Top

ಖಾಜಾ ಅಮೀನ್ ದರ್ಗಾದ ಉರುಸ್ : ಗಮನ ಸೆಳೆದ ಎತ್ತಿನ ಬಂಡಿ ರೇಸ್

ಖಾಜಾ ಅಮೀನ್ ದರ್ಗಾದ ಉರುಸ್ : ಗಮನ ಸೆಳೆದ ಎತ್ತಿನ ಬಂಡಿ ರೇಸ್
X

ವಿಜಯಪುರ : ರೆಡಿ ಒನ್... ಟೂ..ಥ್ರೀ.... ಎಂದು ಹೇಳಿದ್ದೇ ತಡಾ ಬಂಡಿಗಳ ರೇಸ್ ಆರಂಭವಾಯಿತು. ನಾ ಮುಂದು ತಾ ಮುಂದೆ ಎಂದು ಬಂಡಿಗಳು ಓಡುತ್ತಿದ್ದರೆ, ನೆರೆದ ಜನರಿಗೆ ರೋಮಾಂಚನ ಹಾಗೂ ಮನೋರಂಜನೆ ಸಿಕ್ಕಿತು.

ವಿಜಯಪುರ ನಗರದ ಖಾಜಾ ಅಮೀನ್ ದರ್ಗಾದ ಉರುಸ್ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ ಬಂಡಿಗಳ ರೇಸ್ ಆಯೋಜನೆ ಮಾಡಲಾಗಿತ್ತು. ಟಕ್ಕೆಯಿಂದ ರೇಡಿಯೋ ಸ್ಟೇಷನ್ ವರೆಗೆ ಒಟ್ಟು ನಾಲ್ಕು ಕಿಲೋ ಮೀಟರ್ ದೂರವನ್ನು ಮುಟ್ಟಿ ವಾಪಸ್ ಬರುವ ಬಂಡಿ ಜಯ ಗಳಿಸಿದ ಹಾಗೆ ಎಂದು ಸ್ಪರ್ದೆ ಆಯೋಜಕರು ನಿಯಮ ಮಾಡಿದ್ದರು. ಮೂರು ಪ್ರತ್ಯೇಕ ವಿಭಾಗಗಳಲ್ಲಿ ನಡೆದ ಬಂಡಿ ರೇಸ್ ಕಾಂಪಿಟೀಷನ್ ಕಂಡ ನೆರೆದ ಸಾವಿರಾರು ಜನರು ಫೂಲ್ ಎಂಜಾಯ್ ಮಾಡಿದರು.

ಬಂಡಿಗೆ ಒಂದು ಎತ್ತು ಹಾಗೂ ಒಂದು ಕುದುರೆಯನ್ನು ಕಟ್ಟಿ ಓಡಿಸಲಾಗುತ್ತದೆ. ಈ ರೇಸ್ ನಲ್ಲಿ ಸುಮಾರು 30 ಕ್ಕೂ ಅಧಿಕ ಬಂಡಿ ಭಾಗಿಯಾಗಿದ್ದವು. ಇದನ್ನು ಮೊದಲು ಆರಂಭಿಸಲಾಯಿತು. ನಂತರ ಎರಡನೇ ಯ ಸುತ್ತಿನಲ್ಲಿ ಹೋರಿಗಳ ಓಟಗಳು, ನಂತರ ಮೂರನೇ ಸುತ್ತಿನಲ್ಲಿ ಎತ್ತುಗಳ ಓಟಗಳು ನಡೆದವು. ಮೂರು ವಿಭಾಗಗಳಲ್ಲಿ ನಡೆದ ಬಂಡಿ ಓಟ ಸ್ಪರ್ದೆ ಮಾತ್ರ ಬಹಳ ರೋಮಾಂಚನಕಾರಿಯಾಗಿದ್ದವು. ಮಕ್ಕಳಂತೆ ಸಾಖಿ ಸಲುಹಿದ್ದ ಜಾನುವಾರುಗಳ ಮಾಲೀಕರು ಸ್ಪರ್ದೆಯಲ್ಲಿ ಗೆಲ್ಲಲು ಹರ ಸಾಹಸ ಪಟ್ಟರು.

ಹೀಗೆ ಮೂರು ವಿಭಾಗಗಳಲ್ಲಿ ನಡೆದ ಸ್ಪರ್ದೆಗಳಲ್ಲಿ ಭಾಗಿಯಾಗಲು ನೆರೆಯ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳ ರೈತರು ಆಗಮಿಸಿದ್ದರು. ಮೂರು ವಿಭಾಗಗಳಲ್ಲಿ ನಡೆದ ಸ್ಪರ್ದೆಯಲ್ಲಿ ವಿಜೇತ ತಂಡಗಳಿಗೆ ಕ್ರಮವಾಗಿ ಮೂರು ನಗದು ಬಹುಮಾನನ್ನು ನೀಡಲಾಗುತ್ತದೆ. ಎತ್ತು ಹಾಗೂ ಕುದುರೆ ಜೋಡಿಯಲ್ಲಿ ಮೊದಲ ಮೂರು ಸ್ಥಾನಗಳಿಗೆ ಕ್ರಮವಾಗಿ ಮೋದಲನೇ ಬಹುಮಾನ ಒಂದು ಲಕ್ಷ, ಎರಡನೇಯ ಬಹುಮಾನ 25,000 ಹಾಗೂ ಮೂರನೇ ಬಹುಮಾನ 15,000 ರೂಪಾಯಿ ನೀಡಲಾಯಿತು.

