Top

ಕುಮಾರಸ್ವಾಮಿಗೆ ಏನೆಂದು ಚಾಲೆಂಜ್ ಮಾಡಿದ್ದಾರೆ ಗೊತ್ತಾ ನರೇಂದ್ರ ಮೋದಿ..?

ಕುಮಾರಸ್ವಾಮಿಗೆ ಏನೆಂದು ಚಾಲೆಂಜ್ ಮಾಡಿದ್ದಾರೆ ಗೊತ್ತಾ ನರೇಂದ್ರ ಮೋದಿ..?
X

[story-lines]

ಕೇಂದ್ರ ಸಚಿವ ರಾಜವರ್ಧನ್ ಸಿಂಗ್ ರಾಥೋರ್, ಕೆಲ ದಿನಗಳ ಹಿಂದೆ ಹಮ್ ಫಿಟ್ ಹೈ ತೋ ಇಂಡಿಯಾ ಫಿಟ್ ಎಂಬ ಅಭಿಯಾನವನ್ನು ಶುರುಮಾಡಿ, ಹಲವರಿಗೆ ಚಾಲೆಂಜ್ ನೀಡಿದ್ದರು. ಇವರ ಫಿಟ್ ನೆಸ್ ಚಾಲೆಂಜನ್ನ ಸ್ವೀಕರಿಸಿದವರು, ಚಾಲೆಂಜನ್ನ ಪೂರ್ತಿಗೊಳಿಸಿ, ಬೇರೆಯವರಿಗೂ ಈ ಚಾಲೆಂಜ್ ನೀಡಿದರು.

ಕ್ರಿಕೆಟಿಗ ವಿರಾಟ್ ಕೊಹ್ಲಿ, ನಟ ಹೃತಿಕ್ ರೋಷನ್, ಬಿಜೆಪಿ ಮುಖಂಡ ಮನೋಜ್ ತಿವಾರಿ, ಕನ್ನಡದ ನಟರಾದ ಸುದೀಪ್, ಯಶ್, ಪುನೀತ್ ರಾಜಕುಮಾರ್ ಹೀಗೆ ಹಲವರು ಫಿಟ್ ನೆಸ್ ಚಾಲೆಂಜನ್ನ ಸ್ವೀಕರಿಸಿ, ಸಾಮಾಜಿಕ ಜಾಲತಾಣದಲ್ಲಿ ತಮ್ಮ ಕಸರತ್ತಿನ ವಿಡಿಯೋವನ್ನ ಹರಿಬಿಟ್ಟಿದ್ದರು.

ಹೀಗೆ ಈ ಚಾಲೆಂಜ್ ಚೈನ್ ಬೆಳೆದು, ಸದ್ಯ ಪ್ರಧಾನಿ ಮೋದಿ ನಮ್ಮ ಕರ್ನಾಟಕ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರಿಗೆ ಫಿಟ್ ನೆಸ್ ಚಾಲೆಂಜ್ ಹಾಕಿದ್ದಾರೆ. ಹೌದು ಟ್ವೀಟ್ ಮೂಲಕ ಪ್ರಧಾನಿ ಮೋದಿ,ಹೆಚ್.ಡಿ.ಕುಮಾರಸ್ವಾಮಿಯವರಿಗೆ ಚಾಲೆಂಜ್ ಹಾಕಿದ್ದಾರೆ. ಹೆಚ್ಡಿಕೆಗೆ ಅಷ್ಟೇ ಅಲ್ಲದೇ, ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಪದಕ ಗೆದ್ದು ಬಂದ ಆಟಗಾರಿಗೂ ಮೋದಿ ಚಾಲೆಂಜ್ ಹಾಕಿದ್ದಾರೆ. ಇಷ್ಟೇ ಅಲ್ಲದೇ, 40 ವರ್ಷ ಮೇಲ್ಪಟ್ಟ ಐಪಿಎಸ್ ಅಧಿಕಾರಿಗಳಿಗೂ ಮೋದಿ ಫಿಟ್‌ನೆಸ್ ಚಾಲೆಂಜ್ ಹಾಕಿದ್ದಾರೆ.

ಇನ್ನು ಪ್ರಧಾನಿ ಮೋದಿಯವರ ಟ್ವೀಟ್‌ಗೆ ರಿಟ್ವೀಟ್‌ ಮಾಡಿದ ಹೆಚ್.ಡಿ.ಕುಾಮರಸ್ವಾಮಿ, ನನ್ನ ಆರೋಗ್ಯದ ಕುರಿತು ನಿಮಗಿರುವ ಕಾಳಜಿಗೆ ಧನ್ಯವಾದ. ಯಾವುದೇ ಕೆಲಸ ಮಾಡಲು ಫಿಸಿಕಲ್ ಫಿಟ್ನೆಸ್ ಅಗತ್ಯ. ದಿನನಿತ್ಯದ ನನ್ನ ಕರ್ಮಗಳಲ್ಲಿ ಯೋಗವನ್ನೂ ಸೇರಿಸಿದ್ದೇನೆ. ಅದಕ್ಕಿಂತಲೂ ನಾನು ಅಭಿವೃದ್ಧಿಯ ಫಿಟ್ನೆಸ್ ಕಾಯ್ದುಕೊಳ್ಳುವ ಕನಸಿದೆ. ಅದಕ್ಕೆ ನಿಮ್ಮ ಸಪೋರ್ಟ್ ಅಗತ್ಯ ಇದೆ ಎಂದು ಪರೋಕ್ಷವಾಗಿ ಮೋದಿಯ ಫಿಟ್ನೆಸ್ ಟ್ವೀಟ್ ಗೆ ಟಾಂಗ್ ಕೊಟ್ಟಿದ್ದಾರೆ.

Next Story

RELATED STORIES