Top

ರಾಜ್ಯಪಾಲರ ಮನೆಯಲ್ಲಿ ಠಿಕಾಣಿ: ದೆಹಲಿಯಲ್ಲಿ ಕೇಜ್ರಿವಾಲ್ ಹೈಡ್ರಾಮಾ

ರಾಜ್ಯಪಾಲರ ಮನೆಯಲ್ಲಿ ಠಿಕಾಣಿ: ದೆಹಲಿಯಲ್ಲಿ ಕೇಜ್ರಿವಾಲ್ ಹೈಡ್ರಾಮಾ
X

ನವದೆಹಲಿ: ರಾಜಧಾನಿ ದೆಹಲಿಯಲ್ಲಿ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರದ ನಡುವೆ ಕಲಹ ಮತ್ತೆ ಸ್ಫೋಟಗೊಂಡಿದ್ದು, ಹೈಡ್ರಾಮಾಗೆ ಕಾರಣವಾಗಿದೆ. ರಾಜ್ಯಪಾಲರ ವಿರುದ್ಧ ಗಂಭೀರ ಅರೋಪ ಮಾಡಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ಸೋಮವಾರ ರಾತ್ರಿಯಿಂದ ರಾಜ್ಯಪಾಲರ ನಿವಾಸದಲ್ಲೇ ಬೀಡು ಬಿಟ್ಟಿದ್ದು, ಸಂಪುಟ ಸಹದ್ಯೋಗಿಳ ಜೊತೆ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ.

ಲೆಫ್ಟಿನೆಂಟ್ ಗವರ್ನರ್ ಎಸ್ಮಾ ಆಕ್ಟ್ ಜಾರಿ ತರಲು ಅವಕಾಶ ಕೊಡದ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಈ ಹೋರಾಟ ನಡೆಸುತ್ತಿದ್ದು, ಕಳೆದ 4 ತಿಂಗಳಿಂದ ದೆಹಲಿ ಸರ್ಕಾರದ ಯಾವ ಅಧಿಕಾರಿಗಳು ಸಹಕಾರ ನೀಡುತ್ತಿಲ್ಲ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.

ದೆಹಲಿ ಸರ್ಕಾರದ ಹೆಚ್ಚುವರಿ ನಿರ್ದೇಶಕ ಮೇಲೆ ಕೇಜ್ರಿವಾಲ್ ಮನೇಲಿ ದಾಳಿ ನಡೆದ ದಿನದಿಂದ ಎಲ್ಲಾ ಐಎಎಸ್ ಅಧಿಕಾರಿಗಳು ಕೇಜ್ರಿವಾಲ್ ಸರ್ಕಾರಕ್ಕೆ ಬಹಿಷ್ಕಾರ ಹೂಡಿದ್ದರು ಹಾಗಾಗಿ ಎಸ್ಮಾ ಆಕ್ಟ್ ತುರ್ತು ಪರಿಸ್ಥಿತಿ ಜಾರಿಗೆ ತರಲು ಕೇಜ್ರಿವಾಲ್ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಒಪ್ಪದ ರಾಜ್ಯಪಾಲರ ಮನೆಯಲ್ಲಿ ಕೇಜ್ರಿವಾಲ್ ಧರಣಿ ನಡೆಸುತ್ತಿದ್ದಾರೆ.

Next Story

RELATED STORIES