Top

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ : SITಗೆ ಹೊಸ ತಲೆನೋವು

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ : SITಗೆ ಹೊಸ ತಲೆನೋವು
X

ಬೆಂಗಳೂರು : ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಕೇಸ್ ತನಿಖೆ ನಡೆಸುತ್ತಿರುವ ಎಸ್ಐಟಿ ಗೆ ಹೊಸ ತಲೆ ನೋವು ಎದುರಾಗಿದೆ. ಈಗಾಗಲೇ ವಶಕ್ಕೆ ಪಡೆದಿರುವ ನಾಲ್ವರು ಆರೋಪಿಗಳು ಬಾಯ್ಬಿಡಿಸೋಕೆ ಹರಸಾಹವೇ ಪಡುತ್ತಿದ್ದಾರೆ. ಎಸ್ಐಟಿ ಮುಂದೆ ನಾಲ್ವರು ಆರೋಪಿಗಳು ಎಸ್ ಐ ಟಿಗೆ ಗೇಮ್ ಹೇಗಿದೆ ಮುಂದೆ ಓದಿ....

ಎಸ್ಐಟಿಗೆ ತಲೆ ನೋವಾದ ಗೌರಿ ಕೇಸ್ ಅರೋಪಿಗಳು.

ಭಗವಾನ್ ಹತ್ಯೆ ಸ್ಕೆಚ್ ಕೇಸ್ ಬಂಧನವಾಗಿದ್ದ ಆರೋಪಿಗಳನ್ನು ಗೌರಿ ಹತ್ಯೆ ಪ್ರಕರಣದಲ್ಲಿ ಎಸ್ ಐ ಟಿ ವಶಕ್ಕೆ ಪಡೆದಿರುವ ಆರೋಪಿಗಳನ್ನು ಎಸ್ ಐ ಟಿ ಅಧಿಕಾರಿಗಳು ಪ್ರಶ್ನಿಸಿದ್ರೆ. ಆರೋಪಿಗಳು ನನವನಲ್ಲ.! ನನಗೆನೂ ಗೊತ್ತಿಲ್ಲ.! ಇದು ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಆರೋಪಿಗಳು ಕೊಡ್ತಾ ಇರೋ ಉತ್ತರ. ನಾಲ್ವರು ಆರೋಪಿಗಳು ಎಸ್ಐಟಿ ವಶದಲ್ಲಿದ್ರು ಹತ್ಯೆಗೆ ಬಗ್ಗೆ ಬಾಯಿ ಬೀಡದೆ ಇರೋದು ತನಿಖಾಧಿಕಾರಿಗಳಿಗೆ ಹೊಸ ತಲೆನೋವು ತಂದೊಡ್ಡಿದೆ.

ವಿಚಾರಣೆ ವೇಳೆ ತುಟಿ ಬಿಚ್ಚದ ಜಪಕ್ಕೆ ಮೊರೆ ಹೋದ ಆರೋಪಿಗಳು

ಪೊಲೀಸರು ಪ್ರಶ್ನೆ ಕೇಳುತ್ತಿದ್ದಂತೆ ಆರೋಪಿಗಳು ಕುಂತಲ್ಲೆ ಜಪ ಮಾಡುತ್ತಾ ಕಾಲಹರಣ ಮಾಡ್ತಿದ್ದಾರಂತೆ. ಕಳೆದ 10 ದಿನಗಳಿಂದ ಯಾವುದೇ ಮಾಹಿತಿ ಬಾಯ್ಬಿಡದೇ ಇರೋದ್ರಿಂದ್ರ ಎಸ್ಐಟಿಗೆ ಹೇಗೆ ಇವರಿಂದ ಬಾಯಿಬಿಡಿಸಬೇಕು ಅಂತೆ ತಲೆ ಕೆಡಿಸಿಕೊಂಡಿದ್ದಾರೆ..

