Top

ಜನರೇ ಟೋಪಿ ಹಾಕಿದ್ರು, ಮತ್ತೆ ನೀನ್ ಹಾಕ್ತಿಯಪ್ಪ.. ಸಿದ್ದು ಹಾಸ್ಯ ಚಟಾಕಿ

ಜನರೇ ಟೋಪಿ ಹಾಕಿದ್ರು, ಮತ್ತೆ ನೀನ್ ಹಾಕ್ತಿಯಪ್ಪ.. ಸಿದ್ದು ಹಾಸ್ಯ ಚಟಾಕಿ
X

ಜನರೇ ಟೋಪಿ ಹಾಕಿದರು. ಇನ್ನು ನಿನ್ಯಾಕೇ ಹಾಕ್ತಿಯಪ್ಪ ಎಂದು ತಮ್ಮನ್ನು ಸನ್ಮಾನ ಮಾಡಲು ಬಂದ ಅಭಿಮಾನಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುವ ಮೂಲಕ ತಮ್ಮ ನೋವನ್ನು ಹಾಸ್ಯದ ಮೂಲಕ ಹೇಳಿಕೊಂಡರು.

ಮೈಸೂರಿಗೆ ಭೇಟಿ ನೀಡಿರುವ ಸಿದ್ದರಾಮಯ್ಯ, ತಮ್ಮ ನಿವಾಸದಲ್ಲಿ ಸನ್ಮಾನ ಮಾಡಲು ಬಂದ ಅಭಿಮಾನಿಗೆ ಈ ರೀತಿ ಹೇಳಿದರು.

ಚಂದನ್ ಎಂಬ ಅಭಿಮಾನಿ ಸಿದ್ದರಾಮಯ್ಯ ಸನ್ಮಾನ ಮಾಡಲು ಆಗಮಿಸಿದ್ದರು. ನಿಮಗೆ ಸನ್ಮಾನ ಮಾಡಬೇಕು ಎಂದಾಗ ಬಾ ಎಂದು ಕೈ ಸನ್ನೆ ಮೂಲಕ ಸೂಚಿಸಿದರು. ಶಾಲು-ಹಾರ ಹಾಕಿ ಮೈಸೂರು ಪೇಟ ತೋಡಿಸಲು ಹೋದಾಗ, ಹೇ ಇದೇಲ್ಲ ಯಾಕಪ್ಪ ಎಂದ ಸಿದ್ದರಾಮಯ್ಯ ಕೇಳಿದರು.

ಪೇಟ ತೋಡಿಸುತ್ತಿದ್ದಾಗ ಜನರೇ ಟೋಪಿ ಹಾಕಿದರು. ಇದೆಲ್ಲಾ ಯಾಕಪ್ಪ ಎಂದು ಸಿದ್ದರಾಮಯ್ಯ ನಗುತ್ತಲೇ ಹೇಳುತ್ತಾ ಮೈಸೂರು ಪೇಟ ತೆಗೆದು ಪಕ್ಕಕ್ಕೆ ಇಟ್ಟರು.

Next Story

RELATED STORIES