ಬೆಂಗಳೂರಿನಲ್ಲಿ ಅಫ್ಘಾನ್ ತಂಡದ ಟೆಸ್ಟ್ ಪಾದರ್ಪಣೆ

ಇದು ಐತಿಹಾಸಿಕ ಪಂದ್ಯ. ಅಂತರಾಷ್ಟ್ರೀಯ ಕ್ರಿಕೆಟ್ ಕೂಸು ಅಫ್ಘಾನಿಸ್ತಾನ ಚೊಚ್ಚಲ ಟೆಸ್ಟ್ ಆಡುತ್ತಿದೆ. ಎದುರಾಳಿ ಟೀಮ್ ಇಂಡಿಯಾ. ಬೆಂಗಳೂರಿನ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. ಚೊಚ್ಚಲ ಟೆಸ್ಟ್ ಪಂದ್ಯ ಆಡುತ್ತಿದೆ ಅಫ್ಘಾನಿಸ್ತಾನ ತಂಡ ನಂಬರ್ ವನ್ ತಂಡಕ್ಕೆ ಚಾಲೆಂಜ್ ಹಾಕುಲ ಕನಸು ಕಾಣ್ತಿದೆ. ಮೊದಲ ಬಾರಿಗೆ ಟೆಸ್ಟ್ ಪಂದ್ಯ ಆಡುತ್ತಿರುವ ಅಫ್ಘಾನಿಸ್ತಾನ ತಂಡಕ್ಕೆ ಇದು ಸ್ಮರಣಿಯ ಪಂದ್ಯವಾದ್ರೆ ಟೀಂ ಇಂಡಿಯಾ ಗೆಲುವಿನ ಯಾತ್ರೆ ಮುಂದುವರೆಸುವ ಉತ್ಸಾಹದಲ್ಲಿದೆ.
ಬಾಂಗ್ಲಾವನ್ನು ಸೋಲಿಸಿದ್ದೆ ಅಫ್ಘಾನ್ ತಂಡ
ಅಜಿಂಕ್ಯಾ ರಹಾನೆ ಪಡೆ ವಿರುದ್ಧ ಅಫ್ಘಾನ್ ತಂಡವನ್ನು ಎಚ್ಚರಿಕೆಯಿಂದ ಎದುರಿಸಬೇಕಿದೆ. ಅಫ್ಘನ್ನರು ಇತ್ತೀಚೆಗೆ ಬಾಂಗ್ಲಾ ವಿರುದ್ಧ ಟಿ20 ಸರಣಿ ಗೆದ್ದು ಐತಿಹಾಸಿಕ ಟೆಸ್ಟ್ಕ್ಕೆ ದೊಡ್ಡ ಸಿದ್ಧತೆ ಮಾಡಿಕೊಂಡಿದ್ದಾರೆ. ರಶೀದ್ ಖಾನ್ ಮತ್ತು ಮೊಹ್ಮದ್ ನಬಿ ಅಫ್ಘಾನ್ ತಂಡದ ಟ್ರಂಪ್ ಕಾರ್ಡ್ ಆಗಿದ್ದರೆ, ಉಳಿದವರಿ ಮೊದಲ ಪಂದ್ಯದಲ್ಲಿ ಏನಾದ್ರೂ ಸಾಹಸ ಮಾಡಬೇಕು ಅನ್ನುವ ಲೆಕ್ಕಾಚಾರದಲ್ಲಿದ್ದಾರೆ.
