ಬ್ಯಾಂಕಿಗೆ ಹಾಕಬೇಕಿದ್ದ ಬೆಸ್ಕಾಂ 16ಲಕ್ಷ ಹಣ ಕಳ್ಳರ ಪಾಲು.!!

ಬೆಂಗಳೂರು : ನಿಷ್ಟೆ ಪ್ರಮಾಣಿಕತೆ ಇದ್ರೆ ಸಾಲದು ಹುಷಾರಾಗಿರಬೇಕು. ಇಲ್ಲಾಂದ್ರೆ ಚಂಬು ಗ್ಯಾರೆಂಟಿ ಎನ್ನುವ ಸತ್ಯ ಈ ಘಟನೆಯಿಂದ ಸಾಭೀತಾಗಿದೆ. ನೋ ಅಡ್ಮೀಷನ್, ಕ್ಯಾಷ್ ಬೋರ್ಡ್ ಅಂತ ಬರೆದಿರುವ ಇದೇ ಕೋಣೆಯಲ್ಲಿಟ್ಟಿದ್ದ ಸುಮಾರು 16ಲಕ್ಷ ರುಪಾಯಿ ಹಣದ ಕಳ್ಳತನವಾಗಿದೆ. ವಿಲ್ಸನ್ ಗಾರ್ಡನ್ ಉಪವಿಭಾಗದ ಈ ಬೆಸ್ಕಾಂ ಕಚೇರಿಗೆ ಬೇರೆ ಬೇರೆ ಕಡೆಗಳಿಂದ ಬೆಸ್ಕಾಂ ಬಿಲ್ ಕಟ್ಟಿಸಿಕೊಂಡಿರುವ ಹಣ ಬರುತ್ತೆ.
ಇಲ್ಲಿಗೆ ಬಂದ ಹಣವನ್ನ 'ಲಾಜಿಕ್ ಕ್ಯಾಷ್ ಕಲೆಕ್ಷನ್ಸ್' ಎಂಬ ಏಜೆನ್ಸಿಯವರು ಬಂದು ದುಡ್ಡು ಕಲೆಕ್ಟ್ ಮಾಡ್ಕೊಂಡು ಬ್ಯಾಂಕಿಗೆ ಹಾಕ್ತಾರೆ. ನೆನ್ನೆ ಸಂಜೆ 5 ಗಂಟೆ ಸುಮಾರಿಗೆ ಲಾಜಿಕ್ ಏಜೆನ್ಸಿಯ ರೋಜರ್ 16 ಲಕ್ಷಹಣವನ್ನು ಇದೇ ಕಚೇರಿಯ ಬೀರುವಿನಲ್ಲಿಟ್ಟು ಲಾಕ್ ಮಾಡಿ ಟೀಕುಡಿಯಲು ಹೋಗಿದ್ದ. 15 ನಿಮಿಷದ ನಂತರ ಬಂದು ನೋಡಿದ್ರೆ ಬಿರುವಿನಲ್ಲಿಟ್ಟಿದ್ದ ಲಕ್ಷಾಂತರ ಹಣ ಮಾಯವಾಗಿದೆ.
ಲಾಜಿಕ್ ಕಂಪನಿಯ ರೋಜರ್ ಕಳೆದ ಐದಾರು ವರ್ಷಗಳಿಂದ ಹಣ ಸಂಗ್ರಹಿಸಿ ಬ್ಯಾಂಕ್ಗೆ ಡೆಪೊಸಿಟ್ ಮಾಡುವ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ. ನೆನ್ನೆ 4.45ರ ಹಾಗೇ ಕ್ಯಾಷ್ ಕಲೆಕ್ಟ್ ಮಾಡಿಕೊಂಡು ಇನ್ನೇನು ಬ್ಯಾಮಕ್ ಡೆಪೋಸಿಟ್ ಮಾಡಬೇಕಿತ್ತು. ಗೆಳೆಯರೆಲ್ಲಾ ಸೇರಿಕೊಂಡು ಸಮೀಪದ ಟೀ ಸ್ಟಾಲ್ಗೆ ಹೋಗಿ ಬರುವಷ್ಟರಲ್ಲಿ ಬೀರುವಿನಲ್ಲಿಟ್ಟು ಲಾಕ್ ಮಾಡಿದ್ದ, ಹಣವನ್ನು ಕೀ ಬಳಸಿ ಕದಿಯಲಾಗಿದೆ.
