Top

ಪ್ರಶಸ್ತಿ ಗೆದ್ದ ಭಾರತ: ಮೆಸ್ಸಿ ದಾಖಲೆ ಸರಿಗಟ್ಟಿದ ಛೆಟ್ರಿ

ಪ್ರಶಸ್ತಿ ಗೆದ್ದ ಭಾರತ: ಮೆಸ್ಸಿ ದಾಖಲೆ ಸರಿಗಟ್ಟಿದ ಛೆಟ್ರಿ
X

ನಾಯಕ ಸುನೀಲ್ ಛೆಟ್ರಿ ಸಿಡಿಸಿದ ಎರಡು ಗೋಲುಗಳ ನೆರವಿನೊಂದಿಗೆ ಭಾರತ ತಂಡ ಕೀನ್ಯಾ ತಂಡವನ್ನು ಬಗ್ಗುಬಡಿದು ಇಂಟರ್​ ಕಾಂಟಿನೆಂಟಲ್ ಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತು. ಈ ಸಾಹಸದೊಂದಿಗೆ ಛೆಟ್ರಿ ಸಾರ್ವಕಾಲಿಕ ಶ್ರೇಷ್ಠ ಆಟಗಾರನಾಗಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಅರ್ಜೆಂಟೀನಾದ ಲಿಯೊನೆಲ್ ಮೆಸ್ಸಿ ಈ ವರ್ಷ ಸಿಡಿಸಿದ ಅತೀ ಹೆಚ್ಚು ಗೋಲುಗಳ ದಾಖಲೆಯನ್ನು ಹಿಂದಿಕ್ಕಿದ ಸಾಧನೆ ಮಾಡಿದರು.

[story-lines]

ಮುಂಬೈನಲ್ಲಿ ಭಾನುವಾರ ನಡೆದ ಟೂರ್ನಿಯ ಅಂತಿಮ ಸುತ್ತಿನ ಪಂದ್ಯದಲ್ಲಿ ಭಾರತ 2-0 ಗೋಲುಗಳಿಂದ ಕೀನ್ಯಾ ತಂಡವನ್ನು ಸೋಲಿಸಿತು. 102ನೇ ಅಂತಾರಾಷ್ಟ್ರೀಯ ಪಂದ್ಯವಾಡಿದ ಛೆಟ್ರಿ ಪಂದ್ಯದ 8ನೇ ಹಾಗೂ 29ನೇ ನಿಮಿಷದಲ್ಲಿ ಸಿಡಿಸಿದ ಗೋಲುಗಳಿಂದ ಸುಲಭ ಗೆಲುವು ದಾಖಲಿಸಿತು.

33 ವರ್ಷದ ಛೆಟ್ರಿ ಈ ಟೂರ್ನಿಯಲ್ಲಿ ಒಟ್ಟಾರೆ 11 ಗೋಲು ದಾಖಲಿಸಿದರು. ಅಲ್ಲದೇ ಈ ವರ್ಷ 64 ಗೋಲು ಬಾರಿಸಿ ಮೆಸ್ಸಿ ದಾಖಲೆಯನ್ನು ಸರಿಗಟ್ಟಿದರು. ಪೋರ್ಚುಗಲ್​ನ ಕ್ರಿಸ್ಟಿಯಾನೊ ರೊನಾಲ್ಡೊ 150 ಪಂದ್ಯಗಳಿಂದ 81 ಗೋಲು ಬಾರಿಸಿ ಅಗ್ರಸ್ಥಾನದಲ್ಲಿದ್ದಾರೆ. ಐವರಿಕೋಸ್ಟ್​ನ ಡಿಡಿಯರ್ ಡ್ರೋಗ್ಬಾ 65 ಗೋಲು ಬಾರಿಸಿ ಎರಡನೇ ಸ್ಥಾನದಲ್ಲಿದ್ದಾರೆ.

Next Story

RELATED STORIES