Top

ಬೆಳಗಾವಿ "ಸಾಂಬ್ರಾ ನಿಲ್ದಾಣ"ದಿಂದ ವಿಮಾನಗಳ ಹಾರಾಟ್ ಸ್ಥಗಿತ.?

ಬೆಳಗಾವಿ ಸಾಂಬ್ರಾ ನಿಲ್ದಾಣದಿಂದ ವಿಮಾನಗಳ ಹಾರಾಟ್ ಸ್ಥಗಿತ.?
X

[story-lines]

ಬೆಳಗಾವಿ : ರಾಜ್ಯದ ಅತ್ಯಂತ ಹಳೆಯ, ಕುಂದಾನಗರಿ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟ ಜುಲೈಯಿಂದ ಸ್ಥಗಿತವಾಗಲಿದೆ. ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ಹುಬ್ಬಳ್ಳಿ ವಿಮಾನ ನಿಲ್ದಾಣ ಆಯ್ಕೆಯಾಗಿದ್ದರಿಂದ, ಬೆಳಗಾವಿಯಿಂದ ವಿಮಾನ ಹಾರಾಟಕ್ಕೆ ದಿನೇ ದಿನೇ ಕತ್ತರಿ ಬೀಳುತ್ತಿದೆ. ಈಗ ಬೆಳಗಾವಿಯಿಂದ ಬೆಂಗಳೂರಿಗೆ ಹಾರಾಟ ನಡೆಸುತ್ತಿರುವ ಸ್ಪೈಸ್ ಜೆಟ್ ವಿಮಾನವೂ ಜುಲೈ ತಿಂಗಳಿಂದ ಯಾವುದೇ ಬುಕ್ಕಿಂಗ್ ಸ್ವೀಕರಿಸುತ್ತಿಲ್ಲ. ಇದು ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಕುಂದಾನಗರಿಯ ಅತ್ಯಂತ ಹಳೆಯ ವಿಮಾನ ನಿಲ್ದಾಣ "ಸಾಂಬ್ರಾ"

ಹೌದು... ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣ ರಾಜ್ಯದ ಅಂತ್ಯತ್ಯ ಹಳೆಯದಾದ್ದು, ಬೆಳಗಾವಿ ವಿಮಾನ ನಿಲ್ದಾಣವನ್ನ 141 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿಸಲಾಗಿದೆ. ಈವರೆಗೂ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಿಂದ ಬೆಂಗಳೂರು, ಚೈನ್ಯ, ಹೈದ್ರಾಬಾದ್, ಮುಂಬೈ ಹೀಗೆ ದಿನವೂ ಹತ್ತಾರು ವಿಮಾನಗಳು ಹಾರಾಟ್ ನಡೆಸುತ್ತಿದ್ದವು. ಕಳೆದ ಕೆಲವು ದಿನಗಳಿಂದ ಮುಂಬೈ, ಹೈದ್ರಾಬಾದ್, ಚೈನ್ನೈಗೆ ಫ್ಲೈಟ್‌ಗಳು ಸೇವೆ ಸ್ಥಗಿತಗೊಂಡಿವೆ. ಇನ್ನು ಬೆಳಗಾವಿಯಿಂದ ಬೆಂಗಳೂರು ಮಧ್ಯೆ ಇದ್ದ ಎರಡು ಫ್ಲೈಟಗಳಲ್ಲಿ ಈಗ ಒಂದೇ ಒಂದು ಹಾರಾಟ್ ನಡೆಸುತ್ತಿದ್ದು, ಅದು ಕೂಡಾ ಜುಲೈ ತಿಂಗಳಿನಿಂದ ಸ್ಥಗೀತವಾಗುವ ಲಕ್ಷಣ ಕಂಡು ಬರುತ್ತಿದೆ.

ಉಡಾನ್ ಯೋಜನೆಗೆ ಬೆಳಗಾವಿಯಿಂದ ಹುಬ್ಬಳ್ಳಿಗೆ ಶಿಫ್ಟ್.?

