Top

ಗೌರಿ ಹತ್ಯೆ ಬಳಿಕ ನೆಕ್ಸ್ಟ್ ಟಾರ್ಗೆಟ್‌ ಯಾರಾಗಿದ್ದರು ಗೊತ್ತಾ.?

ಗೌರಿ ಹತ್ಯೆ ಬಳಿಕ ನೆಕ್ಸ್ಟ್ ಟಾರ್ಗೆಟ್‌ ಯಾರಾಗಿದ್ದರು ಗೊತ್ತಾ.?
X

ಬೆಂಗಳೂರು : ಗೌರಿ ಹತ್ಯೆ ಪ್ರಕರಣದಲ್ಲಿ ದಿನೇ ದಿನೇ ಸ್ಪೋಟಕ ಸುದ್ದಿಗಳು ಹೊರ ಬೀಳುತ್ತಿವೆ. ಎಸ್​ ಐ ಟಿ ಸ್ವಲ್ಪ ಯಾಮಾರಿದ್ರೂ ಮತ್ತೊಂದು ಹತ್ಯೆಗೆ ಸಾಕ್ಷಿಯಾಗ್ತಿತ್ತು ಬೆಂಗಳೂರು .. ಹೌದು ಗೌರಿ ಹತ್ಯೆಯ ಬಳಿಕ ಟಾರ್ಗೆಟ್​ ಆದ ಗಣ್ಯ ವ್ಯಕ್ತಿ ಯಾರು ಗೊತ್ತಾ ಡೀಟೇಲ್ಸ್​ ಮುಂದೆ ಓದಿ..

ಗೌರಿ ಹತ್ಯೆ ಬಳಿಕ ಮತ್ತೊಂದು ಭೀಕರ ಹತ್ಯೆ ನಡೆದು ಹೋಗುವುದರಲ್ಲಿತ್ತು. ಪಕ್ಕಾ ಸ್ಕೆಚ್​ ರೆಡಿ ಮಾಡಲು ಹೊಂಚು ಹಾಕಿತ್ತು ಟೀಂ. ಅದೃಷ್ಟಾವಶಾತ್​ ಎಸ್​ ಐ ಟಿ ಕೈಗೆ ಸಿಕ್ಕಿಬಿದ್ದಿದ್ದರಿಂದ ಹಾಕಿದ್ದ ಸ್ಕೆಚ್​ಗೆ ಕಲ್ಲು ಬಿದ್ದಿದೆ. ಅಂದ ಹಾಗೆ ಶಂಕಿತರು ಟಾರ್ಗೇಟ್​ ಮಾಡಿದ್ದು, ಸಾಹಿತಿ ಕೆ ಎಸ್​ ಭಗವಾನ್​ರನ್ನ.

ಪತ್ರಕರ್ತೆ ಗೌರಿ ಹತ್ಯೆ ಬಳಿಕೆ ಟಾರ್ಗೆಟ್‌ ಸಾಹಿತಿ ಕೆ ಎಸ್‌ ಭಗವಾನ್.?

ಗೌರಿ ಹತ್ಯೆಯ ಬಳಿಕ ನೆಕ್ಸ್ಟ್​ ಟಾರ್ಗೇಟ್​ ಆಗಿದ್ದು ಸಾಹಿತಿ ಕೆ ಎಸ್​ ಭಗವಾನ್.​ ಅಕಸ್ಮಾತ್​ ಪರಶುರಾಮ್​ ಆಂಡ್​ ಟೀಂ ಎಸ್​ ಐಟಿ ಗೆ ಸಿಗದೆ ಇದ್ದಲ್ಲಿ ಇನ್ನ್ಉ ಮೂರು ತಿಂಗಳಲ್ಲಿ ಭಗವಾನ್​ರನ್ನ ಹತ್ಯೆ ನಡೆಯಲಿತ್ತು ಅನ್ನೋ ಸ್ಪೋಟಕ ಮಾಹಿತಿಯನ್ನ ಶಂಕಿತ ಹಂತಕರು ಹೊರಗೆಡವಿದ್ದಾರೆ. ಅದೂ ಅಲ್ಲದೆ ಬಂಧಿತರಾಗಿರುವ ಆರು ಜನರು ಫೋನ್​ ಕಾಂಟ್ಯಾಕ್ಟ್​ ಬಿಟ್ಟರೆ ಮುಖ ಪರಿಚಯವೇ ಇರಲಿಲ್ಲವಂತೆ.