ಇನ್ನು ಹೋರಿಗಳ ಬಂಡಿ ಓಟದಲ್ಲಿ ಪ್ರಥಮ ಸ್ಥಾನಕ್ಕೆ 2 ಲಕ್ಷ, ದ್ವಿತೀಯ ಸ್ಥಾನಕ್ಕೆ 1 ಲಕ್ಷ ಹಾಗೂ ತೃತೀಯ ಸ್ಥಾನಕ್ಕೆ 50,000 ನಗದು ಬಹುಮಾನ ನೀಡಲಾಯಿತು. ಇದೇ ರೀತಿ ಎತ್ತಿನ ಬಂಡಿ ಓಟದಲ್ಲಿ ಪ್ರಥಮ ಬಂದವರಿಗೆ 5 ಲಕ್ಷ, ದ್ವಿತೀಯ ಬಂದವರಿಗೆ 2 ಲಕ್ಷ ಹಾಗೂ ತೃತೀಯ ಸ್ಥಾನ ಪಡೆದವರಿಗೆ 1 ಲಕ್ಷ ನಗದು ಬಹುಮಾನ ನೀಡಿ ಗೌರವಿಸಲಾಯಿತು.

ಇನ್ನು ಈ ರಿತಿ ರೇಸ್ ಆಯೋಜನೆ ಮಾಡಿದ್ದು ರೈತಾಪಿ ಜನರಿಗೆ ಸಹಾಯವಾಗುತ್ತದೆ, ಜನರಿಗೆ ಮನರಂಜನೆಯಾಗುತ್ತದೆ. ನಾವು ನಮ್ಮ ಮಕ್ಕಳಂತೆ ಸಾಕಿದ ಜಾನುವಾರುಗಳನ್ನು ವಿಶೇಷವಾಗಿ ರೇಸ್ ಗಾಗಿಯೇ ತಯಾರಿ ಮಾಡಿರುತ್ತೇವೆ. ಅವುಗಳಿಗೆ ಉತ್ತಮ ಆಹಾರ ನೀಡಿ ಬೆಳೆಸಲಾಗಿರುತ್ತದೆ ಎಂದು ಎತ್ತುಗಳ ಓಟದಲ್ಲಿ ಪ್ರಥಮ ಸ್ಥಾನ ಗಳಿಸಿದ ಮಹಾರಾಷ್ಟ್ರ ರಾಜ್ಯದ ಮೀರಜ್ ಪಟ್ಟಣದ ಹಮೀದ್ ಖುರ್ಮೆ.

ಈ ರೀತಿ ಬಂಡಿಗಳ ಓಟದಲ್ಲಿ ಹೋರಿ ಹಾಗೂ ಎತ್ತುಗಳಿಗೆ ಹಿಂಸೆ ನೀಡಿದ ಘಟನೆಯೂ ನಡೆದಿವೆ. ರೇಸ್ ನಲ್ಲಿ ಗೆಲ್ಲಲು ವಾಮ ಮಾರ್ಗ ಅನುಸರಿಸಿದ್ದು ಕಂಡು ಬಂದಿದೆ. ಓಟವನ್ನು ಗೆಲ್ಲಲು ಎತ್ತು ಹಾಗೂ ಹೋರಿ ವೇಗವಾಗಿ ಓಡಲು ಅವುಗಳಿಗೆ ಹಿಂಸೆ ನೀಡಿದ್ದಾರೆ. ಬ್ಯಾಟರಿಗಳ ಮೂಲಕ ಎತ್ತು ಹಾಗೂ ಹೋರಿಗಳಿಗೆ ಕರತೆಂಟ್ ಶಾಕ್ ನೀಡಿ ಹಿಂಸಿಸಲಾಗಿದೆ.

ರೇಸ್ ಸ್ಪರ್ದೆಗಳ ಆಯೋಜಕರು ಕರೆಂಟ್ ಶಾಕ್ ನೀಡಬಾರದೆಂಬ ನಿಯಮ ಜಾರಿ ಮಾಡಿದ್ದರೂ ಸಹ ಕೆಲ ಎತ್ತು ಹಾಗೂ ಹೋರಿಗಳ ಮಾಲೀಕರು ಕರೆಂಟ್ ಶಾಕ್ ನೀಡುವುದರ ಮೂಲಕ ಜಾನುವಾರುಗಳಿಗೆ ಹಿಂಸಿಸುತ್ತಿದ್ದ ಘಟನೆಗೂ ಸಾಕ್ಷಿಯಾಯ್ತು. ಇಂಥವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಇಷ್ಟರ ಹೊರತಾಗಿ ವಿವಿಧ ಪ್ರಕಾರ ರೇಸ್‌ಗಳು ಎಲ್ಲರೂ ಎಂಜಾಯ್ ಮಾಡುವಂತೆ ಮಾಡಿದ್ದು ಮಾತ್ರ ನಿಜ.

ವರದಿ : ಶರಣು ಮಸಳಿ, ಟಿವಿ5 ವಿಜಯಪುರ

Next Story

RELATED STORIES