Top

ಕೊಚ್ಚಿಹೋಗುತ್ತಿದ್ದ ಯುವಕರ ರಕ್ಷಣೆ

ಕೊಚ್ಚಿಹೋಗುತ್ತಿದ್ದ ಯುವಕರ ರಕ್ಷಣೆ
X

ಮಹಾರಾಷ್ಟ್ರ: ಬೆಳಗಾವಿಯ ಮಹಾರಾಷ್ಟ್ರ ಗಡಿಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಸಮುದ್ರದ ಅಲೆಗೆ ಸಿಲುಕಿ ಯುವಕರು ಅಪಾಯಕ್ಕೆ ಸಿಲುಕಿದ ಘಟನೆ ನಡೆದಿದೆ. ಮಹಾರಾಷ್ಟ್ರದ ಸಿಂಧದುರ್ಗ ಜಿಲ್ಲೆಯ ಮಾಲ್ವನ್ ಬೀಚ್ ನಲ್ಲಿ ಈ ಘಟನೆ ನಡೆದಿದೆ.

ಮೂವರು ಯುವಕರು ಸಮುದ್ರದಲ್ಲಿ ಮೋಜು ಮಸ್ತಿ ಮಾಡಲು ಬಂದಿದ್ದರು. ಸ್ಥಳೀಯರು ಸಮುದ್ರದ ಕಡೆ ಹೋಗದಂತೆ ಸೂಚಿಸಿದರು, ಸ್ಥಳೀಯರ ಸೂಚನೆ ಧಿಕ್ಕರಿಸಿ, ಯುವಕರು ಸಮುದ್ರದ ದಡದಲ್ಲಿನ ಬಂಡೆ ಮೇಲೆ ಕುಳಿತು ಮೋಜಿನಲ್ಲಿ ತೊಡಗಿದ್ದಾರೆ. ಈ ವೇಳೆ ಸಮುದ್ರದ ರಕ್ಕಸ ಅಲೆ ಅಪ್ಪಳಿಸಿ, ಯುವಕರು ಕೊಚ್ಚಿ ಹೋಗುತ್ತಿದ್ದಾಗ, ಸ್ಥಳೀಯರೇ ಯುವಕರನ್ನು ರಕ್ಷಿಸಿದ್ದಾರೆ.

Next Story

RELATED STORIES