ವ್ಯಾಪ್ತಿಯ ಗೋವಿಂದಪುರ ಮುಖ್ಯ ರಸ್ತೆಯಲ್ಲಿ ಈ ಘಟನೆ ನಡೆದಿದೆ. ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ಅಮೀನ್ ಎಂಬಾತ ರಸ್ತೆ ಬದಿಯ ಪೆಟ್ಟಿಗೆ ಅಂಗಡಿಯಲ್ಲಿ ಸಿಗರೇಟ್ ತೆಗೆದುಕೊಂಡಿದ್ದಾನೆ. ಆದ್ರೆ ಸಿಗರೇಟ್ ಗೆ ಹಣ ಕೊಡದೆ ವಾಪಸ್ಸು ಬರುತ್ತಿದ್ದರಿಂದ ಅಂಗಡಿ ಮಾಲೀಕ ಹಣ ಕೊಡುವಂತೆ ಹೇಳಿದ್ದಾನೆ. ಈ ವೇಳೆ ಅಮೀನ್ ನನ್ನನ್ನೇ ಹಣ ಕೇಳ್ತೀಯಾ ಅಂತ ಅಂಗಡಿ ಮಾಲೀಕನಿಗೆ ಹಿಗ್ಗಾಮಗ್ಗಾ ಥಳಿಸಿದ್ದಾನೆ.

ಕೂಡಲೇ ಅಂಗಡಿ ಮಾಲೀಕ ತನ್ನ ಸ್ನೇಹಿತರಿಗೆ ಕರೆ ಮಾಡಿ ನಡೆದ ವಿಚಾರವನ್ನು ಹೇಳಿದ್ದಾನೆ. ವಿಷ್ಯ ತಿಳಿದಿದ್ದೇ ಮರದ ದೊಣ್ಣೆಯನ್ನು ಹಿಡಿದು ಬಂದ ಅಂಗಡಿ ಮಾಲೀಕನ ಸ್ನೇಹಿತರು ಗೋವಿಂದಪುರದ ಬಿಬಿಎಂಪಿ ಮೈದಾನದ ಬಳಿ ಗಲಾಟೆ ಮಾಡಿದ್ದಾರೆ. ಈ ವೇಳೆಯಲ್ಲಿ ಅಮೀನ್ ಹಾಗೂ ಆತನ ಸಹೋದರ ಮತೀನ್ ಗೆ ದೊಣ್ಣೆಯಿಂದ ಹೊಡೆದು ಹಲ್ಲೆ ಮಾಡಿದ್ದಾರೆ.

ಕೂಡಲೇ ಅಲ್ಲಿದ್ದ ಸ್ಥಳೀಯರು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇನ್ನು ಕೊಲೆ ಪ್ರಕರಣ ದಾಖಲು ಮಾಡಿಕೊಂಡಿರುವ ಕೆ.ಜಿ ಹಳ್ಳಿ ಪೊಲೀಸರು ಸದ್ಯ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆದ್ರೆ ಎರಡು ಕೊಲೆಗಳು ಸಿಗರೇಟ್ ವಿಚಾರಕ್ಕೆ ನಡೀತಾ ಅಥವಾ ಬೇರೆ ಕಾರಣ ಇದೆಯಾ ಅನ್ನೋದು ತನಿಖೆಯಿಂದಷ್ಟೇ ಗೊತ್ತಾಗಬೇಕಿದೆ.

Next Story

RELATED STORIES