Top

ರಷ್ಯಾದಲ್ಲಿ ಫುಟ್ಬಾಲ್​​ ಲೀಲೆ..!

ರಷ್ಯಾದಲ್ಲಿ ಫುಟ್ಬಾಲ್​​  ಲೀಲೆ..!
X

ಜೀವನ್, ಅಸೋಸಿಯೇಟ್ ಎಡಿಟರ್, ಟಿವಿ5 ಬೆಂಗಳೂರು

750 ಕೋಟಿ ವಿಶ್ವದ ಜನಸಂಖ್ಯೆ. ಈ ಪೈಕಿ ಫುಟ್ಬಾಲ್​​ ನೋಡುವವರು ಸರಿಸುಮಾರು 375 ಕೋಟಿಗಿಂತಲೂ ಅಧಿಕ. ಹಾಗೂ ಹೀಗೂ ಲೆಕ್ಕಾಚಾರ ಹಾಕಿದ್ರೆ ವಿಶ್ವದ ಸುಮಾರು ಶೇಕಡಾ50ಕ್ಕಿಂತಲೂ ಅಧಿಕ ಜನ ಫುಟ್ಬಾಲ್​​ ಆಟಕ್ಕೆ ಫ್ಯಾನ್ಸ್​. ಈಗ ಬ್ಯಾಲೇ ದೇಶ ರಷ್ಯಾದಲ್ಲಿ ಫುಟ್ಬಾಲ್​​ನ ಲೀಲೆ. 21 ನೇಆವೃತ್ತಿಯ ಫುಟ್ಬಾಲ್​ ಮಹಾಸಮರಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಾಸ್ಕ್ವಾ ನದಿ ತೀರದ ಲುಜ್ನಿಕಿ ಮೈದಾನದಲ್ಲಿ ಮೊದಲ ಸಮರ. ಆತಿಥೇಯ ರಷ್ಯಾ ಮತ್ತು ಸೌದಿ ಅರೇಬಿಯಾ ಲುಜ್ನಿಕಿ ಮೈದಾನದಲ್ಲಿ ಆಟಕ್ಕಿಳಿಯುವ ಮೂಲಕ ಫುಟ್ಬಾಲ್​​ ಹಬ್ಬಕ್ಕೆ ಚಾಲನೆ ಸಿಗಲಿದೆ. ಫುಟ್ಬಾಲ್​ ವಿಶ್ವಕಪ್​ ಇತಿಹಾಸದಲ್ಲೇ ರಷ್ಯಾ ಆಯೋಜಿಸಿರುವ ಈ ಫುಟ್ಬಾಲ್​​ ಹಬ್ಬ ದುಬಾರಿ ಹಬ್ಬ ಅನ್ನುವ ಖ್ಯಾತಿ ಪಡೆದುಕೊಳ್ಳಲಿದೆ.

[story-lines]

32 ತಂಡಗಳು: 8 ಗುಂಪುಗಳು

ರಷ್ಯಾದಲ್ಲಿ ನಡೆಯುವ ಫಿಫಾ ಫೆಸ್ಟಿವಲ್​ನಲ್ಲಿ 32 ತಂಡಗಳು ಅಖಾಡಕ್ಕೆ ಇಳಿಯಲಿವೆ. 32 ದಿನದ ಆಟ ನಡೆಯಲಿದೆ. ಒಟ್ಟು ವಿವಿಧ ತಂಡಗಳಿಂದ 736 ಆಟಗಾರರು ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ. 21ನೇ ಆವೃತ್ತಿಯ ಫುಟ್ಬಾಲ್​ ಹಬ್ಬದಲ್ಲಿ ನಡೆಯುವ ಒಟ್ಟು ಪಂದ್ಯ 64.

ಯಾರು ಫೆವರೇಟ್​..?