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದಲ್ಲಿ ಹವಾಯಿ ಚಪ್ಪಲಿ ಹಾಕಿಕೊಳ್ಳುವ ವ್ಯಕ್ತಿಗೂ ಅಗ್ಗದ ದರದಲ್ಲಿ ವಿಮಾನಯಾನದ ಸೌಲಭ್ಯ ಸಿಗಬೇಕೆಂದು ಉಡಾನ್ ಯೋಜನೆ ಜಾರಿಗೊಳಿಸಿದ್ದಾರೆ. ಈ ಉಡಾನ್ ಯೋಜನೆಯಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣ ಆಯ್ಕೆಯಾಗಿದೆ. ಹೀಗಾಗಿ ಬೆಳಗಾವಿಯಿಂದ ಹಾರಾಟ್ ಮಾಡುತ್ತಿದ್ದ ಸ್ಪೈಸ್ ಜೇಟ್ ಪ್ಲೈಟಗಳು ಈಗ ಹುಬ್ಬಳ್ಳಿಗೆ ಸ್ಥಳಾಂತರಗೊಂಡಿವೆ.

ಈ ಉಡಾನ್ ಯೋಜನೆಯಲ್ಲಿ ವಿಮಾನಯಾನ ಕಂಪನಿಗಳಿಗೆ ಸರ್ಕಾರದ ಸಬ್ಸಿಡಿ ಸೌಲಭ್ಯ ದೊರೆಯುತ್ತದೆ. ಹೀಗಾಗಿ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಿಂದ ಹಾರಾಟ್ ನಡೆಸುತ್ತಿದ್ದ ಪ್ಲೈಟಗಳು ಈಗ ಒಂದೊಂದಾಗಿ ಹುಬ್ಬಳ್ಳಿಯಿಂದ ಹಾರಾಟ್ ಆರಂಭಿಸಿವೆ.

ಮರೆಯಾಗಲಿದೆ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಲೋಹದ ಹಕ್ಕಿಗಳ ಹಾರಾಟ

ಇನ್ನು ಈ ವರೆಗೂ ಬೆಳಗಾವಿಯಿಂದ ಹಾರಾಟ್ ನಡೆಸುತ್ತಿದ್ದ ಬಹುಪಾಲು ಪ್ಲೈಟಗಳು ಶೇ.70ರಷ್ಟು ಫುಲ್ ಆಗಿರುತ್ತಿದ್ದವು. ಶೇ.40ರಷ್ಟು ಟಿಕೆಟ್ ಬುಕ್ಕಿಂಗ್ ಆದ್ರೆ ಮಾತ್ರ ನಷ್ಟದಲ್ಲಿರುವ ಫ್ಲೈಟ್ ಕಂಪನಿಗಳನ್ನು ಉಳಿಸಬಹುದು ಎಂದು ಊಹಿಸಾಗಿದೆ. ಆದ್ರೆ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಿಂದ ಹಾರಾಟ್ ನಡೆಸುತ್ತಿದ್ದ ವಿಮಾನಗಳಲ್ಲಿ ಪ್ರಯಾಣಿಕರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದರೂ, ಪ್ಲೈಟ್ ಸೇವೆ ಸ್ಥಗೀತಗೊಳಿಸುತ್ತಿರುವುದು ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿದೆ.

ಆತಂಕದಲ್ಲಿ ಬೆಳಗಾವಿ ಭಾಗದ ವಿಮಾನ ಪ್ರಯಾಣಿಕರು

ಒಟ್ಟ್ನಲ್ಲಿ ಜುಲೈ ತಿಂಗಳಿಂದ ಪ್ಲೈಟ್ ನಿಲುಗಡೆ ಆಗುತ್ತಿರುವುದಕ್ಕೆ, ಬೆಳಗಾವಿ, ಕೋಲ್ಲಾಪುರ, ವಿಜಯಪುರ, ಬಾಗಲಕೋಟೆ ಪ್ರಯಾಣಿಕರಲ್ಲಿ ಆತಂಕ ಶುರುವಾಗಿದೆ. ಹೀಗಾಗಿ ಇನ್ನಾದ್ರು ಸ್ಥಳೀಯ ಜನಪ್ರತಿನಿಧಿಗಳು ಮತ್ತು ಸರ್ಕಾರ ಎಚ್ಚೆತ್ತುಕೊಂಡು ಬೆಳಗಾವಿಯಿಂದ ಪ್ಲೈಟ್ ಸೇವೆ ಸ್ಥಗೀತಗೊಳ್ಳದಂತೆ ಕ್ರಮಕೈಗೊಳ್ಳಬೇಕಿದೆ ಎಂಬುದು ಈ ಭಾಗದ ಜನರ ಮನವಿಯಾಗಿದೆ.

ವರದಿ : ಶ್ರೀಧರ ಕೋಟಾರಗಸ್ತಿ, ಟಿವಿ5 ಬೆಳಗಾವಿ

Next Story

RELATED STORIES