Top

ಬೆಳ್ಳಿತೆರೆಗೆ ಮತ್ತೆ ವಾಪಸ್ಸಾಗ್ತಾರಂತೆ ಪದ್ಮಾವತಿ!

ಬೆಳ್ಳಿತೆರೆಗೆ ಮತ್ತೆ ವಾಪಸ್ಸಾಗ್ತಾರಂತೆ ಪದ್ಮಾವತಿ!
X

ಸ್ಯಾಂಡಲ್​ವುಡ್​ನ ಮೋಹಕ ತಾರೆ ರಮ್ಯಾ ಮತ್ತೆ ಚಿತ್ರರಂಗಕ್ಕೆ ವಾಪಸ್ಸಾಗ್ತಿದ್ದಾರೆ. ಕಳೆದ ಮೂರ್ನಾಲ್ಕು ವರ್ಷದಿಂದ ರಾಜಕಾರಣದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು, ಅಲ್ಲೇ ಸಿಕ್ಕಾಪಟ್ಟೆ ಬ್ಯುಸಿ ಆಗಿಬಿಟ್ಟಿದ್ದ ರಮ್ಯಾ 2019ರ ನಂತರ ಮತ್ತೆ ಬಣ್ಣ ಹಚ್ಚೋ ಸೂಚನೆ ಕೊಟ್ಟಿದ್ದಾರೆ. ಇದು ಇಡೀ ಕನ್ನಡ ಚಿತ್ರರಂಗಕ್ಕೆ ಖುಷಿ ಕೊಟ್ಟಿದೆ. ಅದ್ರಲ್ಲೂ ರಮ್ಯಾ ಫ್ಯಾನ್ಸ್​ಗೆ ಎಲ್ಲಿಲ್ಲದ ಸಂತಸ ತಂದಿದೆ.

2003ರಿಂದ 2012ರ ವರೆಗೆ ಹೆಚ್ಚೂ ಕಡಿಮೆ ಒಂದು ದಶಕದ ಕಾಲ ಸ್ಯಾಂಡಲ್​ವುಡ್ ಸಿಲ್ವರ್ ಸ್ಕ್ರೀನ್​ನಲ್ಲಿ ನಂಬರ್ ಒನ್ ನಟಿಯಾಗಿ ಮಿಂಚಿದ ರಮ್ಯಾ, ಬಹುದೊಡ್ಡ ಅಭಿಮಾನಿ ಬಳಗ ಸಂಪಾದಿಸಿಕೊಂಡರು. ದೊಡ್ಡ ದೊಡ್ಡ ಸ್ಟಾರ್​ಗಳ ಜೊತೆ ನಟಿಸಿದ ರಮ್ಯಾ, ಆಲ್ಮೋಸ್ಟ್ ಎಲ್ಲಾ ಬ್ಲಾಕ್ ಬಸ್ಟರ್ ಅನಿಸಿಕೊಂಡವು. ಚಿತ್ರರಂಗದಲ್ಲಿ ಉತ್ತುಂಘಕ್ಕೇರಿದ ಸಮಯದಲ್ಲೇ ರಾಜಕೀಯ ಕಡೆ ಒಲವು ತೋರಿದ ರಮ್ಯಾ ಮಂಡ್ಯದಿಂದ ಸಂಸದರಾಗಿ ಆಯ್ಕೆಯಾಗಿ ರಾಜಕೀಯಕ್ಕೆ ಧುಮುಕಿದ್ದರು.

ಅದಾದ ಬಳಿಕ ರಾಷ್ಟ್ರ ರಾಜಕಾರಣದಲ್ಲಿ ಬ್ಯುಸಿ ಆದ ರಮ್ಯಾ, ಎಐಸಿಸಿ ಸೋಷಿಯಲ್ ಮೀಡಿಯಾದ ಅಧ್ಯಕ್ಷೆಯಾಗಿ ಗುರ್ತಿಸಿಕೊಂಡಿದ್ದಾರೆ. ಇತ್ತೀಚೆಗೆ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಗೂ ಸಹ ಕರುನಾಡಿಗೆ ಬಾರದ ರಮ್ಯಾ, ಇದೀಗ ಕನ್ನಡ ಚಿತ್ರರಂಗ ಮತ್ತು ಸಿನಿಮಾಗಳ ಬಗ್ಗೆ ಹೊಗಳೋಕೆ ಶುರುವಿಟ್ಟಿದ್ದಾರೆ.

