Top

ತಂದೆ ಮೇಲೆ ಸೇಡು ತೀರಿಸಿಕೊಳ್ಳಲು ಮಗಳಿಗೆ ಕ್ರೂರ ಶಿಕ್ಷೆ..!

ತಂದೆ ಮೇಲೆ ಸೇಡು ತೀರಿಸಿಕೊಳ್ಳಲು ಮಗಳಿಗೆ ಕ್ರೂರ ಶಿಕ್ಷೆ..!
X

[story-lines]

ಉತ್ತರಪ್ರದೇಶ: ವ್ಯಕ್ತಿಯೋರ್ವ ತಂದೆಗೆ ಬುದ್ಧಿ ಕಲಿಸಲು ಮಗಳ ಮೇಲೆ ಅತ್ಯಾಚಾರವೆಸಗಿದ ಹೀನಾಯ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಭೂಮಿ ವ್ಯವಹಾರಕ್ಕೆ ಸಂಬಂಧಪಟ್ಟಂತೆ, ಬಾಲಕಿಯ ತಂದೆ ಆರೋಪಿ ಚೋಟಾಲಾಲ್ ಗೆ ಹಣ ನೀಡುವುದು ಬಾಕಿ ಇತ್ತು.ಅದನ್ನು ಕೊಡದ ಕಾರಣ, ಸೇಡು ತೀರಿಸಿಕೊಂಡು ಆತನಿಗೆ ಬುದ್ಧಿ ಕಲಿಸುವ ಸಲುವಾಗಿ, ಆತನ ಮಗಳ ಮೇಲೆ ಅತ್ಯಾಚಾರವೆಸಗಿ ಆಕೆಯ ಕೊಲೆ ಮಾಡಿದ್ದಾನೆ.

ಉತ್ತರಪ್ರದೇಶದ ಲಾಖಿಂಪುರ್ ಖೇರಿ ಜಿಲ್ಲೆಯ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದ್ದು, 8 ವರ್ಷದ ಪರಿಶಿಷ್ಠ ಜಾತಿಯ ಬಾಲಕಿ ಮೇಲೆ ಅತ್ಯಾಚಾರ ನಡೆದಿದೆ.ಬಾಲಕಿ ಮನೆ ಮುಂದೆ ಆಡುತ್ತಿದ್ದಾಗ, ಆಕೆಯನ್ನ ಅಪಹರಿಸಿ ಕಬ್ಬಿನ ಗದ್ದೆಗೆ ಕರೆದೊಯ್ದು, ಅತ್ಯಾಚಾರವೆಸಗಿದ ನೀಚ, ಆಕೆಯ ಕತ್ತು ಹಿಸುಕಿ ಕೊಂದಿದ್ದಾನೆ.

ಇನ್ನು ಆರೋಪಿ ವಿರುದ್ಧ ಸೆಕ್ಷನ್ 302, 376 ಮತ್ತು ಸೆಕ್ಷನ್ 5/6 ಅಡಿಯಲ್ಲಿ ಮತ್ತು ಫೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಚೋಟೆಲಾಲ್ ಬಾಲಕಿಯ ನೆರೆಮನೆಯವನಾಗಿದ್ದು, ಈ ಹಿಂದೆ ಮೃತ ಬಾಲಕಿಯ ತಂದೆಯೊಂದಿಗೆ ಜಗಳ ಮಾಡಿಕೊಂಡು, ಹೊಡೆದಾಡಿಕೊಂಡಿದ್ದ. ಮತ್ತು ಈತನಿಗೆ ಭೂಮಿ ವಿಚಾರವಾಗಿ ಬಾಲಕಿಯ ತಂದೆಯೊಂದಿಗೆ ಜಗಳವಾಗಿತ್ತು. ಈ ಕಾರಣಕ್ಕಾಗಿ ಸೇಡು ತೀರಿಸಿಕೊಳ್ಳಲು, ಚೋಟೆಲಾಲ್ ಈ ನೀಚಕೃತ್ಯ ಮಾಡಿದ್ದಾನೆನ್ನಲಾಗಿದೆ.ಇನ್ನು ಈತನನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದು, ಆರೋಪಿ ತನ್ನ ತಪ್ಪನ್ನ ಒಪ್ಪಿಕೊಂಡಿದ್ದಾನೆ.

Next Story

RELATED STORIES