Top

ಫಿಟ್‌ನೆಸ್ ಚಾಲೆಂಜ್ ಕೊಡುವುದರಲ್ಲಿ ನಟಿಮಣಿಯರೇನು ಕಡಿಮೆ ಇಲ್ಲ

ಫಿಟ್‌ನೆಸ್ ಚಾಲೆಂಜ್ ಕೊಡುವುದರಲ್ಲಿ ನಟಿಮಣಿಯರೇನು ಕಡಿಮೆ ಇಲ್ಲ
X

ಹಮ್ ಫಿಟ್ ಹೈ ತೋ ಇಂಡಿಯಾ ಫಿಟ್ ಎಂಬ ಅಭಿಯಾನವು ಎಲ್ಲೆಡೆ ಜೋರಾಗಿದೆ.. ಈ ಹಿಂದೆ ಸ್ಯಾಂಡಲ್​ವುಡ್​ ನಟರು ಒಬ್ಬರಿಗೊಬ್ಬರು ಫಿಟ್​ನೆಸ್​ ಚಾಲೆಂಜ್​ ಕೊಡುತ್ತಿದ್ದರು.. ಇದೀಗ ನಟಿ ಮಣಿಯರು ಕೂಡ ಈ ಫಿಟ್​ನೆಸ್​ ಚಾಲೆಂಜ್​ ಕೈಗೆತ್ತಿಕೊಳ್ಳುತ್ತಿದ್ದಾರೆ..

ಈ ಫಿಟ್​ನೆಸ್​ ಚಾಲೆಂಜ್​ನ ಅಭಿನಯ ಚಕ್ರವರ್ತಿ ಸುದೀಪ್​ ಶುರು ಮಾಡಿ, ರಾಕಿಂಗ್​ ಸ್ಟಾರ್​ ಯಶ್​, ಪವರ್​ ಸ್ಟಾರ್​ ಪುನೀತ್​ ಅವರಿಗೆ ಚಾಲೆಂಜ್​ ಸ್ವೀಕರಿಸುವಂತೆ ಹೇಳಿದ್ದರು.. ಇನ್ನು ಇದರ ಮುಂದುವರಿದ ಭಾಗದಂತೆ ಸ್ಯಾಂಡಲ್​ವುಡ್​ನ ನಟಿಮಣಿಯರು ಕೂಡ ಈ ಫಿಟ್​ನೆಸ್​ ಚಾಲೆಂಜ್​ ಸ್ವೀಕರಿಸುತ್ತಿದ್ದಾರೆ..

ಟಗರು ಚಿತ್ರದ ನಾಯಕಿ ಮಾನ್ವಿತಾ ಹರೀಶ್​ ತಾವು ಜಿಮ್​ ಮಾಡುತ್ತಿರುವ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್ ಮಾಡಿ ಧನಂಜಯ, ವಸಿಷ್ಠ ಸಿಂಹ, ಆಶಿಕಾ ರಂಗನಾಥ್​, ಶ್ರದ್ಧಾ ಶ್ರೀನಾಥ್​ಗೆ ಚಾಲೆಂಜ್​ ಮಾಡಿದ್ದಾರೆ..

ಇತ್ತ ಕಡೆ ಮಾಸ್ಟರ್​ ಪೀಸ್​ ಬೆಡಗಿ ಕೂಡ 15 ದಿನಗಳಿಂದ ಬಿಟ್ಟಿದ್ದ ವರ್ಕೌಟ್​ನ ಶುರು ಮಾಡಿದ್ದು, ಅವರೂ ಕೂಡ ಜಿಮ್​ನಲ್ಲಿ ಬೆವರಿಳಿಸುತ್ತಿರುವ ವೀಡಿಯೋ ಅಪ್​ಲೋಡ್​ ಮಾಡಿ ಮನೋರಂಜನ್​ ರವಿಚಂದ್ರನ್​, ಕಿರಿಕ್​ ಹುಡುಗಿ ರಶ್ಮಿಕಾ ಮಂದಣ್ಣ ಹಾಗೂ ಪ್ರಣೀತಾ ಅವರಿಗೆ ಚಾಲೆಂಜ್​ ಮಾಡಿದ್ಧಾರೆ.ತಾರೆಯರು ಇಂತಹ ಫಿಟ್​ನೆಸ್​ ಚಾಲೆಂಜ್​ಗಳನ್ನ ಕೈಗೆತ್ತಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳಿಗು ಫಿಟ್​ ಆಗಿರಿ ಎಂಬ ಸಂದೇಶವನ್ನ ಸಾರುತ್ತಿದ್ದಾರೆ.. ​

Next Story

RELATED STORIES