Top

ಇದು ಕಾಮಿಡಿ ಅಲ್ಲ ಸೀರಿಯಸ್​ ಎಂದ `ನೋಗರಾಜ್​'

ಇದು ಕಾಮಿಡಿ ಅಲ್ಲ ಸೀರಿಯಸ್​ ಎಂದ `ನೋಗರಾಜ್​
X

ಐಪಿಎಲ್​ ಲೀಗ್​ನ ಮಿ.ನಾಗ್ಸ್​ ಸ್ಯಾಂಡಲ್​ವುಡ್​ಗೆ ಹಂಬಲ್​ ಪೋಲಿಟಿಶಿಯನ್​ ನೋಗ್​ರಾಜ್​ ಆಗಿ ಪಾದಾರ್ಪಣೆ ಮಾಡಿದ್ದು ಎಲ್ಲರಿಗು ಗೊತ್ತೆ ಇದೆ.. ಕಾಮಿಡಿ ಮಾಡುತ್ತಲೇ ಹಂಬಲ್​ ಚಿತ್ರದಲ್ಲಿ ರಾಜಕಾರಣದ ಬಗ್ಗೆ ಒಂದೊಳ್ಳೆ ಸಂದೇಶವನ್ನ ನೀಡಿದ್ರು ನಿರ್ದೇಶಕ ಸಾದ್ ಖಾನ್​.

ಹಂಬಲ್​ ಪಾಲಿಟಿಶಿಯನ್ ನೋಗ್​ರಾಜ್​ ಚಿತ್ರದ​ ನಂತರ ದಾನಿಷ್​ ಸೇಠ್ ಎಲ್ಲಿ ಹೋದ್ರು? ಅತ್ತ ಕಡೆ ರೇಡಿಯೋ ಜಾಕಿ ಆಗಿಯೂ ಅವರ ಧ್ವನಿ ಕೇಳಿಸುತ್ತಿಲ್ಲ, ಇತ್ತ ಕಡೆ ಐಪಿಎಲ್​ನಲ್ಲೂ ಮಿ.ನಾಗ್ಸ್​ ಆಗಿ ಕಾಣಿಸುತ್ತಿಲ್ಲ.. ಅರೇ ಎಲ್ಲಿದ್ದಾರಪ್ಪ ದಾನಿಷ್​ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ.

ಯೆಸ್​, ದಾನಿಷ್​ ಸೇಠ್​ ಇದೀಗ ಮತ್ತೊಂದು ಹೊಸ ಚಿತ್ರಕ್ಕೆ ಸಹಿ ಹಾಕಿದ್ದು. ಆ ಚಿತ್ರದ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ.. ಹಿಂದಿನ ಚಿತ್ರದಲ್ಲಿ ಕಾಮಿಡಿ ಪಾತ್ರ ನಿರ್ವಹಿಸಿದ್ದ ದಾನಿಷ್​ ಇದೀಗ ಗಂಭೀರ ಪೋಲಿಸ್​ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ಸೋಲ್ಡ್​ ಎಂದು ಹೆಸರಿದ್ದು, ಈ ಸಸ್ಪೆನ್ಸ್​ ಥ್ರಿಲ್ಲರ್​ ಚಿತ್ರಕ್ಕೆ ಪ್ರೇರಣಾ ಎಂಬುವರು ಌಕ್ಷನ್​ ಕಟ್​ ಹೇಳುತ್ತಿದ್ದಾರೆ.. ಅಂದಹಾಗೆ ಇಷ್ಟಕಾಮ್ಯ ಚಿತ್ರದ ನಾಯಕಿ ಕಾವ್ಯ ಶೆಟ್ಟಿ ದಾನಿಷ್​ಗೆ ಮೊದಲ ಬಾರಿಗೆ ಜೋಡಿಯಾಗಲಿದ್ದಾರೆ..

Next Story

RELATED STORIES