ಸ್ವಿಜರ್ಲ್ಯಾಂಡ್ನಲ್ಲಿ ದೀಪಿಕಾ-ರಣ್ವೀರ್ ಮದುವೆ ಮಂಟಪ..!!

ದೀಪಿಕಾ ಪಡುಕೋಣೆ.., ಈಕೆ ಕನ್ನಡನಾಡಿನಲ್ಲಿ ಬೆಳೆದ ಹುಡಗಿ, ಈಗ ಬಾಲಿವುಡ್ನ ಸ್ಟಾರ್ ಬೆಡಗಿಯಾಗಿದ್ದಾಳೆ. ಒಬ್ಬ ಸ್ಟಾರ್ ನಟನಿಗಿರೋ ನೇಮೂ ಫೇಮೂ ಡಿಪ್ಪಿಗಿದೆ.. ಒಂದೇ ಮಾತನಲ್ಲಿ ಹೇಳಬೇಕಂದ್ರೆ ದೀಪಿಕಾ ಈಗ ಬಾಲಿವುಡ್ ಬಾಕ್ಸಾಫೀಸ್ ಪದ್ಮಾವತಿ.. ಇಂತಿಪ್ಪ ದೀಪಿಕಾ ಎಟ್ ಪ್ರೆಸೆಂಟ್ ತಮ್ಮ ಸಿನಿಮಾಗಳಿಗಿಂತ ಮದುವೆ ವಿಚಾರದಿಂದಲೇ ಸದ್ದು ಗದ್ದಲ ಮಾಡುತ್ತಿದ್ದಾರೆ..
ರಣ್ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಪ್ರೇಮಾಯಣ ಈಗ ಮದುವೆಯ ಮಂಟಪದವರೆಗೂ ಬಂದು ನಿಂತಿದೆ. ಕೆಲ ಮೂಲಗಳ ಪ್ರಕಾರ ಡಿಪ್ಪಿ _ರಣ್ವೀರ್ ಮ್ಯಾರೇಜ್ ಈ ವರ್ಷದ ನವೆಂಬರ್ 19ಕ್ಕೆ ಫಿಕ್ಸ್ ಆಗಿದೆ ಎನ್ನಲಾಗುತ್ತಿದೆ. ಆದ್ರೆ ಇದೇ ಅಧಿಕೃತ ಎಂದು ದೀಪಿಕಾ ಆಗಲಿ, ರಣ್ವೀರ್ ಆಗಲಿ ಎಲ್ಲಿಯೂ ಹೇಳಿಲ್ಲ.. ಆದ್ರೆ ದೊಡ್ಡ ಮಾಧ್ಯಮ ಮೂಲಗಳೇ ನವೆಂಬರ್ 19ಕ್ಕೆ ದೀಪಿಕಾ-ರಣ್ವೀರ್ ಶಾದಿ ಘಂಟಗೋಷವಾಗಿ ಹೇಳುತ್ತಿವೆ.
ಈಗ ಕಹಾನಿ ಮೇ ಟ್ವಿಸ್ಟ್ ಎನಪ್ಪ ಅಂದ್ರೆ ದೀಪಿಕಾ ರಣ್ವೀರ್ ಮದುವೆಗೆ ಶ್ರೀಮಂತ ದೇಶವೂಂದು ಆಹ್ವಾನ ಕೊಟ್ಟಿದೆಯಂತೆ. ಹೌದು ಭೂ ಲೋಕದ ಸ್ವರ್ಗದಂತಿರುವ ಸ್ವಿಜರ್ಲ್ಯಾಂಡ್ ದೇಶದಿಂದ ಮಾಸ್ತಾನಿ ಜೋಡಿಗೆ ಬಿಗ್ ಆಫರ್ ಕೊಟ್ಟಿದೆ. ಬನ್ನಿ ನಮ್ಮ ದೇಶದಲ್ಲೇ ಮದುವೆಯಾಗಿ ನಾವು ನಿಮಗೆ ಎಲ್ಲಾರೀತಿಯ ಸವಲತ್ತುಗಳನ್ನು ಒದಗಿಸುತ್ತೇವೆ ಎಂದಿದೆ.
ಈ ಜೋಡಿಯ ಹವಾ ಎಷ್ಟರ ಮಟ್ಟಿಗಿದೆ ಅನ್ನೋದು ಸ್ವಿಜರ್ಲ್ಯಾಂಡ್ನ ದೇಶಕ್ಕೆ ಗೊತ್ತು. ಏಕೆಂದ್ರೆ ದೀಪಿಕಾಳ ಪೋರ ರಣ್ವೀರ್ ಸಿಂಗ್ ಸ್ವಿಜರ್ಲ್ಯಾಂಡ್ನ ಪ್ರವಾಸೋದ್ಯಮ ಇಲಾಖೆಯ ರಾಯಭಾರಿ. ಈಗಾಗಲೇ ಯಾವುದೇ ರೀತಿಯ ಸಿನಿಮಾಗಳನ್ನು ಒಪ್ಪಿಕೊಳ್ಳದ ದೀಪಿಕಾ ಮದುವೆ ತಯಾರಿಲ್ಲಿದ್ದಾರೆ. ಈ ನವೆಂಬರ್ 19ಕ್ಕೆ ಮದುವೆ ಪಕ್ಕಾ ಎನ್ನಲಾಗುತ್ತಿದೆ. ಒಂದು ವೇಳೆ ಸ್ವೀಜರ್ಲ್ಯಾಂಡ್ನಲ್ಲಿ ಡಿಪ್ಪಿ_ರಣ್ವೀರ್ ಮದುವೆ ಫಿಕ್ಸ್ ಆದ್ರೆ ಇಡೀ ಬಾಲಿವುಡ್ ಮಂದಿ ಭೂ ಲೋಕದ ಸ್ವರ್ಗ ಸ್ವೀಜರ್ಲ್ಯಾಂಡ್ಗೆ ಹಾರುವುದು ಗ್ಯಾರಂಟಿ..