ರಹಾನೆ ಟೀಮ್ ಇಂಡಿಯಾ ನಾಯಕ
ಅಫ್ಘಾನ್ ಟೆಸ್ಟ್ ಮೂಲಕ ಕಮ್ ಬ್ಯಾಕ್ ತಂಡಕ್ಕೆ ಮಾಡಿರುವ ತಮಿಳುನಾಡು ಬ್ಯಾಟ್ಸ್ ಮನ್ ದಿನೇಶ್ ಕಾರ್ತಿಕ್, ಉಮೇಶ್ ಯಾದವ್ ಮತ್ತು ಕರುಣ್ ನಾಯರ್ ಖಾಯಂ ಸ್ಥಾನಕ್ಕಾಗಿ ಹೋರಾಟ ಮಾಡಲಿದ್ದಾರೆ. ಡೆಲ್ಲಿ ಪೇಸರ್ ಉಮೇಶ್ ಯಾದವ್ ಇತ್ತಿಚೆಗೆ ಮುಕ್ತಯವಾದ ಐಪಿಎಲ್ನಲ್ಲಿ ಆರ್ಸಿಬಿ ಪರ ಸಾಲಿಡ್ ಬೌಲಿಂಗ್ ಮಾಡಿದ್ದರು. ಭುವನೇಶ್ವರ್ ಕುಮಾರ್ ಮತ್ತು ಜಸ್ಪ್ರೀತ್ ಬೂಮ್ರಾ ಟೆಸ್ಟ್ ನಲ್ಲಿ ಮಿಂಚಿದ್ದರಿಂದ ಉಮೇಶ್ಗೆ ಟೆಸ್ಟ್ ನಲ್ಲಿ ಚಾನ್ಸ್ ಸಿಗಲಿಲ್ಲ.
ಇನ್ನು ದಿನೇಶ್ ಕಾರ್ತಿಕ್ 8 ವರ್ಷಗಳ ನಂತರ ಟೆಸ್ಟ್ ಗೆ ಮರಳಿದ್ದಾರೆ. ಟೆಸ್ಟ್ ಗೆ ಖಾಯಂ ವಿಕೆಟ್ ಕೀಪರ್ ಆಗಿದ್ದ ವೃದ್ದಿಮಾನ್ ಸಾಹ ಗಾಯಗೊಂಡಿರುವುದರಿಂದ ದಿನೇಶ್ ಕಾರ್ತಿಕ್ಗೆ ಅವಕಾಶ ಲಬ್ಯವಾಗಿದೆ. ಈ ಅವಕಾಶವನ್ನ ದಿಣೇಶ್ ಕಾರ್ತಿಕ್ ಬಳಸಿಕೊಂಡ್ರೆ ಟೆಸ್ಟ್ ನಲ್ಲಿ ಖಾಯಂ ಆಟಗಾರ ಆಗೋದ್ರಲ್ಲಿ ಅನುಮಾನವೇ ಇಲ್ಲ.
ತಂಡದಲ್ಲಿ ಖಾಯಂ ಸ್ಥಾನಕ್ಕಾಗಿ ಹೋರಾಟ ಮಾಡುತ್ತಿರುವ ಕನ್ನಡಿಗ ಕರುಣ್ ನಾಯರ್ ಎರಡು ವರ್ಷಗಳ ಹಿಂದೆ ಆಂಗ್ಲರ ವಿರುದ್ಧ ತ್ರಿ ಶತಕ ಸಿಡಿಸಿ ಟೆಸ್ಟ್ ಸಾಲಿಡ್ ಎಂಟ್ರಿಕೊಟ್ಟಿದ್ದರು. ನಂತರ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ನಲ್ಲಿ ಫ್ಲಾಪ್ ಪರ್ಫಾಮನ್ಸ್ ನೀಡಿ ಹೊರ ನಡೆದಿದ್ರು. ಇದೀಗ ಟೆಸ್ಟ್ ನಲ್ಲಿ ಮತ್ತೆ ಖಾಯಂ ಸ್ಥಾನಕ್ಕಾಗಿ ಹೋರಾಡಲಿದ್ದಾರೆ. ಅಜಿಂಕ್ಯಾ ರಹಾನೆ ವಿರಾಟ್ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ.
