Top

ಹೃದಯ ಧಡಕ್​ ಧಡಕ್​ ಅನಿಸುವಂತಿದೆ ಶ್ರೀದೇವಿ ಪುತ್ರಿ ಜಾಹ್ನವಿ ಚಿತ್ರದ ಟ್ರೇಲರ್​!

ಹೃದಯ ಧಡಕ್​ ಧಡಕ್​ ಅನಿಸುವಂತಿದೆ ಶ್ರೀದೇವಿ ಪುತ್ರಿ ಜಾಹ್ನವಿ ಚಿತ್ರದ ಟ್ರೇಲರ್​!
X

ಯೆಸ್... ಇದು ಬಾಲಿವುಡ್ ಅಂಗಳದಲ್ಲಿ ರಿಲೀಸ್ ಆಗಿರೋ ಲೇಟೆಸ್ಟ್ ಟ್ರೈಲರ್ ಝಲಕ್. ಧಡಕ್ ಅನ್ನೋ ಟೈಟಲ್​ನ ಈ ಟ್ರೈಲರ್, ನೋಡುಗರ ದಿಲ್ ನಿಜಕ್ಕೂ ಧಡಕ್ ಅನಿಸುವಂತಿದೆ. ಇದೊಂದು ಅಚ್ಚ ರೊಮ್ಯಾಂಟಿಕ್ ಪ್ರೇಮ್ ಕಹಾನಿ ಆಗಿದ್ದು, ಮೊದಲ ನೋಟದಲ್ಲೇ ಸಿನಿಪ್ರಿಯರನ್ನ ಹುಚ್ಚೆಬ್ಬಿಸುವಂತಿದೆ.

ಅಂದಹಾಗೆ ಇದು 2016ರಲ್ಲಿ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಸಂಚಲನ ಸೃಷ್ಠಿಸಿದ ಮರಾಠಿಯ ಸೈರಾಟ್ ಸಿನಿಮಾದ ರಿಮೇಕ್ ಸಿನಿಮಾ. ಹೌದು.. ನಾಗರಾಜ್ ಮಂಜುಳೆ ನಿರ್ದೇಶನದ, ರಿಂಕು ರಾಜ್​ಗುರು- ಆಕಾಶ್ ತೋಷಾರ್ ಜೋಡಿಯ ಈ ಸಿನಿಮಾ ಇಂಡಿಯನ್ ಸಿನಿಮಾ ಹಿಸ್ಟರಿಯಲ್ಲೇ ಸಾರ್ವಕಾಲಿಕ ದಾಖಲೆ ಬರೆಯಿತು. ನಾಲ್ಕು ಕೋಟಿ ವೆಚ್ಚದಲ್ಲಿ ತಯಾರಾದ ಈ ಚಿತ್ರ 110ಕೋಟಿ ದಾಖಲೆ ಕಲೆಕ್ಷನ್ ಮೂಲಕ ಬಾಕ್ಸ್ ಆಫೀಸ್ ಬ್ಯಾಂಗ್ ಮಾಡಿತ್ತು.

ಕೆಳಜಾತಿಯ ಹುಡಗನೊಬ್ಬ ಮೇಲ್ಜಾತಿಯ ಹುಡ್ಗಿಯನ್ನ ಪ್ರೀತಿಸಿದ್ರೆ ಏನಾಗುತ್ತೆ ಅನ್ನೋದನ್ನ ತುಂಬಾ ಪ್ರಾಕ್ಟಿಕಲ್ ಆಗಿ ಕಣ್ಣಿಗೆ ಕಟ್ಟಿದಂತೆ ತೆರೆಮೇಲೆ ಮೂಡಿಸಿದ್ದ ಸಿನಿಮಾ. ಇದು ಹಿಂದಿಯಲ್ಲಿ ಬರುತ್ತಿದ್ದು, ಧಡಕ್ ಸಿನಿಮಾದ ಮುಖ್ಯಭೂಮಿಕೆಯಲ್ಲಿರುವ ಚೆಲುವೆ ಜಾಹ್ನವಿ. ಈಕೆ ಇತ್ತೀಚೆಗೆ ಇಹಲೋಕ ತ್ಯಜಿಸಿದ ಭಾರತೀಯ ಚಿತ್ರರಂಗದ ಅತಿಲೋಕ ಸುಂದರಿ ಶ್ರೀದೇವಿ ಪುತ್ರಿ. ಥೇಟ್ ಅಮ್ಮನಂತೆ ಕಾಣ್ತಿರೋ ಈ ಪೋರಿ, ಚೊಚ್ಚಲ ಚಿತ್ರದಲ್ಲೇ ಭೇಷ್ ಅನ್ನುವಂತಹ ಅಭಿನಯ ನೀಡಿರೋ ಭರವಸೆ ಕೊಟ್ಟಿದ್ದಾರೆ.

