Top

ಗೌರಿ ಲಂಕೇಶ್‌ ಹತ್ಯೆ : ಸಿಕ್ಕಿಬಿದ್ದನೇ ಹಂತಕ.?

ಗೌರಿ ಲಂಕೇಶ್‌ ಹತ್ಯೆ : ಸಿಕ್ಕಿಬಿದ್ದನೇ ಹಂತಕ.?
X

ಬೆಂಗಳೂರು : ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನು ಎಸ್‌ಐಟಿ ಅಧಿಕಾರಿಗಳು ಇಂದು ಬಂಧಿಸಿದ್ದಾರೆ. ಈ ಮೂಲಕ ಗೌರಿ ಲಂಕೇಶ್ ಹತ್ಯೆ ಕೇಸ್‌ಗೆ ಪ್ರಮುಖ ತಿರುವು ಲಭಿಸಿದ್ದೂ, ಬಂಧಿತ ಆರೋಪಿಯೇ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆಂದು ಹೇಳಲಾಗುತ್ತಿದೆ.

ಸಿಂಧಗಿ ಮೂಲದ 26 ವರ್ಷದ ಪರಶುರಾಮ್‌ ಎಂಬುವರೇ ಬಂಧಿತ ಮತ್ತೊಬ್ಬ ಆರೋಪಿಯಾಗಿದ್ದಾನೆ. ಬಂಧಿತ ಆರೋಪಿಯನ್ನು ಎಸ್‌ಐಟಿ ಅಧಿಕಾರಿಗಳು, ನಗರದ 3ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರು ಪಡಿಸಿದರು.

ಈ ವೇಳೇ ನ್ಯಾಯಾಧೀಶರು, ನಿನ್ನ ಪರ ವಕೀಲರನ್ನು ನೇಮಕ ಮಾಡಿಕೊಳ್ಳುತ್ತೀಯಾ ಎಂದು ಪ್ರಶ್ನೆ ಮಾಡಿದರು. ಈವೇಳೆ ಆರೋಪಿ ಪರಶುರಾಮ್‌, ತಮ್ಮ ಪರ ವಾದಿಸಲು ವಕೀಲರನ್ನು ನೇಮಕ ಮಾಡಿಕೊಳ್ಳುವುದಾಗಿಯೂ ತಿಳಿಸಿದ್ದಾನೆ. ಬಳಿಕ ನ್ಯಾಯಾಧೀಶರು, 14 ದಿನಗಳ ಕಾಲ ಎಸ್‌ಐಟಿ ಅಧಿಕಾರಿಗಳ ವಶಕ್ಕೆ ನೀಡುವಂತೆ ಆದೇಶಿಸಿದರು.

ಅಂದಹಾಗೇ ಬಂಧಿತ ಪರಶುರಾಮ್‌, 2012ರಲ್ಲಿ ಸಿಂಧಗಿಯಲ್ಲಿ ತಾಹಶೀಲ್ದಾರ್ ಕಛೇರಿಯ ಮೇಲೆ ಪಾಕಿಸ್ತಾನ ಹಾರಿಸಿದ್ದ ಪ್ರಕರಣದಲ್ಲೂ 6ನೇ ಆರೋಪಿಯಾಗಿದ್ದನು. ಪ್ರಕರಣದ ನಂತ್ರ, ಇಲ್ಲಿಯ ವರೆಗೆ ಆರೋಪಿ ತಲೆ ಮರೆಸಿಕೊಂಡಿದ್ದ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

Next Story

RELATED STORIES