ಅಂದಹಾಗೇ ಈ ಕೃತ್ಯದಲ್ಲಿ ಯಾರೋ ಬ್ಯಾಂಕ್ ಸಿಬ್ಬಂದಿಯೇ ಕಳ್ಳತನಕ್ಕೆ ನೆರವಾಗಿರಬಹುದು ಎನ್ನಲಾಗಿದೆ. ಆನೇಪಾಳ್ಯದಲ್ಲಿರುವ ವಿಲ್ಸನ್ ಗಾರ್ಡನ್ ಉಪವಿಭಾಗದಲ್ಲಿ ಮೂರು ಬೆಸ್ಕಾಂ ಬಿಲ್ ಕಟ್ಟಿಸಿಕೊಳ್ಳುವ ATPಕ್ಯಾಷ್ ಕೌಂಟರ್ಗಳಿವೆ. ಇಲ್ಲಿ ಜನ ಕಟ್ಟಿದ ಬಿಲ್ನಿಂದ ಸಂಗ್ರಹವಾಗುವ ಹಣ ಡಿವಿಜನ್ಗೆ ಬಂದು ಏಜೆನ್ಸಿ ಮೂಲಕ ಬ್ಯಾಂಕ್ ಗೆ ಸಂದಾಯವಾಗುತ್ತಿತ್ತು. ನೆನ್ನೆಯ ಘಟನೆಯಿಂದ ಸಿಬ್ಬಂದಿ ಮತ್ತು ಲಾಜಿಕ್ ಕ್ಯಾಷ್ ಏಜೆನ್ಸಿ ಸಿಬ್ಬಂದಿ ತುಂಬಾನೆ ತಲೆಕೆಡಿಸಿಕೊಂಡಿದ್ದಾರೆ. ಈ ಹಣದ ಕಳ್ಳತನವನ್ನು ಗೊತ್ತಿರುವ, ಹಣದ ಬಗ್ಗೆ ಮಾಹಿತಿಗೊತ್ತಿರುವವರೆ ಮಾಡಿರುವ ಕೃತ್ಯ ಅಂತ ಬೆಸ್ಕಾಂ ಸಿಬ್ಬಂದಿ ಅನುಮಾನ ವ್ಯಕ್ತಪಡಿಸಿದ್ದಾರೆ.
ಇನ್ನೂ ಕಚೇರಿಯಲ್ಲೇ ಹಣ ಕಳವು ಸಂಬಂಧ ಲಾಜಿಕ್ ಕ್ಯಾಷ್ ಕಲೆಕ್ಷನ್ ಕಂಪನಿ ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಿಚಾರಣೆ ಕೈಗೆತ್ತಿಕೊಂಡಿರುವ ಪೊಲೀಸರು ಹಣ ಲಾಕ್ ಮಾಡಿಕೊಂಡಿದ್ದ ಬ್ಯಾಂಕ್ ಸಿಬ್ಬಂದಿ, ರೋಜರ್ ಸೇರಿದಂತೆ ಒಟ್ಟು ಐದಾರು ಜನರನ್ನ ವಿಚಾರಣೆಗೆ ಒಳಪಡಿಸಿದ್ದಾರೆ.
ಬೆಸ್ಕಾಂ ಕಚೇರಿಯಲ್ಲಿ CCTV ಇದ್ದಿದ್ದರೆ ಕಳ್ಳನನ್ನ ಸುಲಭವಾಗಿ ಪತ್ತೆ ಹಚ್ಚಬಹುದಿತ್ತು. ದುರಂತವೆಂದರೆ ನಗರದ ಯಾವ ಬೆಸ್ಕಾಂ ಕಚೇರಿಗಳಿಗೂ ಸಿಸಿಟಿವಿಯ ಭಾಗ್ಯವಿಲ್ಲ. ಇನ್ನಾದರು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಹಣದ ವ್ಯವಹಾರ ನಡೆಯುವ ಸ್ಥಳಗಳಲ್ಲಾದರು ಸಿಸಿಟಿವಿ ಅಳವಡಿಸಿದರೆ ಈ ರೀತಿಯ ದುರಂತಗಳನ್ನ ಸ್ವಲ್ಪಮಟ್ಟಿಗಾದರು ತಡೆಯಬಹುದು.
ವರದಿ : ಸುರೇಶ್ ಬಾಬು TV5 ಕ್ರೈಮ್ ಬ್ಯೂರೊ ಬೆಂಗಳೂರು