Top

ಗೌರಿ ಲಂಕೇಶ್ ಹತ್ಯೆ ಪ್ರಕರಣ: ಮತ್ತಿಬ್ಬರು ಶಂಕಿತರು ವಶಕ್ಕೆ

ಗೌರಿ ಲಂಕೇಶ್ ಹತ್ಯೆ ಪ್ರಕರಣ: ಮತ್ತಿಬ್ಬರು ಶಂಕಿತರು ವಶಕ್ಕೆ
X

ಬೆಂಗಳೂರಲ್ಲಿ ಪತ್ರಕರ್ತೆ ಗೌರಿಲಂಕೇಶ್ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಮತ್ತಿಬ್ಬರು ಶಂಕಿತರನ್ನು ಎಸ್​ಐಟಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಿಂಧಗಿಯ ಹಿಂದೂಪರ ಸಂಘಟನೆಯ ಕಾರ್ಯಕರ್ತರಾದ ಪುರುಷೋತ್ತಮ್ ಮತ್ತು ಪರಮೇಶ್ ಅವರನ್ನು ವಶಕ್ಕೆ ಪಡೆದಿರುವ ಎಸ್​ಐಟಿ, ವಿಚಾರಣೆ ನಡೆಸಿದೆ.

ಅಮೋಲ್ ಕಾಳೆ ಮತ್ತು ಮನೋಹರ್ ಯವಡೆಗೆ ಬಿಜಾಪುರದ ಸಿಂಧಗಿ ಬಳಿ ಶೂಟಿಂಗ್​ ತರಬೇತಿಗೆ ಸಹಾಯ ಮಾಡಿದ ಶಂಕೆ ಇವರಿಬ್ಬರ ಮೇಲಿದೆ.

ಮನೋಹರ್ ಯವಡೆ ಹೇಳಿದ ಮಾಹಿತಿ ಆಧಾರದ ಮೇಲೆ ಇವರಿಬ್ಬರನ್ನು ವಶಕ್ಜೆ ಪಡೆದಿರುವ ಪೊಲೀಸರು ವಿಚಾರಣೆ ನಡೆದಿದ್ದು, ಇನ್ನಷ್ಟು ಸ್ಫೋಟಕ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.

Next Story

RELATED STORIES