Top

ರೋಲ್ಸ್​ ರಾಯ್ಸ್​ ಕಾರಿನಲ್ಲಿ ಕಸ ಸಾಗಿಸಿದ ರೋಚಕ ಕಥೆ ಗೊತ್ತಾ?

ರೋಲ್ಸ್​ ರಾಯ್ಸ್​ ಕಾರಿನಲ್ಲಿ ಕಸ ಸಾಗಿಸಿದ ರೋಚಕ ಕಥೆ ಗೊತ್ತಾ?
X

ರೋಲ್ಸ್ ರಾಯ್ಸ್... ಹೆಸರು ಕೇಳಿದ್ರೇನೇ ಮೈಯೆಲ್ಲಾ ಝುಂ ಅನ್ನುತ್ತೆ. ತಗೊಂಡ್ರೆ ಇಂಥದ್ದೊಂದು ಕಾರು ತಗೊಬೇಕು ಅನ್ನೋದು ಎಲ್ಲರ ಬಯಕೆ. ಆದರೆ ಇಂತಹ ಐಷಾರಾಮಿ ರೋಲ್ಸ್ ರಾಯ್ಸ್ ಕಾರು ನಮ್ಮ ದೇಶದಲ್ಲಿ ಕಸ ಸಂಗ್ರಹಿಸಲು ಬಳಸುತ್ತಿದ್ದಾರೆ ಅಂದರೆ ನಂಬುತ್ತಿರಾ? ನಂಬಲಸಾಧ್ಯವಾದರೂ ಇದು ನಿಜ. ಸುಮಾರು 300 ವರ್ಷಗಳ ಕಾಲ ಬ್ರಿಟಿಷರ ಕಪಿಮುಷ್ಠಿಯಲ್ಲಿದ್ದ ನಮ್ಮದೇಶ ಸ್ವಾತಂತ್ರ್ಯಗೊಂಡು ಅರ್ಧಶತಮಾನವೇ ಕಳೆದಿದೆ. ಬ್ರಿಟಿಷರ ವಿರುದ್ಧದ ಹೋರಾಟದ ವೇಳೆ ರಾಜರೊಬ್ಬರು ಕಾರು ಖರೀದಿಸಿ ಕಾರು ಕಂಪನಿಯನ್ನ ಬೀದಿಗೆ ತರುವ ಮೂಲಕ ಸೇಡು ತೀರಿಸಿಕೊಂಡರು. ಅದರ ಕಥೆ ಇಲ್ಲಿದೆ ನೋಡಿ.

[story-lines]

ಅಂಬರ್ ರಾಜ್ಯ ಅಂದ್ರೆ ಈಗಿನ ಜೈಪುರ್‌ನ ರಜಪೂತ ರಾಜರಾಗಿದ್ದ ಜೈಸಿಂಗ್ ಪ್ರಭಾಕರ್, ಒಮ್ಮೆ ಲಂಡನ್ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಜೈಸಿಂಗ್ ಲಂಡನ್‌ನ "ಬಾಂಡ್" ಬೀದಿಯಲ್ಲಿ ಸಾಮಾನ್ಯ ಪ್ರಜೆಯಂತೆ ನಡೆದು ಬರುತ್ತಿದ್ದರು. ಆಗ "ರೋಲ್ಸ್ ರಾಯ್ಸ್" ಕಾರಿನ ಶೋ ರೂಂ ಅವರ ಕಣ್ಣಿಗೆ ಬಿದಿತ್ತು. ಶೋ ರೂಂ ಒಳಗೆ ಬಂದಾಗ ಜೈಸಿಂಗ್‌ರಿಗೆ ಕಾರನ್ನು ಕೊಂಡುಕೊಳ್ಳುವ ಮನಸ್ಸಾಯಿತು. ಹೀಗಾಗಿ ಅಲ್ಲಿನ ಮಾಲೀಕನ ಬಳಿ ಕಾರಿನ ಬೆಲೆಯನ್ನು ವಿಚಾರಿಸಿದ್ರು. ಆದ್ರೆ, ಜೈಸಿಂಗ್ ಅವರ ಸಾಮಾನ್ಯ ವೇಷಭೂಷಣಗಳನ್ನು ನೋಡಿದ ಮಾಲೀಕ ಉಡಾಫೆಯಾಗಿ ಮಾತನಾಡಿದ.

ರೋಲ್ಸ್ ರಾಯ್ಸ್ ಶೋ ರೂಂ ಮಾಲೀಕನ ವರ್ತನೆಯಿಂದ ಅವಮಾನಗೊಂಡ ರಾಜ ಜೈಸಿಂಗ್, ನೇರವಾಗಿ ತಾವು ಉಳಿದುಕೊಂಡಿದ್ದ ಹೋಟೆಲ್‌ಗೆ ಹೋಗಿ, ತಮ್ಮ ಸೇವಕರಿಗೆ ತಾವು ಕಾರಿನ ಮಳಿಗೆಗೆ ಹೋಗಬೇಕೆಂದು ಆಜ್ಞೆ ಮಾಡಿದರು. ಈ ವೇಳೆ ಕಾರಿನ ಮಳಿಗೆಗೆ ರತ್ನಗಂಬಳಿ ಹಾಸಿನ ಮೇಲೆ, ರಾಜನ ಪೋಷಾಕಿನಲ್ಲಿ ಜೈಸಿಂಗ್ ಆಗಮಿಸಿದರು. ಇದನ್ನ ಕಂಡು ಕಂಗಾಲಾದ ಶೋ ರೂಂ ಮಾಲೀಕ ಸ್ವಲ್ಪ ಹೊತ್ತಿನ ಮುಂಚೆ ಇಲ್ಲಿಗೆ ಬಂದಿದ್ದ ಸಾಮಾನ್ಯ ವ್ಯಕ್ತಿ ಇವರೇನಾ?ಎಂದು ಆಶ್ಚರ್ಯ ವ್ಯಕ್ತಪಡಿಸಿದರು.

