Top

ಪ್ರೇಯಸಿಯ ಅಮ್ಮನ ಕಿಡ್ನಾಪ್​: ಬೆಂಗಳೂರಿನಲ್ಲಿ ವಿಚಿತ್ರ ಘಟನೆ

ಪ್ರೇಯಸಿಯ ಅಮ್ಮನ ಕಿಡ್ನಾಪ್​: ಬೆಂಗಳೂರಿನಲ್ಲಿ ವಿಚಿತ್ರ ಘಟನೆ
X

ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಅಪಹರಣ ಪ್ರಕರಣಗಳು ಹೆಚ್ಚಾಗುತ್ತಿದೆ. ಇತ್ತೀಚೆಗಷ್ಟೇ ಉದ್ಯಮಿಯ ಮೇಲೆ ಗುಂಡು ಹಾರಿಸಿ ಅಪಹರಣಕ್ಕೆ ಯತ್ನಿಸಿದ ಬೆನ್ನಲ್ಲೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

ಎಜುಕೇಷನ್ ಟ್ರಸ್ಟ್ ಸಂಸ್ಥಾಪಕಿ ಪ್ರಮಿಳಾ ಅವರ ಕೈ ಕಾಲು ಕಟ್ಟಿ ಅವರದ್ದೇ ಕಾರಿನಲ್ಲಿ ಡಿಕ್ಕಿಯಲ್ಲಿ ಹಾಕಿ ಅಪಹರಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಪ್ರಮಿಳಾ ಅವರನ್ನು ಅವರದ್ದೇ ಸ್ವಿಫ್ಟ್ ಕಾರಿನಲ್ಲೆ ಅಪಹರಿಸಿದ ದುಷ್ಕರ್ಮಿಗಳು, ತಮಿಳುನಾಡಿನ ಹೊಸೂರಿಗೆ ಕರೆದೊಯ್ದಿದ್ದಾರೆ. 12 ಗಂಟೆ ಕಾರಿನ ಡಿಕ್ಕಿಯಲ್ಲೇ ಕೂರಿಸಿ 170 ಗ್ರಾಂ ಚಿನ್ಬ ಒಂದೂವರೆ ಲಕ್ಷ ಹಣ ದೋಚಿದ್ದಾರೆ.

ದೊಚಿದ ಬಳಿಕ ಪ್ಲಾಸ್ಟಿಕ್ ಹಗ್ಗದಿಂದ ಕೈ ಕಾಲು ಕಟ್ಟಿ ಕಾರನ್ನು ಲಾಕ್ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದರು. ನಂತರ ಪ್ರಮಿಳಾ ಕೂಗಿದಾಗ ಸ್ಥಳೀಯರು ಬಂದು ಕಾಪಾಡಿದ್ದಾರೆ. ಸ್ಥಳೀಯರಿಂದ ಮಾಹಿತಿ ಪಡೆದ ತಮಿಳುನಾಡು ಪೊಲೀಸರು ಘಟನಾ ಸ್ಥಳಕ್ಕೆ ಬಂದಿದ್ದಾರೆ.

ಅಪಹರಣ ಹಿಂದೆ ಪ್ರೇಮ ಪ್ರಕರಣದ ತಳಕು ಹಾಕಲಾಗಿದ್ದು, ಪ್ರಮಿಳಾ ಅವರ ಪುತ್ರಿಯನ್ನು ಪ್ರೀತಿಸಿ ಮದುವೆಯಾಗಿದ್ದ ಸಾಯಿ ಪ್ರಕಾಶ್ ಎಂಬಾತ ಈ ಕೃತ್ಯ ನಡೆಸಿರುವ ಶಂಕೆ ಇದೆ. ಕೆಂಗೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Next Story

RELATED STORIES