ಐತಿಹಾಸಿಕ ಟೆಸ್ಟ್ ಪಂದ್ಯ ಆಡುತ್ತರಿಉವ ಅಫ್ಘಾನಿಸ್ತಾನ ತಂಡ ಮೊದಲ ಪಂದ್ಯವನ್ನ ಗೆದ್ದು ಟೀಂ ಇಂಡಿಯಾಕ್ಕೆ ದೊಡ್ಡ ಶಾಕ್ ಕೊಡಲು ಪ್ಲಾನ್ ಮಾಡಿಕೊಂಡಿದೆ. ಇದಕ್ಕೆ ಕೌಂಟರ್ ಕೊಡಲು ಟೀಂ ಇಂಡಿಯಾ ರಿಸ್ಟ್ ಸ್ಪಿನ್ನರ್ಗಳಾದ ಯಜುವೇಂದ್ರ ಚಾಹಲ್ ಮತ್ತು ತಮಿಳುನಾಡಿನ ಚೈನಾಮನ್ ಸ್ಪಿನ್ನರ್ ಶಿವಿಲ್ ಕೌಶಿಕ್ ಅವರನ್ನ ಬಳಸಿಕೊಳ್ಳಲು ಮಾಸ್ಟರ್ ಪ್ಲಾನ್ ಮಾಡಿದೆ.
ಟೀಮ್ ಇಂಡಿಯಾಕ್ಕೆ ಒಳ್ಳೆಯ ಪೇಸ್ ಬೌಲರ್ಗಳು ಸಿಕ್ಕಿದ್ದಾರೆ. ಇದಕ್ಕೆ ಬೆಸ್ಟ್ example ಅಂದ್ರೆ ನವದೀಪ್ ಸೈನಿ. ನವದೀಪ್ ಸೈನಿ ಟೀಂ ಇಂಡಿಯಾಕ್ಕೆ ಸಿಕ್ಕ ಹೊಸ ಸೆನ್ಸೆಷನಲ್ ಬೌಲರ್.ಮೊಹ್ಮದ್ ಶಮಿ ಬದಲು ಆಡುತ್ತಿರುವ ಈ ಡೆಲ್ಲಿ ಪೇಸರ್ 140ಕೀಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡುವ ಜೊತೆಗೆ ವೇಗದ ಮೇಲೂ ನಿಯಂತ್ರಣ ಹೊಂದಿದ್ದಾರೆ. ಕಳೆದ ರಣಜಿ ಸೀಸನ್ನಲ್ಲಿ ನವದೀಪ್ ಸೂಪರ್ ಸ್ಪೆಲ್ ಮಾಡಿದ್ದರು.
ಪೇಸರ್ಗಳಾದ ಉಮೇಶ್ ಯಾದವ್, ಮೊಹ್ಮದ್ ಶಮಿ ಮತ್ತು ವರುಣ್ ಆ್ಯರಾನ್ ತಂಡದ ವೇಗದ ಬೌಲರ್ಗಳಾಗಿದ್ದಾರೆ. ಆದರೆ ಈ ಬೌಲರ್ಗಳು ತಂಡದಲ್ಲಿ ಖಾಯಂ ಬೌಲರ್ಗಳಾಗಿ ಉಳಿದಿಲ್ಲ. ಉಮೇಶ್ ಯಾದವ್ ಮತ್ತು ವರುಣ್ ಎರಾನ್ ಬೌಲಿಂಗ್ನಲ್ಲಿ Consistency ತೋರಿಸಿಲ್ಲ. ಇಶಾಂತ್ ವೇಗವನ್ನ ಕಳೆದುಕೊಂಡಿದ್ದಾರೆ. ಭುವನೇಶ್ವರ್ ಕುಮಾರ್ ಮತ್ತು ಜಸ್ಪ್ರಿತ್ ಬೂಮ್ರಾ ತಂಡದಲ್ಲಿದ್ದಾರೆ.
ಭಾರತ ಹಾಗೂ ಅಫ್ಘಾನ್ ನಡುವಿನ ಕದನ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಟೀಂ ಇಂಡಿಯಾ ಆಟಗಾರರು ಇಂಗ್ಲೆಂಡ್ ಸರಣಿಗೆ ಆಯ್ಕೆಯಾಗಬೇಕಿದ್ದಲ್ಲಿ ಸಾಲಿಡ್ ಪರ್ಫಾಮನ್ಸ್ ನೀಡಲೇಬೇಕಿದೆ.
ಚೇತನ್ ಕಡೂರು, ಸ್ಪೋರ್ಟ್ಸ್ ಬ್ಯೂರೋ ಟಿವಿ5