ಈ ಪ್ರಶ್ನೆಗೆ ಒಬ್ಬೊಬ್ಬರಲ್ಲೂ ಒಂದೊಂದು ಉತ್ತರ. ಎಲ್ಲರಿಗೂ ಫೈನಲ್​ ಪ್ರವೇಶ ಪಡೆಯುವ ಕನಸು. ಆದ್ರೆ ಚಾಂಪಿಯನ್​​ ಆಗೋದು ಒಂದೇ ತಂಡ. ಫೈನಲ್​ ಪ್ರವೇಶ ಮಾಡೋದು 2 ತಂಡ. ಹೀಗಾಗಿ ಹೋರಾಟಕ್ಕೆ ಅಂಗಣ ಸಜ್ಜಾಗಿದೆ. ಯಾರ ತಾಕತ್ತು ಏನು ಅನ್ನೋದು ಗೊತ್ತಾಗಲಿದೆ. ಹಾಲಿ ಚಾಂಪಿಯನ್​ ಜರ್ಮನಿ ಈ ಬಾರಿಯೂ ಕಪ್​ ಗೆಲ್ಲುವ ಫೆವರೀಟ್​ ಟೀಮ್​. ಹಾಲಿ ರನ್ನರ್​ ಅಪ್​ ಅರ್ಜೆಂಟೈನಾ, ಮಾಜಿ ಚಾಂಪಿಯನ್​ ಬ್ರೆಜಿಲ್​, ಸ್ಪೇನ್​​ ಕೂಡ ತಾಕತ್ತ ಪ್ರದರ್ಶಿಸಲು ಸಜ್ಜಾಗಿದೆ. ಪೋರ್ಚುಗಲ್​, ನೆದರ್ಲೆಂಡ್​ ಮತ್ತು ಇಟಲಿ ಕೂಡ ಫೈನಲ್​ ಕನಸು ಇಟ್ಟುಕೊಂಡಿದೆ. ಆತಿಥೇಯ ರಷ್ಯಾ ಫೆವರೀಟ್​ ಅಲ್ಲದೇ ಇದ್ರೂ ಡಾರ್ಕ್​ ಹಾರ್ಸ್​.

ಚೆಂಡು ಯಾವುದು..?

ಫುಟ್ಬಾಲ್​ನಲ್ಲಿ ಯಾರು ಗೆಲ್ತಾರೆ, ಯಾರು ಸೋಲ್ತಾರೆ ಅನ್ನೋದು ಎಷ್ಟು ಚರ್ಚೆಯಾಗುತ್ತೋ, ಅಷ್ಟೇ ಚರ್ಚೆ ಬಳಕೆಯಾಗುವ ಚೆಂಡಿನ ಬಗ್ಗೆ ನಡೆಯುತ್ತದೆ. ರಷ್ಯಾದಲ್ಲಿ ಈ ಬಾರಿ ಬಳಕೆಯಾಗುವ ಚೆಂಡು ಅಡಿಡಾಸ್​ ಟೆಲ್​ಸ್ಟಾರ್​. ಇದು ಸುಮಾರು 215 ಗ್ರಾಂ ತೂಕ ಹೊಂದಿದೆ. ಅಷ್ಟೇ ವಿವಿಧ ಪರೀಕ್ಷೆಗಳಲ್ಲಿ ಪಾಸ್​ ಆಗಿದೆ. ವಿವಿಧ ದೇಶದ, ವಿವಿಧ ಕ್ಲಬ್​ಗಳ ಸುಮಾರು 600 ಆಟಗಾರರು ಈ ಚೆಂಡನ್ನು ಪರೀಕ್ಷೆಗೆ ಒಳಪಡಿಸಿ, ಆಡಲು ಬಳಸಬಹುದು ಅನ್ನುವ ಗ್ರೀನ್​ ಸಿಗ್ನಲ್​ ನೀಡಿದ್ದಾರೆ.

[story-lines]

ಹೇಗಿರುತ್ತೆ ಟ್ರೋಫಿ..?

  • ತೂಕ: 6.1 ಕೆ.ಜಿ.
  • ಎತ್ತರ: 36.8 ಸೆಂ ಮೀ
  • 18 ಕ್ಯಾರೆಟ್​​- ಟ್ರೋಫಿಗೆ ಬಳಸಿರುವ ಚಿನ್ನದ ಗುಣಮಟ್ಟ
  • ₹ 67,47,5000 - ಟ್ರೋಫಿಯ ಪ್ರಸ್ತುತ ಮೌಲ್ಯ

ಸೂಪರ್​ ಸ್ಟಾರ್​ಗಳು

1. ಲಿಯೊನೆಲ್​ ಮೆಸ್ಸಿ- ಅರ್ಜೆಂಟೈನಾ- ಫಾರ್ವರ್ಡ್​ ಪ್ಲೇಯರ್​​- 30 ವರ್ಷ- 3ನೇ ವಿಶ್ವಕಪ್​

2. ಕ್ರಿಶ್ಚಿಯಾನೋ ರೊನಾಲ್ಡೋ- ಪೋರ್ಚುಗಲ್​- ಫಾರ್ವರ್ಡ್​ ಪ್ಲೇಯರ್- 33 ವರ್ಷ- 3ನೇ ವಿಶ್ವಕಪ್​

3. ನೇಯ್ಮಾರ್​- ಬ್ರೆಜಿಲ್​- 26 ವರ್ಷ-ಫಾರ್ವರ್ಡ್​ ಪ್ಲೇಯರ್​-​ 2ನೇ ವಿಶ್ವಕಪ್​

4. ಥಾಮಸ್​ ಮುಲ್ಲರ್​​​-28 ವರ್ಷ- ಜರ್ಮನಿ-ಮಿಡ್ ಫೀಲ್ಡರ್​- 2ನೇ ವಿಶ್ವಕಪ್​

5. ಲೂಯಿಸ್​​ ಸ್ವಾರೆಜ್​- ಉರುಗ್ವೆ- ಫಾರ್ವರ್ಡ್​ ಪ್ಲೇಯರ್​- 2ನೇ ವಿಶ್ವಕಪ್​

ಖರ್ಚು-ವೆಚ್ಚದ ಲೆಕ್ಕ..!

