Top

ಬಾಂಗ್ಲಾ ಗೆಲುವಿನ ಹಿಂದೆ ಭಾರತ..!

ಬಾಂಗ್ಲಾ ಗೆಲುವಿನ ಹಿಂದೆ ಭಾರತ..!
X

[story-lines]

ನವದೆಹಲಿ: ಏಷ್ಯಾ ಮಹಿಳಾ ಟಿ20 ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ಮಹಿಳಾ ತಂಡದ ವಿರುದ್ಧ 3 ವಿಕೆಟ್​ಗಳಿಂದ ರೋಚಕವಾಗಿ ಗೆದ್ದ ಬಾಂಗ್ಲಾ ತಂಡದ ಯಶಸ್ಸಿನ ಹಿಂದೆ ಕೋಚ್ ಅಂಜು ಜೈನ್ ನಿರ್ಣಾಯಕ ಪಾತ್ರವಹಿಸಿದ್ದಾರೆ.

ಅಂಜು ಜೈನ್ ಒಂದು ಕಾಲದಲ್ಲಿ ಭಾರತ ಮಹಿಳಾ ತಂಡದ ನಾಯಕಿಯಾಗಿದ್ದರು. ಇದೀಗ ಬಾಂಗ್ಲಾ ತಂಡದ ಕೋಚ್​ ಆಗಿ ಅಂಜು ಜೈನ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊನ್ನೆ ಮಲೇಷ್ಯಾದಲ್ಲಿ ಮುಕ್ತಾಯವಾದ ಏಷ್ಯಾಕಪ್ ಟೂರ್ನಿಯಲ್ಲಿ ಬಾಂಗ್ಲಾ ತಂಡ ಅಚ್ಚರಿ ರೀತಿಯಲ್ಲಿ ಪ್ರದರ್ಶನ ನೀಡಿ ಗಮನ ಸೆಳೆದಿತ್ತು. ಆರು ಬಾರಿ ಚಾಂಪಿಯನ್ ಆಗಿದ್ದ ಭಾರತ ತಂಡವನ್ನ ಟೂರ್ನಿಯಲ್ಲಿ ಎರಡು ಬಾರಿ ಸೋಲಿಸಿ ಪರಾಕ್ರಮ ಮೆರೆದಿತ್ತು.

ಬಾಂಗ್ಲಾ ಗೆಲುವಿನ ಕುರಿತು ಅಂಜು ಜೈನ್ ಮಾತನಾಡಿದ್ದು, ಬಾಂಗ್ಲಾ ತಂಡಕ್ಕೆ ಕೋಚ್ ಆಗಿದ್ದು ದುಡುಕಿನ ನಿರ್ಧಾರವಾಗಿತ್ತು. ನಾನು ಬಂದಾಗ ತಂಡ ಹೀನಾಯ ಪರಿಸ್ಥಿತಿಯಲ್ಲಿತ್ತು. ನಾನು ಬಂದ ಮೇಲೆ ತಂಡಕ್ಕೆ ಶಕ್ತಿ ತುಂಬಿದೆ. ಇದು ತಂಡಕ್ಕೆ ಮತ್ತೆ ವೈಯಕ್ತಿಕವಾಗಿ ಖುಷಿಯ ವಿಚಾರವಾಗಿತ್ತು. ದಕ್ಷಿಣ ಆಫ್ರಿಕಾ ಪ್ರವಾಸ ಮುಗಿಸಿ ಬಂದ ನಂತರ ಕಲವೊಂದು ವಿಷಯಗಳ ಬಗ್ಗೆ ಗಮನ ಕೊಟ್ಟಿದೆ ಎಂದು ಅಂಜು ಜೈನ್ ತಿಳಿಸಿದ್ದಾರೆ.

Next Story

RELATED STORIES