ರಾಜಸ್ಥಾನ್ ಹಿನ್ನೆಲೆಯಲ್ಲಿ ಚಿತ್ರೀಕರಣಗೊಂಡಿರುವ ಈ ಸಿನಿಮಾಗೆ ಹಮ್ಟಿ ಶರ್ಮಾಕಿ ದ್ಹುಲಾನಿಯಾ ಮತ್ತು ಬದ್ರಿನಾಥ್ ಕಿ ದ್ಹುಲಾನಿಯಾ ಖ್ಯಾತಿಯ ಶಶಾಂಕ್ ಕೇತಾನ್ ಌಕ್ಷನ್ ಕಟ್ ಹೇಳಿದ್ದಾರೆ. ಇನ್ನು ಬಾಲಿವುಡ್​ನಲ್ಲಿ ಕಂಟೆಂಟ್ ಮಾಸ್ಟರ್ ಅಂತಲೇ ಹೆಸರುವಾಸಿಯಾಗಿರೋ ಕರಣ್ ಜೋಹಾರ್ ಈ ಸಿನಿಮಾಗೆ ಬಂಡವಾಳ ಹಾಕಿದ್ದಾರೆ.

ಹೌದು, ಜಾಹ್ನವಿ ಕಪೂರ್ ಜೊತೆ ನಾಯಕನಟನಾಗಿ ಬಣ್ಣ ಹಚ್ಚಿರೋದು ಬಾಲಿವುಡ್​ನ ಸ್ಟಾರ್ ಶಾಹಿದ್ ಕಪೂರ್ ಕಝಿನ್ ಇಶಾನ್. ಈಗಷ್ಟೇ ಎಸ್​ಎಸ್​ಎಲ್​ಸಿ ಮುಗಿಸಿದಂತಿರೋ ಸಣ್ಣ ಪ್ರಾಯದ ಚಾಕ್ಲೆಟ್ ಹೀರೋ ಇಶಾನ್, ಈಗಾಗ್ಲೇ ಉಡ್ತಾ ಪಂಜಾಬ್ ಮತ್ತು ಬಿಯಾಂಡ್ ದ ಕ್ಲೌಡ್ಸ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದ್ರೆ ಇಲ್ಲಿ ಜಾಹ್ನವಿ ಜೊತೆಗಿನ ಇಶಾನ್ ಕೆಮಿಸ್ಟ್ರಿ ಸಂಥಿಂಗ್ ಸ್ಪೆಷಲ್ ಅನಿಸಿದ್ದು, ಹೆಂಗೆಳೆಯರನ್ನ ಸೆಳೆಯುತ್ತಿದೆ.

ಪಾತ್ರಗಳ ಆಯ್ಕೆ, ಲೊಕೇಷನ್ಸ್, ಮೇಕಿಂಗ್ ಪ್ಯಾಟ್ರನ್ ಎಲ್ಲವೂ ಫ್ರೆಶ್ ಫೀಲ್ ಕೊಡ್ತಿದ್ದು, ಸದ್ಯ ಟ್ರೈಲರ್ ಟಾಕ್ ಆಫ್ ದ ಟೌನ್ ಆಗಿದೆ. ಚೊಚ್ಚಲ ಚಿತ್ರದಲ್ಲೇ ಶ್ರೀದೇವಿ ಪುತ್ರಿ ಎಲ್ಲರ ಹುಬ್ಬೇರಿಸುತ್ತಿದ್ದು, ಭವಿಷ್ಯದ ನಟಿಯಾಗೋ ಎಲ್ಲಾ ಲಕ್ಷಣಗಳು ಎದ್ದು ಕಾಣ್ತಿದೆ. ಸದ್ಯ ಟ್ರೈಲರ್​ನಿಂದ ಸೆನ್ಸೇಷನ್ ಸೃಷ್ಟಿಸಿರುವ ಚಿತ್ರತಂಡ, ಮುಂದಿನ ತಿಂಗಳು ಅಂದ್ರೆ ಜುಲೈ 20ಕ್ಕೆ ವರ್ಲ್ಡ್​ ವೈಡ್ ಸಿನಿಮಾನ ರಿಲೀಸ್ ಮಾಡೋ ಸನ್ನಾಹದಲ್ಲಿದೆ.

Next Story

RELATED STORIES