Top

ಸ್ವಯಂಘೋಷಿತ ದೇವಮಾನವ ಭಯ್ಯಾಜಿ ಮಹಾರಾಜ್ ಆತ್ಮಹತ್ಯೆ

ಸ್ವಯಂಘೋಷಿತ ದೇವಮಾನವ ಭಯ್ಯಾಜಿ ಮಹಾರಾಜ್ ಆತ್ಮಹತ್ಯೆ
X

ಇಂಧೋರ್​: ಸ್ವಯಂಘೋಷಿತ ದೇವಮಾನದ ಆಧ್ಯಾತ್ಮಿಕ ಗುರು ಭಯ್ಯೂಜೀ ಮಹಾರಾಜ್ ಮಧ್ಯಪ್ರದೇಶದ ರಾಜಧಾನಿ ಇಂಧೋರ್ ನಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

[story-lines]

ಮೂಲತಃ ಮಹಾರಾಷ್ಟ್ರದವರಾದ ಉದಯಸಿಂಗ್ ದೇಶಮುಖ್, ಸ್ವಯಂಘೊಷಿತ ದೇವಮಾನವರಾಗಿ ಪ್ರಸಿದ್ದಿಗೆ ಬಂದವರು. ಮಹಾರಾಷ್ಟ್ರದ ಹಲವು ರಾಜಕಾರಣಿಗಳ ಜೊತೆ ಒಡನಾಟ ಹೊಂದಿದ್ದ ಅವರು, ನಂತರ ಮಧ್ಯಪ್ರದೇಶದ ಇಂಧೋರ್ ಗೆ ಬಂದು ನೆಲೆಸಿದ್ದರು. ಇತ್ತಿಚೀಗಷ್ಟೇ ಮಧ್ಯಪ್ರದೇಶ ಸರ್ಕಾರ ಅವರಿಗೆ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನ ಕೂಡ ನೀಡಿತ್ತು. ಮಧ್ಯಪ್ರದೇಶ ಸರ್ಕಾರ ಇತ್ತೀಚಿಗೆ ೫ ಜನ ಸ್ವಾಮಿಜೀಗಳಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನ ನೀಡಿತ್ತು, ಅದರಲ್ಲಿ ಭಯ್ಯೂಜೀ ಕೂಡ ಒಬ್ಬರಾಗಿದ್ದರು. ಭ್ರಷ್ಟಾಚಾರ ವಿರುದ್ದ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ನಡೆಸಿದ್ದ ಹೋರಾಟದಲ್ಲೂ ಭಯ್ಯೂಜೀ ಕಾಣಿಸಿಕೊಂಡಿದ್ದರು.

ಇನ್ನು ಭಯ್ಯೂಜೀ ಅವಾರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲವಾದರೂ, ಇತ್ತಿಚೀಗೆ ಅವರ ಮೊದಲ ಪತ್ನಿ ನಿಧನ ಹೊಂದಿದ್ದರು. ಈ ಹಿನ್ನಲೆಯಲ್ಲಿ ಎರಡನೇ ಮದುವೆಯಾಗಿದ್ದ ಭಯ್ಯೂಜೀ, ತಮ್ಮ ಸಂಸಾರದ ತೊಂದರೆಗಳನ್ನು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದರು ಎನ್ನಲಾಗಿದೆ. ತಲೆಗೆ ಗುಂಡು ಹೊಡೆದುಕೊಂಡ ಭಯ್ಯೂಜೀ ಅವರನ್ನು ಇಂಧೋರ್ ನ ಬಾಂಬೆ ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯೆಯೇ ಅಸುನೀಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

Next Story

RELATED STORIES