ಫಿಫಾ ವಿಶ್ವಕಪ್​​ ಆಯೋಜನೆ ಮಾಡುವುದು ತಮಾಷೆ ಮಾತಲ್ಲ. ಅದಕ್ಕೆ ದುಡ್ಡು ಕಾಸಿನ ಲೆಕ್ಕಾಚಾರ ಬೇಕೇ ಬೇಕು. ಅದು ಏನೂ ಸಾಮಾನ್ಯ ಲೆಕ್ಕವಲ್ಲ. ಯಾರ್ಯಾರಿಗೆ ಏನೇನು ಸಿಗುತ್ತೆ ಅನ್ನುವ ಲೆಕ್ಕಾಚಾರ ನೋಡಿದರೆ ಸಾಕು, ಫಿಫಾ ಟೂರ್ನಿಯ ಅಬ್ಬರ ಏನು ಅನ್ನುವ ಐಡಿಯಾ ಸಿಕ್ಕಿಬಿಡುತ್ತದೆ.

⦁ ಫಿಫಾ ಆಯೋಜನೆಗೆ ತಗುಲುವ ವೆಚ್ಚ- 64415 ಕೋಟಿ

⦁ ಒಟ್ಟು ಬಹುಮಾನ ಮೊತ್ತ- 2694.80 ಕೋಟಿ

⦁ 255.98 ಕೋಟಿ- ಚಾಂಪಿಯನ್​

⦁ 188.62- ರನ್ನರ್​ ಅಪ್​

⦁ 161.67 ಕೋಟಿ- 3ನೇ ಸ್ಥಾನೊ

⦁ 148.20- ನಾಲ್ಕನೇ ಸ್ಥಾನ

⦁ 107.80- 5ನೇ ಸ್ಥಾನದಿಂದ 8ನೇ ಸ್ಥಾನ ಪಡೆದ ತಂಡಗಳಿಗೆ (431.13 ಕೋಟಿ)

⦁ 80.85 ಕೋಟಿ- 9 ರಿಂದ 16ನೇ ಸ್ಥಾನದ ಪಡೆದ ತಂಡಗಳಿಗೆ (646.80 ಕೋಟಿ)

⦁ 53. 90- 17ರಿಂದ- 32ನೇ ಸ್ಥಾನ ಪಡೆದ ತಂಡಗಳಿಗೆ (862.40 ಕೋಟಿ)

12 ಕ್ರೀಡಾಂಗದಲ್ಲಿ ರಣಾಂಗಣ ಸಜ್ಜು

1. ಲುಜ್ನಿಕಿ- ಆಸನ ಸಾಮರ್ಥ್ಯ- 81000

2. ಸ್ಪಾರ್ಟಕ್​​- ಆಸನ ಸಾಮರ್ಥ್ಯ- 45360

3. ಸೇಂಟ್​ ಪೀಟರ್ಸ್​ಬರ್ಗ್​- ಆಸನ ಸಾಮರ್ಥ್ಯ- 68134

4. ಫಿಶ್ತ್​- ಆಸನ ಸಾಮರ್ಥ್ಯ- 47659

5. ಸಮರ- ಆಸನ ಸಾಮರ್ಥ್ಯ-44918

6. ರಾಸ್ಟೋವ್​ ಅರೆನಾ- ಆಸನ ಸಾಮರ್ಥ್ಯ- 45000

7. ನಿಜ್ನಿನೋವ್ಗೋರೋಡ್​- ಆಸನ ಸಾಮರ್ಥ್ಯ-44899

8. ಮಾರ್ಡೋವಿಯಾ ಅರೆನಾ- ಆಸನ ಸಾಮರ್ಥ್ಯ- 44442

9. ಎಕಟರಿನ್ಬರ್ಗ್​- ಆಸನ ಸಾಮರ್ಥ್ಯ-35695

10. ಕಲಿನಿಂಗ್ರಾಡ್​​- ಆಸನ ಸಾಮರ್ಥ್ಯ-35212

11. ವೊಲ್ಗೋಗ್ರಾಡ್​​- ಆಸನ ಸಾಮರ್ಥ್ಯ-45568

12. ಕಜಾನ್​ ಅರೆನಾ- ಆಸನ ಸಾಮರ್ಥ್ಯ- 45379

Next Story

RELATED STORIES