ಜೂನ್‌ 14ರ ವರೆಗೆ ಆರೋಪಿಗಳು ಎಸ್‌ಐಟಿ ವಶಕ್ಕೆ

ನಾಲ್ವರು ಆರೋಪಿಗಳ ಮುಂದೆ ಸಾಕ್ಷಿಗಳನ್ನ ತೋರಿಸಿ ಪ್ರಶ್ನೆ ಕೇಳಿದ್ರು, ನಾನವನಲ್ಲ, ನನಗೇನು ಗೊತ್ತಿಲ್ಲ ಎಂದು ಉತ್ತರ ಕೊಡ್ತಿದ್ದಾರಂತೆ. ಅದ್ರಿಂದ ನಾಲ್ಬರು ಅರೋಪಿಗಳಾದ ಸುಜಿತ್ ಕುಮಾರ್ ಅಲಿಯಾಸ್ ಪ್ರವೀಣ್, ಮನೋಹರ್ ಯವಡೆ, ಅಮೋಲ್ ಕಾಳೆ ಹಾಗೂ ಅಮಿತ್ ದೇಗ್ವೇಕರ್ ಅವರನ್ನು ಮೂರನೇ ಎಸಿಎಂಎಂ ಹಾಜರಿ ಪಡಿಸಿ ಜೂನ್ 14 ವರೆಗೆ ಹೆಚ್ಚಿನ ವಿಚಾರಣೆಗೆ ಮತ್ತೆ ಎಸ್ಐಟಿ ವಶಕ್ಕೆ ಪಡೆದುಕೊಂಡ್ರು. ಇದೇ ವೇಳೆ ಆರೋಪಿಗಳ ವಕೀಲರ ಭೇಟಿಗೆ ಅವಕಾಶ ನೀಡುವಂತೆ ಕೋರ್ಟ್ ಆದೇಶಿಸಿದೆ. ವಿಚಾರಣೆ ವೇಳೆ ಪೊಲೀಸರು ತಮ್ಮಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ತಮ್ಮ ಆಳಲು ತೋಡಿಕೊಂಡ್ರು.

ಇದೇವೇಳೆ ಗೌರಿ ಹತ್ಯೆಯ ಪ್ರಮುಖ ಆರೋಪಿಯಾಗಿರುವ ಕೆ ಟಿ ನವೀನ್ ಕುಮಾರ್ ನ್ಯಾಯಾಂಗ ಬಂಧನದ ಅವಧಿ ಸಹ ಇಂದಿಗೆ ಅಂತ್ಯವಾಗಿತ್ತು. ಪರಪ್ಪನ ಅಗ್ರಹಾರ ಜೈಲಿನಿಂದಲೇ ವಿಡಿಯೋ ಕಾನ್ಪರೇನ್ಸ್ ಮೂಲಕ ಮೂರನೇ ಎಸಿಎಂಎಂ ನ್ಯಾಯಾದೀಶರು ವಿಚಾರಣೆ ನಡೆಸಿ ಪುನಃ ಹದಿನಾಲ್ಕು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ರು.

ಒಟ್ಟಾರೆ ಗೌರಿ ಹತ್ಯೆ ಕೇಸ್ನಲ್ಲಿ ಎಸ್ಐಟಿ ಪೊಲೀಸರು ನಾಲ್ವರನ್ನ ಬಂಧಿಸಿ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದ್ರು. ಅದ್ರೆ ಬಂಧಿತ ಆರೋಪಿಗಳು ಹತ್ಯೆ ಬಗ್ಗೆ ಬಾಯ್ಬಿಡದೇ ಇರೋದು ಎಸ್ಐಟಿಯನ್ನ ಪೊಲೀಸರಿಗೆ ದೊಡ್ಡ ತಲೆನೋವಾಗಿದೆ.

ವರದಿ : ಜಿ.ಮಂಜುನಾಥ, ಕ್ರೈಂ ಬ್ಯೂರೋ ಟಿವಿ5 ಬೆಂಗಳೂರು

Next Story

RELATED STORIES