Top

'ಲೋಕ' ಸಮರಕ್ಕೆ ಶುರುವಾಗಿದೆ ಮಹಾ ಸಿದ್ಧತೆ

ಲೋಕ ಸಮರಕ್ಕೆ ಶುರುವಾಗಿದೆ ಮಹಾ ಸಿದ್ಧತೆ
X

ನವದೆಹಲಿ: ಲೋಕಸಭಾ ಚುನಾವಣೆಗೆ ಬರೋಬ್ಬರಿ ಒಂದು ವರ್ಷವಿದೆ. ಇದರ ಜೊತೆಗೆ ಸುಮಾರು 8 ವಿಧಾನಸಭಾ ಚುನಾವಣೆಗಳು ನಡೆಯಲಿದೆ. ಹೆಚ್ಚುಕಡಿಮೆ ಆದರೂ ಇನ್ನೆರಡು ವಿಧಾನಸಭಾ ಕ್ಷೇತಗಳ ಚುನಾವಣೆ ನಡೆದರೂ ಅಚ್ಚರಿಯಿಲ್ಲ. ಹಾಗಾಗಿ ಆಡಳಿತಾರೂಢ ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷಗಳು ಮಹಾ ಸಿದ್ಧತೆಯಲ್ಲಿ ತೊಡಗಿವೆ.

ಆಂಧ್ರಪ್ರದೇಶ, ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ, ಒಡಿಶಾ, ಛತ್ತೀಸ್‍ಗಢ. ಅರುಣಾಚಲ ಪ್ರದೇಶ ಹಾಗೂ ಸಿಕ್ಕಿಂ ರಾಜ್ಯಗಳಲ್ಲಿ ಚುನಾವಣೆಗಳು ಇನ್ನೊಂದು ವರ್ಷಗಳ ಒಳಗಾಗಿ ನಡೆಯಲಿದ್ದು, ಈಗಿನಿಂದಲೇ ಬಿರುಸಿನ ಚಟುವಟಿಕೆಗಳು ಆರಂಭಗೊಂಡಿದೆ. ಮುಂದಿನ ವರ್ಷ ನವೆಂಬರ್​ನಲ್ಲಿ ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳಲ್ಲೂ ವಿಧಾನಸಭೆ ಚುನಾವಣೆಗಳು ಜರುಗಲಿವೆ. ಇನ್ನು ಆರು ತಿಂಗಳಲ್ಲಿ ಅಂದರೆ ಹೊಸ ವರ್ಷದ ಮೊದಲ ತಿಂಗಳಲ್ಲೇ ಛತ್ತೀಸ್‍ಗಢ, ಮಧ್ಯಪ್ರದೇಶ ಹಾಗೂ ರಾಜಸ್ತಾನ-ಈ ಮೂರು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗೆ ನಡೆಯಲಿದೆ.

ಛತ್ತೀಸ್‍ಗಢದ 90 ವಿಧಾನಸಭಾ ಕ್ಷೇತ್ರಗಳಿಗೆ ಜನವರಿ 5, ಮಧ್ಯಪ್ರದೇಶದ 230 ಕ್ಷೇತ್ರಗಳಿಗೆ ಜ.7 ಹಾಗೂ ರಾಜಸ್ತಾನದ 200 ಸ್ಥಾನಗಳಿಗೆ ಜ.20ರಂದು ಮತದಾನ ನಡೆಯಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಮೇ 27ರಂದು ಸಿಕ್ಕಿಂ (52 ವಿಧಾನಸಭಾ ಕ್ಷೇತ್ರ), ಜೂನ್ 1-ಅರುಣಾಚಲ ಪ್ರದೇಶ (60 ಸ್ಥಾನಗಳು), ಜೂನ್ 8-ತೆಲಂಗಾಣ (119), ಜೂನ್ 11-ಓಡಿಶಾ (147), ಹಾಗೂ ಜೂನ್ 18-ಆಂಧ್ರಪ್ರದೇಶ (175) ವಿಧಾನಸಭೆಗಳಿಗೆ ಚುನಾವಣೆ ಜರುಗಲಿದೆ ಎಂದು ಮೂಲಗಳು ಹೇಳಿವೆ.

ನವೆಂಬರ್ 2ರಂದು ಹರಿಯಾಣ (90) ಹಾಗೂ ನವೆಂಬರ್ 9ರಂದು ಮಹಾರಾಷ್ಟ್ರ (288) ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆ ನಡೆಯಲಿದೆ ಎಂದು ಹೇಳಲಾಗಿದೆ. ಲೋಕಸಭೆ ಮತ್ತು ಈ ರಾಜ್ಯಗಳ ವಿಧಾನಸಭೆ ಚುನಾವಣೆಗಳು ಬಿಜೆಪಿ ಮತ್ತು ಪ್ರತಿಪಕ್ಷಗಳಿಗೆ ಪ್ರತಿಷ್ಟೆಯ ಪ್ರಶ್ನೆಯಾಗಿವೆ. ಎಲ್ಲ ಪಕ್ಷಗಳಲ್ಲಿ ಈಗಿನಿಂದಲೇ ಚುನಾವಣಾ ಮಹಾ ಸಮರದ ಸಿದ್ದತೆಗಳು ನಡೆಯುತ್ತಿವೆ.

Next Story

RELATED STORIES