Top

ವಿಶ್ವದ ನಂ.1 ಇಂಗ್ಲೆಂಡ್​ಗೆ ಆಘಾತ​: ಸ್ಕಾಟ್ಲೆಂಡ್ ಒಡ್ಡಿದ್ದ ಗುರಿ 371

ವಿಶ್ವದ ನಂ.1  ಇಂಗ್ಲೆಂಡ್​ಗೆ ಆಘಾತ​: ಸ್ಕಾಟ್ಲೆಂಡ್ ಒಡ್ಡಿದ್ದ ಗುರಿ 371
X

ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್ ಕಾಲಂ ಮೆಕ್​ಲಾಯ್ಡ್​ ಸಿಡಿಸಿದ 140 ರನ್​ಗಳ ಸಾಹಸದಿಂದ ಸ್ಕಾಟ್ಲೆಂಡ್​ 6 ರನ್​ನ ರೋಚಕ ಜಯ ಸಾಧಿಸಿದೆ. ಇದರೊಂದಿಗೆ ಸ್ಕಾಟ್ಲೆಂಡ್​ ಕ್ರಿಕೆಟ್ ಪಾಠ ಹೇಳಿಕೊಟ್ಟ ಇಂಗ್ಲೆಂಡ್ ವಿರುದ್ಧ ಜಯ ಸಾಧಿಸಿ ಇತಿಹಾಸ ಬರೆದಿದೆ.

ಭಾನುವಾರ ತಡರಾತ್ರಿ ನಡೆದ ರೋಚಕ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸ್ಕಾಟ್ಲೆಂಡ್​ 50 ಓವರ್​ಗಳಲ್ಲಿ 5 ವಿಕೆಟ್​ಗೆ 371 ರನ್ ಗುರಿ ಒಡ್ಡಿತು. ಬೆಟ್ಟದಂತಹ ಮೊತ್ತವನ್ನು ಬೆಂಬತ್ತಿದ ಇಂಗ್ಲೆಂಡ್ ಬೈರ್​ಸ್ಟೋ ಅವರ ಶತಕದ ಹೊರತಾಗಿಯೂ 48.5 ಓವರ್ ಗಳಲ್ಲಿ 365 ರನ್ ಗಳಿಸಲಷ್ಟೇ ಶಕ್ತವಾಗಿ ದುರ್ಬಲ ತಂಡದ ಎದುರು ಶರಣಾಯಿತು.

ಮೊದಲು ಬ್ಯಾಟ್ ಮಾಡಿದ ಸ್ಕಾಟ್ಲೆಂಡ್​ ಬೃಹತ್​ ಮೊತ್ತ ಪೇರಿಸಲು ಕಾಲಂ ಮೆಕ್​ಲಾಯ್ಡ್ ಕಾರಣ. ಮೆಕ್​ಲಾಯ್ಡ್ 94 ಎಸೆತಗಳಲ್ಲಿ 16 ಬೌಂಡರಿ ಹಾಗೂ 3 ಸಿಕ್ಸರ್ ಸೇರಿದ 140 ರನ್​ ಚಚ್ಚಿದರು. ಇದಕ್ಕೂ ಮುನ್ನ ಕ್ರಾಸ್ (48) ಮತ್ತು ಕೊಯಿಟ್ಜರ್ (58) ಮೊದಲ ವಿಕೆಟ್​ಗೆ ಶತಕದ ಜೊತೆಯಾಟವಾಡಿ ಬೃಹತ್ ಮೊತ್ತದ ಸೂಚನೆ ನೀಡಿದ್ದರು.

Next Story

RELATED STORIES