ನಾನ್ವೆಜ್ ಅಡುಗೆ ಮಾಡಲಿಲ್ಲವೆಂದು ಪತಿ ಮಾಡಿದ್ದೇನು ಗೊತ್ತಾ..?

ಉತ್ತರಪ್ರದೇಶ: ಬಾಯಿಚಪಲ ಮಿತಿ ಮೀರಿದರೆ ದುರಂತವೂ ಸಂಭವಿಸಬಹುದು ಎಂಬುದಕ್ಕೆ ಇಲ್ಲೊಂದು ಭಯಾನಕ ಘಟನೆ ಉದಾಹರಣೆಯಾಗಿದೆ. ಉತ್ತರಪ್ರದೇಶದ ಫಿರೋಜಾಬಾದ್ ಜಿಲ್ಲೆಯಲ್ಲಿ ಪತ್ನಿ ಮಟನ್ ಮಾಡಲು ನಿರಾಕರಿಸಿದಳೆಂಬ ಕಾರಣಕ್ಕೆ ಪತಿ ಆಕೆಯನ್ನು ಮೂರನೇ ಮಹಡಿಯಿಂದ ಕೆಳಕ್ಕೆ ತಳ್ಳಿದ ಘಟನೆ ನಡೆದಿದೆ.
ನರ್ಖಿ ಪೊಲೀಸ್ ಠಾಣೆ ವ್ಯಾಪ್ತಿಯ ಪಚ್ವಾನ್ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ಮನೋಜ್ ಕುಮಾರ್ (30) ಮದ್ಯ ಸೇವಿಸಿ ಬಂದು, ಪತ್ನಿಗೆ ಮಟನ್ ತಯಾರಿಸಲು ಹೇಳಿದ್ದಾನೆ. ಅದಕ್ಕೆ ನಿರಾಕರಿಸಿದ್ದಕ್ಕೆ, ಪತ್ನಿ ರಾಣಿಯನ್ನು ಕಬ್ಬಿಣದ ರಾಡ್ ನಿಂದ ಹೊಡೆದು ಪ್ರಜ್ಞೆ ತಪ್ಪಿಸಿದ್ದಾನೆ. ನಂತರ ತಂದೆ ಮತ್ತು ಸಹೋದರನೊಂದಿಗೆ ಸೇರಿ ಆಕೆಯನ್ನು ಮೂರನೇ ಮಹಡಿಯಿಂದ ಕೆಳಗೆ ತಳ್ಳಿ ಕೊಲೆ ಮಾಡಿದ್ದಾರೆ.
ರಾಣಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಬಗ್ಗೆ ಅಧಿಕಾರಿ ಅನಿಲ್ ಕುಮಾರ್ ಮಾತನಾಡಿದ್ದು, ಮಹಿಳೆಗೆ ಚಿಕಿತ್ಸೆ ಕೊಡಿಸಲು ಕರೆತರುವಾಗ, ಮಾರ್ಗಮಧ್ಯೆ ಆಕೆ ಸಾವನ್ನಪ್ಪಿದ್ದಾಳೆ,ಅಲ್ಲದೇ ಆಕೆ ಪತಿಯಿಂದ ತೀವ್ರ ಹಲ್ಲೆಗೆ ಒಳಗಾಗಿದ್ದಳು ಎಂದು ಹೇಳಿದ್ದಾರೆ.ಅಲ್ಲದೇ ಮೃತ ಮಹಿಳೆಯ ಮಾವ ಮತ್ತು ಬಾಮೈದನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಮನೋಜ್ ತಲೆಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ತಲೆಮರೆಸಿಕೊಂಡಿದ್ದಾರೆ.