ಬಿಜೆಪಿ ಕಾರ್ಯಕರ್ತರ ಮೇಲೆ ತಲಾವರ್ನಿಂದ ಹಲ್ಲೆ ನಡೆಸಿದ ತುಳುಚಿತ್ರ ನಟ

X
TV5 Kannada11 Jun 2018 10:06 AM GMT
ಮಂಗಳೂರು: ಬಿಜೆಪಿ ಕಾರ್ಯಕರ್ತರ ಮೇಲೆ ತುಳು ಚಿತ್ರ ನಟ ಸುರೇಂದ್ರ ತಲವಾರ್ನಿಂದ ದಾಳಿ ನಡೆಸಿದ್ದರಿಂದ ಇಬ್ಬರು ಗಾಯಗೊಂಡ ಘಟನೆ ಬಿ.ಸಿ. ರೋಡ್ನಲ್ಲಿ ನಡೆದಿದೆ.
[embedyt] https://www.youtube.com/watch?v=DQF37uMvr_Q[/embedyt]
'ಚಾಲಿಪೊಲೀಲ್' ಎಂಬ ತುಳು ಚಿತ್ರ ನಟಿಸಿದ್ದ ಸುರೇಂದ್ರ ಈ ದಾಳಿ ನಡೆಸಿದ್ದು, ರಸ್ತೆಯಲ್ಲಿ ಲಾಂಗ್ ಹಿಡಿದು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆಗೆ ಯತ್ನಿಸುತ್ತಿರುವ ದೃಶ್ಯಗಳು ವೈರಲ್ ಆಗಿದೆ. ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ರಮಾನಾಥ್ ರೈ ಬೆಂಬಲಿಗರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಫೇಸ್ಬುಕ್ನಲ್ಲಿ ವಾದ ವಿವಾದ ಉಂಟಾಗಿತ್ತು. ಇದೇ ವಿಷಯವಾಗಿ ಹಲ್ಲೆ ನಡೆದಿದೆ ಎಂದು ಹೇಳಲಾಗಿದೆ.
ದಕ್ಷಿಣ ಕನ್ನಡದ ಬಿ.ಸಿ.ರೋಡ್ನ ಬಡ್ಡಕಟ್ಟಿನಲ್ಲಿ ಈ ಘಟನೆ ನಡೆದಿದೆ. ಸುರೇಂದ್ರ ಅವರ ದಾಳಿಯಿಂದ ಗಣೇಶ್ ರೈ ಮಾಣಿ, ಪುಷ್ಪರಾಜ್ ಗಾಯಗೊಂಡಿದ್ದು, ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿ.ಸಿ.ರೋಡ್ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Next Story