[story-lines]

ನವೀನ್‌ ಬಂಧನದ ನಂತ್ರ ಪರಶುರಾಮ್‌ ರಾಜಾರೋಷವಾಗಿ ಓಡಾಟ

ಈ ಹಿಂದೆ ನವೀನ್​ ಬಂಧಿತನಾಗಿದ್ದಾಗ ಯಾರನ್ನೋ ಅರೆಷ್ಟ್​ ಮಾಡಿರಬಹುದು ಅಂದುಕೊಂಡು ಪರಶುರಾಮ್​ ರಾಜಾರೊಷವಾಗಿ ತಿರುಗಾಡುತ್ತಿದ್ದ ಎನ್ನಲಾಗಿದೆ . ಸದ್ಯ ಸಿಕ್ಕಿಬಿದ್ದಿರುವ ಪರಶುರಾಮನೇ ಗೌರಿ ಹತಯ್ಯೆಯ ಲೀಡ್​ ವಹಿಸಿಕೊಂಡಿದ್ದ ಅನ್ನೋ ಬಲವಾದ ಅನುಮಾನ ವ್ಯಕ್ತ ವಾಗಿದ್ದು ಬೈಕ್​ನಲ್ಲಿ ಕರೆದೊಯ್ದಿರುವ ನಿಹಾಲ್​ @ದಾದ ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಕಾಯಿನ್‌ ಬೂತ್‌ ಕರೆಯಿಂದ ಸಿಕ್ಕಿಬಿದ್ದ ಆರೋಪಿಗಳು

ಇನ್ನು ಕೆ ಟಿ ನವೀನ್​ ಬಂಧನಕ್ಕೆ ಮುಂಚೆ ನವೀನ್​ಗೆ ಕಾಯಿನ್​ ಬೂತ್​ನಿಂದ ನಿರಂತರವಾಗಿ ಕರೆ ಬರುತ್ತಿತ್ತು. ಅದೆಲ್ಲವೂ ಕೂಡ ಕೋಡ್​ ವರ್ಡ್​ನಿಂದ ಕೂಡಿತ್ತು ಎಂಬ ಮಾಹಿತಿ ಎಸ್‌ಐಟಿಯಿಂದ ಹೊರಬಿದ್ದಿದೆ. ಈ ಕರೆಗಳನ್ನ ಮಾಡುತ್ತಿದ್ದಿದ್ದು ಸಿಕ್ಕಿಬಿದ್ದಿರುವ ಪ್ರವೀಣ್ ಮತ್ತು ಅಮೋಲ್​ ಕಾಳೆ ಅಮೀತ್​ ಮತ್ತು ಮನೋಹರ್​ ಎಂದು ಶಂಕಿತರು ಬಾಯಿಬಿಟ್ಟಿದ್ದಾರೆ.

ಅಂದಹಾಗೇ, ಗೌರಿ ಹತ್ಯೆಗೆ ಪರಶುರಾಮನೇ ಡೈರೆಕ್ಟ್​ ಕನೆಕ್ಷನ್​ ಇರುವ ಬಗ್ಗೆ ಶೇಖಡ 90ರಷ್ಟು ಪ್ರೂ ಆದರೂ ಅದನ್ನ ಸಾಕ್ಷಿಕರಿಸಲು ಸಾಕಷ್ಟು ಪುರಾವೆಗಳ ಅಗತ್ಯ ಇದೆ. ಸದ್ಯ ಬೈಕ್​ ರೈಡರ್​ಗಾಗಿ ಬಲೆ ಬೀಸಿರುವ ಎಸ್​ ಐಟಿ ತಂಡ, ಬಂಧಿಸುವ ಭರವಸೆ ವ್ಯಕ್ತ ಪಡಿಸಿದೆ.

ವರದಿ : ಅಭಿಷೇಕ್ ಜೈಶಂಕರ್, ಕ್ರೈಂ ಬ್ಯುರೋ, ಟಿವಿ5

Next Story

RELATED STORIES