Top

#TV5 EXCLUSIVE ಕುರುಕ್ಷೇತ್ರ ಬಿಡುಗಡೆಗೆ ಕೊನೆಗೂ ದಿನಾಂಕ ನಿಗದಿ

#TV5 EXCLUSIVE ಕುರುಕ್ಷೇತ್ರ ಬಿಡುಗಡೆಗೆ ಕೊನೆಗೂ ದಿನಾಂಕ ನಿಗದಿ
X

ಬೆಂಗಳೂರು: ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾ ಕುರುಕ್ಷೇತ್ರ ರಿಲೀಸ್ ಡೇಟ್ ಕೊನೆಗೂ ಫೈನಲ್ ಆಗಿದೆ. ಯಾವಾಗ ಚಿತ್ರ ರಿಲೀಸ್ ಆಗುತ್ತೆ ಅಂತ ಕುತೂಹಲದಿಂದ ಕಾಯ್ತಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ನಿರ್ಮಾಪಕ ಮುನಿರತ್ನ ಸಿಹಿ ಸುದ್ದಿ ಕೊಟ್ಟಿದ್ದಾರೆ. TV5 ಜೊತೆ ಮಾತನಾಡಿದ ನಿರ್ಮಾಪಕ ಮುನಿರತ್ನ, ಜುಲೈ ಅಂತ್ಯಕ್ಕೆ ಆಡಿಯೋ ಬಿಡುಗಡೆ ಆಗಲಿದ್ದು, ಆಗಸ್ಟ್ ಅಂತ್ಯಕ್ಕೆ ಸಿನಿಮಾ ತೆರೆ ಮೇಲೆ ರಾರಾಜಿಸಲಿದೆ.

ದರ್ಶನ್ ಜೊತೆ ಅಂಬರೀಶ್, ಅರ್ಜುನ್ ಸರ್ಜಾ, ರವಿಚಂದ್ರನ್, ಭಾರತಿ ವಿಷ್ಣುವರ್ಧನ್, ಶ್ರೀನಾಥ್, ನಿಖಿಲ್, ಹೀಗೆ ದೊಡ್ಡ ತಾರಾದಂಡೇ ಈ ಸಿನಿಮಾದಲ್ಲಿದೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಿನಿಮಾ ಖ್ಯಾತಿಯ ನಾಗಣ್ಣ ಮತ್ತು ಕವಿರತ್ನ ಡಾ ವಿ. ನಾಗೇಂದ್ರ ಪ್ರಸಾದ್ ಜಂಟಿ ನಿರ್ದೇಶನದಲ್ಲಿ ಮೂಡಿಬರುತ್ತಿದೆ ಕುರುಕ್ಷೇತ್ರ. ಬಾಹುಬಲಿ ರೀತಿ ಮಹಾ ದೃಶ್ಯಕಾವ್ಯವಾಗಿ ಹೊರಹೊಮ್ಮಲಿರುವ ಕುರುಕ್ಷೇತ್ರ, 2D ಮತ್ತು 3D ಎರಡರಲ್ಲೂ ತೆರೆಗಪ್ಪಳಿಸಲಿದೆ.

ಈಗಾಗ್ಲೇ ಚಿತ್ರದ 2D ಅವತರಣಿಕೆ ಸಿದ್ದವಾಗಿದ್ದು, 3D ಅವತರಣಿಕೆಯನ್ನ ಸಿದ್ದಗೊಳಿಸುವಲ್ಲಿ ತಾಂತ್ರಿಕವರ್ಗ ಕಾರ್ಯನಿರತವಾಗಿದೆ. ಅದೇನೇ ಇರಲಿ, 50ಕೋಟಿ ಭಾರೀ ಬಜೆಟ್​ನಲ್ಲಿ ತಯಾರಾಗ್ತಿರುವ ಕುರುಕ್ಷೇತ್ರ ಬಾಕ್ಸ್​ ಆಫೀಸ್​ನಲ್ಲಿ ಧೂಳೀಪಟ ಮಾಡುವುದೇ ಎಂಬುದು ಕಾದು ನೋಡಬೇಕಿದೆ.

Next Story

RELATED STORIES