Top

ಇನ್ಮುಂದೆ ರೈಲ್ವೆಯಲ್ಲಿ ಸಿಗುತ್ತದೆ ಉತ್ತಮ ಗುಣಮಟ್ಟದ ಆಹಾರ

ಇನ್ಮುಂದೆ ರೈಲ್ವೆಯಲ್ಲಿ ಸಿಗುತ್ತದೆ ಉತ್ತಮ ಗುಣಮಟ್ಟದ ಆಹಾರ
X

ರೈಲ್ವೆ ಆಹಾರಗಳು ಕಳಪೆ ಗುಣಮಟ್ಟದ್ದಾಗಿರುತ್ತದೆ ಎಂದು ದೂರುಗಳು ಹೆಚ್ಚಾದ ಕಾರಣಕ್ಕೆ ಸರ್ಕಾರ ಹೊಸದೊಂದು ನಿರ್ಣಯ ಕೈಗೊಂಡಿದೆ. ಕೇಂದ್ರ ಸಚಿವ ಪಿಯೂಶ್ ಗೋಯಲ್ ಈ ಬಗ್ಗೆ ಹೇಳಿಕೆ ನೀಡಿದ್ದು, ರೈಲ್ವೆಯಲ್ಲಿ ಪ್ರಯಾಣಿಸುವವರು ಸಾಮಾಜಿಕ ಜಾಲತಾಣದಲ್ಲಿ ರೈಲ್ವೆ ಪ್ರಯಾಣಿಕರಿಗೆ ನೀಡುವ ಆಹಾರವನ್ನ ಹೇಗೆ ತಯಾರಿಸುತ್ತಾರೆಂದು ಲೈವ್ ಆಗಿ ನೋಡಬಹುದು ಎಂದಿದ್ದಾರೆ.

ಪ್ರಯಾಣಿಕರು IRCTC ವೆಬ್‌ಸೈಟ್ ಗೆ ಹೋಗಿ ಆಹಾರ ತಯಾರಿಸುವ ಕ್ರಮವನ್ನು ನೋಡಬಹುದು. ಪ್ರಯಾಣಿಕರನ್ನು ಸೆಳೆಯಲು ಈ ಉಪಾಯ ಮಾಡಲಾಗಿದ್ದು, ಗುಣಮಟ್ಟದ ಆಹಾರವನ್ನು ರೈಲ್ವೆ ಇಲಾಖೆ ಪೂರೈಸಲಿದೆ.ಇನ್ನು ಈ ವೆಬ್‌ಸೈಟ್‌ನಲ್ಲಿ ದೆಹಲಿ, ಮುಂಬೈ, ಭುವನೇಶ್ವರದ ರೈಲ್ವೆ ವಿಭಾಗದಲ್ಲಿ ತಯಾರಿಸಲಾಗುವ ಆಹಾರ ಕ್ರಮವನ್ನು ತೋರಿಸಲಾಗುವುದು ಎಂದು ಪಿಯೂಶ್ ಗೋಯಲ್ ಹೇಳಿದ್ದಾರೆ.

ಅಲ್ಲದೇ ಆಹಾರ ತಯಾರಿಸುವ ಸ್ಥಳ ಶುಚಿಯಾಗಿಡಲಾಗುವುದು, ಅಲ್ಲದೇ ಆಹಾರ ತಯಾರಿಸುವವರೂ ಕೂಡ, ಸ್ವಚ್ಛತೆಯನ್ನು ಕಾಪಾಡಬೇಕು. ಯೂನಿಫಾರ್ಮನ್ನು ಹಾಕಿಕೊಂಡು ಅಡುಗೆ ತಯಾರಿಸಬೇಕು, ಹೀಗೆ ಹಲವಾರು ನಿಯಮಗಳನ್ನು ಮಾಡಲಾಗಿದೆ . ಅಲ್ಲದೇ ಸಮವಸ್ತ್ರ ಧರಿಸದೇ ಬಾಣಸಿಗ ಆಹಾರ ತಯಾರಿಸಿದರೆ, ಗುತ್ತಿಗೆದಾರರಿಗೆ ದೂರು ತಲುಪುತ್ತದೆ.ನಂತರ ಬಾಣಸಿನ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ ಎಂದು ಪಿಯೂಶ್ ಗೋಯಲ್ ಹೇಳಿದ್ದಾರೆ.

Next Story

RELATED STORIES