Top

ಭರ್ಜರಿ ಸೌಂಡ್ ಮಾಡ್ತಿದೆ ವಿಶ್ವರೂಪಂ-2 ಸಿನಿಮಾ ಟ್ರೇಲರ್

ಭರ್ಜರಿ ಸೌಂಡ್ ಮಾಡ್ತಿದೆ ವಿಶ್ವರೂಪಂ-2 ಸಿನಿಮಾ ಟ್ರೇಲರ್
X

ಸೌತ್ ಸಿನಿದುನಿಯಾದ ಮೋಸ್ಟ್ ಎಕ್ಸ್​​ಪೆಕ್ಟೆಡ್ ಸಿನಿಮಾ ವಿಶ್ವರೂಪಂ-2. ಉಳಗನಾಯಗನ್ ಕಮಲ್ ಹಾಸನ್ ನಿರ್ದೇಶಿಸಿ, ನಟಿಸಿರೋ ಈ ಸ್ಪೈ ಥ್ರಿಲ್ಲರ್ ಟ್ರೈಲರ್ ರಿಲೀಸ್ ಆಗಿದೆ. ಒನ್ಸ್ ಅಗೇನ್ ಕಮಲ್, ರಾ ಏಜೆಂಟ್ ಅವತಾರದಲ್ಲಿ ತಮ್ಮ ನಟನಾ ವಿಶ್ವರೂಪ ಪ್ರದರ್ಶನಕ್ಕೆ ರೆಡಿಯಾಗಿದ್ದಾರೆ. ವಿಶ್ವರೂಪಂ-2 ಆ್ಯಕ್ಷನ್​ ಪ್ಯಾಕ್ಡ್ ಟ್ರೈಲರ್ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ.

ವಿಶ್ವರೂಪಂ-2 ಸಿನಿಮಾ ಏಕಕಾಲಕ್ಕೆ ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ತೆರೆಗೆ ಬರ್ತಿದೆ. ನಿನ್ನೆ ಸಂಜೆ 5ಗಂಟೆಗೆ ವಿಶ್ವರೂಪಂ ತಮಿಳು ಟ್ರೈಲರ್​ನ ಕಮಲ್ ಪುತ್ರಿ ಶೃತಿಹಾಸನ್ ಟ್ವಿಟ್ಟರ್​ ಮೂಲಕ ರಿಲೀಸ್ ಮಾಡಿದ್ರು. ಅದೇ ರೀತಿ ತೆಲುಗು ಟ್ರೈಲರ್​ನ ಜ್ಯೂನಿಯರ್ ಎನ್​ಟಿಆರ್, ಹಿಂದಿ ಟ್ರೈಲರ್​ನ ಆಮೀರ್ ಖಾನ್ ರಿವೀಲ್ ಮಾಡಿದ್ದರು. ಸದ್ಯ ಈ ಪ್ರಮೋಷನ್ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದೆ.

ಕಮಲ್, ರಾಹುಲ್ ಬೋಸ್ ಜೊತೆಗೆ ಪೂಜಾ, ಆ್ಯಂಡ್ರಿಯಾ, ಶೇಖರ್ ಕಪೂರ್, ವಹಿದಾ ರೆಹಮಾನ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಅಂಡರ್​ ವಾಟರ್ ಸ್ಟಂಟ್ ಜೊತೆಗೆ ಅದ್ಭುತ ಆಕ್ಷನ್ ಸೀಕ್ವೆನ್ಸ್​ ಚಿತ್ರದಲ್ಲಿದೆ.. ಸೀಕ್ವೆಲ್​ನಲ್ಲಿ ಕಮಲ್ ಹಾಸನ್ ಪಾತ್ರಕ್ಕೆ ಸಿಕ್ಕಿರುವಷ್ಟೆ ಸ್ಕೋಪ್ ರಾಹುಲ್ ಬೋಸ್ ಪಾತ್ರಕ್ಕೂ ಸಿಕ್ಕಿದೆ. ಇಬ್ಬರೂ ಪೈಪೋಟಿ ಬಿದ್ದು ನಟಿಸಿರುವಂತೆ ಕಾಣ್ತಿದ್ದು, ಟ್ರೈಲರ್ ನೋಡ್ತಿದ್ರೆ, ವಿಶ್ವರೂಪಂ-2 ಪ್ರೇಕ್ಷಕರಿಗೆ ಭರ್ಜರಿ ಥ್ರಿಲ್ ಕೊಡೋ ಸೂಚನೆ ಸಿಕ್ತಿದೆ.

ವಿಶ್ವರೂಪಂ-2 ಟ್ರೈಲರ್ ಯೂಟ್ಯೂಬ್​ಗೆ ಅಪ್​ಲೋಡ್​ ಆದ 22 ಗಂಟೆಗಳಲ್ಲಿ 30ಲಕ್ಷಕ್ಕೂ ಅಧಿಕ ವೀವ್ಸ್ ಪಡೆದುಕೊಂಡು ಸೆನ್ಸೇಷಕ್ ಕ್ರಿಯೇಟ್ ಮಾಡಿದೆ. ಅಷ್ಟೆ ಅಲ್ಲ ಟ್ರೈಲರ್ ಬಹಳಷ್ಟು ಜನ ಮೆಚ್ಚಿಕೊಂಡಿದ್ದು, 10000ಕ್ಕೂ ಅಧಿಕ ಲೈಕ್ಸ್​ ಪಡೆದುಕೊಂಡಿದೆ.

Next Story

RELATED STORIES