Top

3ನೇ ರ‍್ಯಾಂಕ್​ಗೆ ಜಿಗಿದ ಪೂನಮ್

3ನೇ ರ‍್ಯಾಂಕ್​ಗೆ ಜಿಗಿದ ಪೂನಮ್
X

ಐಸಿಸಿ ಮಹಿಳಾ ಟಿ20 ರ‍್ಯಾಂಕಿಂಗ್​ನಲ್ಲಿ ಭಾರತದ ಪೂನಮ್ ಯಾದವ್ ಮೂರನೇ ಸ್ಥಾನಕ್ಕೆ ಜಿಗಿದಿದ್ದಾರೆ. ಇತ್ತೀಚೆಗೆ ಮುಕ್ತಾಯವಾದ ಮಹಿಳಾ ಏಷ್ಯಾ ಟಿ20 ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದು ಸಾಧನೆ ಮಾಡಿದ್ದಾರೆ. ಫೈನಲ್ ಪಂದ್ಯದಲ್ಲಿ ಸ್ಪಿನ್ನರ್ ಪೂನಮ್ ಕೇವಲ 9 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದ್ದರು.

ಇನ್ನು ಬ್ಯಾಟಿಂಗ್ ವಿಭಾಗದಲ್ಲಿ ಭಾರತ ಮಹಿಳಾ ತಂಡದ ನಾಯಕಿ ಹರ್ಮನ್​ಪ್ರಿತ್ ಕೌರ್ ಏಷ್ಯಾಕಪ್​ ನಲ್ಲಿ ನಾಲ್ಕು ಇನ್ನಿಂಗ್ಸ್ ಗಳಿಂದ 156 ರನ್ ಬಾರಿಸಿ 52 ಸರಾಸರಿಯೊಂದಿಗೆ 584 ಅಂಕಗಳೊಂದಿಗೆ 7ನೇ ಸ್ಥಾನ ಪಡೆದಿದ್ದಾರೆ. ಸ್ಮೃತಿ ಮಂದನಾ ಮತ್ತು ಮಿಥಾಲಿ ರಾಜ್ ನಂತರದ ಸ್ಥಾನ ಪಡೆದಿದ್ದಾರೆ. ಟಾಪ್ ಹತ್ತರಲ್ಲಿ ಭಾರತದ ಮೂರು ಆಟಗಾರ್ತಿಯರಿದ್ದಾರೆ.

Next Story

RELATED STORIES