ಕಸ ತುಂಬಿಸಲು ಬಳಸಲು ಆದೇಶ

ಜೈಸಿಂಗ್, ಒಂದೇ ಬಾರಿಗೆ 6 ಕಾರುಗಳನ್ನು ಖರೀದಿಸಿ, ಸಾಗಾಟಾದ ವೆಚ್ಚವನ್ನು ತಾವೇ ಭರ್ತಿ ಮಾಡಿ ಭಾರತಕ್ಕೆ ತಂದರು. ಆದರೆ ಶೋ ರೂಮ್ ಮಾಲೀಕ ಮಾಡಿದ್ದ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳಲು, 6 ಐಷಾರಾಮಿ ಕಾರುಗಳನ್ನು ನಗರದ ಬೀದಿ ಕಸ ತುಂಬಿ ಸಾಗಿಸಲು ಬಳಸುವಂತೆ ತಮ್ಮ ರಾಜ್ಯದ ನಗರಪಾಲಿಕೆಗೆ ಜೈಸಿಂಗ್ ಆಜ್ಞೆ ಮಾಡಿದ್ರು. ಅದ್ರಂತೆ ರೋಲ್ಸ್ ರಾಯ್ಸ್ ಕಾರು ಕಸದ ವಾಹನವಾಯ್ತು.

ರೋಲ್ಸ್ ರಾಯ್ಸ್ ಕಾರು ಅಂಬರ್ ನಗರದಲ್ಲಿ ಕಸ ತುಂಬಿಸಲು ಬಳಕೆಯಾಗ್ತಿದೆ ಅನ್ನೋ ವಿಷಯ ಎಲ್ಲೆಡೆ ವ್ಯಾಪಕವಾಗಿ ಹರಡಿತ್ತು.. ಹೀಗಾಗಿ ರೋಲ್ಸ್ ರಾಯ್ಸ್ ಕಂಪನಿಯ ಪ್ರತಿಷ್ಠೆ ಮತ್ತು ಬೇಡಿಕೆ ಕುಸಿಯ ತೊಡಗುತ್ತದೆ. ಇದರಿಂದ ಕಂಗೆಟ್ಟ ಕಂಪನಿ ರಾಜ ಜೈಸಿಂಗ್ ಅವರಿಂದ ವಿವರಣೆ ಕೇಳಿತು. ಈ ವೇಳೆ ಜೈಸಿಂಗ್ ಲಂಡನ್ ಶೋರೂಮಿನಲ್ಲಿ ತಮಗಾದ ಅವಮಾನವನ್ನು ವಿವರಿಸಿದರು. ಕೂಡಲೇ ಕಂಪನಿ ತಮ್ಮಿಂದಾದ ತಪ್ಪಿಗೆ ಕ್ಷಮೆ ಕೇಳಿತು. ಅಷ್ಟಲ್ಲದೆ ಮತ್ತೆ 6 ಹೊಸ ಕಾರುಗಳನ್ನು ಕೊಡುತ್ತೇವೆ, ಕಾರಿನಲ್ಲಿ ಕಸ ಸಾಗಿಸಬೇಡಿ ಎಂದು ಬೇಡಿಕೊಂಡಿತು. ಕಂಪನಿಯ ಕೋರಿಕೆ ಮನ್ನಿಸಿದ ರಾಜ ಜೈಸಿಂಗ್, ಕಸ ಸಾಗಾಟವನ್ನು ನಿಲ್ಲಿಸಿ ಆರು ಹೊಸ ಕಾರುಗಳನ್ನು ಉಚಿತವಾಗಿ ಪಡೆದರು. ಈ ಮೂಲಕ ಬ್ರಿಟಿಷ್ ಕಂಪನಿಯ ರೋಲ್ಸ್ ರಾಯ್ಸ್‌ನಿಂದ ಆದ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಂಡರು.

ಒಟ್ನಲ್ಲಿ ಇತಿಹಾಸ ಏನೇ ಹೇಳಿದ್ರೂ.. ದುಬಾರಿ, ಐಷಾರಾಮಿ ಕಾರುಗಳನ್ನ ಖರೀದಿಸಿ, ಅದನ್ನ ಕಸ ಸಾಗಾಟಕ್ಕೆ ಬಳಿಸಿ ಬ್ರಿಟಿಷ್ ಕಂಪನಿಗೆ ಬುದ್ಧಿ ಕಲಿಸಿದ ರಾಜ ಜೈಸಿಂಗ್ ನಮ್ಮ ದೇಶದ ಹೆಮ್ಮೆ.

Next Story

RELATED STORIES