ಸಾಮಾನ್ಯವಾಗಿ ರಮ್ಯಾ ಯಾರನ್ನೂ ಹೊಗಳೋದಿಲ್ಲ. ಸಿನಿಮಾನ ಕೂಡ ಎಷ್ಟೇ ಅದ್ಭುತವಾಗಿ ಮಾಡಿದ್ರೂ ಅವ್ರಿಗೆ ಶಹಬ್ಬಾಸ್​ಗಿರಿ ಕೊಡೋ ಜಾಯಮಾನ ರಮ್ಯಾರದ್ದಲ್ಲ. ಆದ್ರೆ ಇತ್ತೀಚೆಗೆ ರಿಲೀಸ್ ಆದ ಅವನೇ ಶ್ರೀಮನ್ನಾರಾಯಣ ಟೀಸರ್ ನೋಡಿ ರಮ್ಯಾ ಥ್ರಿಲ್ ಆಗಿದ್ದಾರೆ. ನಟ ರಕ್ಷಿತ್ ಶೆಟ್ಟಿಗೆ ಶುಭಾಶಯ ಕೂಡ ಕೋರಿದ್ದಾರೆ.

ಒಂದ್ವೇಳೆ ರಾಜಕೀಯ ಪರ್ಮನೆಂಟ್ ಆಗಿ ಗುಡ್​ ಬೈ ಹೇಳಿದ್ರೆ ರಮ್ಯಾ ಮುಂದಿರೋ ಏಕೈಕ ಆಯ್ಕೆ ಸಿನಿಮಾ. ಹೌದು, ಅದೇ ಅಂದ, ಅದೇ ಚೆಂದ, ಅದೇ ವೈಯ್ಯಾರವಿರೋ ಸ್ಯಾಂಡಲ್​ವುಡ್ ಕ್ವೀನ್​ಗೆ ಈಗಲೂ ಅದೇ ಡಿಮ್ಯಾಂಡ್ ಇದೆ. ಅದಕ್ಕೆ ಬೆಸ್ಟ್ ಎಕ್ಸಾಂಪಲ್ ನಾಗರಹಾವು ಸಿನಿಮಾ. ರಾಜಕಾರಣದ ಮಧ್ಯೆ ಕೂಡ ಈ ಸಿನಿಮಾಗಾಗಿ ಬಣ್ಣ ಹಚ್ಚಿದ್ದ ರಮ್ಯಾಗೆ ಸಿನಿಪ್ರಿಯರಿಂದ ಮತ್ತು ಅಭಿಮಾನಿಗಳಿಂದ ಅದೇ ಅಭಿಮಾನದ ಸ್ವಾಗತ ಸಿಕ್ಕಿತ್ತು.

ಯೆಸ್, ರಮ್ಯಾ ಮತ್ತೆ ಬಣ್ಣ ಹಚ್ತೀನಿ ಅಂದ್ರೆ ನಿರ್ಮಾಪಕರು ಅವ್ರ ಡೇಟ್ಸ್ ಗಾಗಿ ಕ್ಯೂನಲ್ಲಿ ನಿಲ್ತಾರೆ. ಅಷ್ಟರಮಟ್ಟಿಗೆ ಮೋಡಿ ಮಾಡಿದ್ದಾರೆ ರಮ್ಯಾ. ಇನ್ನು 2019ರ ನಂತ್ರ ಮತ್ತೆ ಬೆಳ್ಳಿತೆರೆಗೆ ವಾಪಸ್ಸಾಗ್ತೀನಿ ಅಂದಿರೋ ರಮ್ಯಾ ಟ್ವೀಟ್ ನೋಡಿದ್ರೆ, ಖಂಡಿತಾ ಮತ್ತೆ ಸ್ಯಾಂಡಲ್​ವುಡ್ ಅಂಗಳದಲ್ಲಿ ಹೊಸ ಪರ್ವ ಶುರುವಾಗೋದು ಗ್ಯಾರೆಂಟಿ ಅನಿಸ್ತಿದೆ.

Next Story

RELATED STORIES