Top

ದನದ ವ್ಯಾಪಾರಿ ಸಂಶಯಾಸ್ಪದ ಸಾವಿನ ಪ್ರಕರಣ : ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ

ದನದ ವ್ಯಾಪಾರಿ ಸಂಶಯಾಸ್ಪದ ಸಾವಿನ ಪ್ರಕರಣ : ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
X

ಉಡುಪಿ : ದನದ ವ್ಯಾಪಾರಿ ಯ ಸಂಶಯಾಸ್ಪದ ಸಾವಿನ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಮೇ 30 ರಂದು ಉಡುಪಿಯ ಪೆರ್ಡೂರಿನಲ್ಲಿ ನಡೆದಿದ್ದ ಹುಸೈನಬ್ಬ ಸಾವು ಹಲವು ಅನುಮಾನಗಳಿಗೆ ಈಡಾಗಿತ್ತು. ಜಿಲ್ಲಾ ವರಿಷ್ಠಾಧಿಕಾರಿ ತಂಡ ಸತತ ಕಾರ್ಯಚರಣೆಯ ಮೂಲಕ ಮೂವರು ಆರೋಪಿಗಳ ಸಹಿತ ಇಬ್ಬರು ಪೊಲೀಸರ್ ಸಿಬ್ಬಂದಿಗಳನ್ನು ಬಂದಿಸಲಾಗಿತ್ತು. ಆದರೆ ಹಿಂದೂ ಸಂಘಟನೆಗಳು ಇದಕ್ಕೆ ತೀವ್ರ ವಿರೋಧ ವ್ಯಕ್ತ ಪಡಿಸಿ ತನಿಖೆಯನ್ನು ಸಿಐಡಿಗೆ ಒಪ್ಪಿಸುವಂತೆ ಮನವಿಮಾಡಿತ್ತು. ಇದೀಗ ಸರ್ಕಾರ ತನಿಖೆಯನ್ನು ಸಿಐಡಿಗೆ ಒಪ್ಪಿಸಿದೆ.

ಮಂಗಳೂರು ಜೋಕಟ್ಟೆಯ ದನದ ವ್ಯಾಪಾರಿ ಹುಸೇನಬ್ಬ ಸಂಶಯಾಸ್ಪದವಾಗಿ ಸಾವನ್ನಪ್ಪಿದ್ದರು. ಪ್ರಕರಣ ಸಂಬಂಧ ಹಿರಿಯಡ್ಕ ಎಸ್ಐ ಸಹಿತ 11 ಮಂದಿ ಬಂಧನವಾಗಿದ್ದು, ದನ ಸಾಗಾಟದ ವೇಳೆ ಹಲ್ಲೆ ಯಾಗಿತ್ತು ಎಂಬ ಆರೋಪದಡಿ ಕೇಸು ದಾಖಲಿಸಲಾಗಿತ್ತು. ಹಿಂದೂ ಸಂಘಟನೆಗಳ ಹಲ್ಲೆಯಿಂದ ಸಾವು ಸಂಭವಿಸಿದೆ ಎಂಬ ಆರೋಪ ಕೂಡ ದಾಖಲಾಗಿತ್ತು. ಸಾವಿಗೆ ಹೊಣೆಯಾಗಿಸಿ ಎಸ್ಐ ಸಹಿತ ಮೂವರು ಪೊಲೀಸರ ಬಂಧಿಸಿದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಕೇಸು ಕೈತಪ್ಪಿದೆ.

Next Story

RELATED STORIES