Top

ಜಿ.ಟಿ. ದೇವೇಗೌಡಗೆ `ಮೈಸೂರು' ಪಾಕ್​

ಜಿ.ಟಿ. ದೇವೇಗೌಡಗೆ `ಮೈಸೂರು ಪಾಕ್​
X

ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಜಿ.ಟಿ. ದೇವೇಗೌಡ ಅವರಿಗೆ ಸಹಕಾರ ಖಾತೆ ಜೊತೆಗೆ ಅತ್ಯಂತ ಮಹತ್ವದಾದ ಮೈಸೂರು ಜಿಲ್ಲಾ ಉಸ್ತುವಾರಿ ಜವಾಬ್ದಾರಿಯೂ ದೊರೆಯುವ ಸಾಧ್ಯತೆ ಇದೆ.

ಸಮ್ಮಿಶ್ರ ಸರಕಾರದಲ್ಲಿ ಜಿ.ಟಿ. ದೇವೇಗೌಡ ಅವರಿಗೆ ಉನ್ನತ ಶಿಕ್ಷಣ ಖಾತೆ ನೀಡಲಾಗಿದೆ. ಆದರೆ ಇದು ಮೂಲೆಗೂಂಪು ಮಾಡುವ ಖಾತೆ. ಜನರ ಜೊತೆ ಸಂಪರ್ಕ ಇರುವಂತಹ ಮಹತ್ವದ ಖಾತೆ ನೀಡಬೇಕು ಎಂದು ಒತ್ತಡ ಕೇಳಿ ಬಂದಿತ್ತು.

ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಸೋಮವಾರ ತಂದೆ ಹಾಗೂ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ಅವರನ್ನು ಭೇಟಿ ಮಾಡಿ ಜಿ.ಟಿ. ದೇವೇಗೌಡರಿಗೆ ಸಹಕಾರ ಖಾತೆ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ವಹಿಸಿಕೊಡುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

8ನೇ ತರಗತಿ ಓದಿರುವ ಜಿಟಿ ದೇವೇಗೌಡಗೆ ಉನನ್ತ ಶಿಕ್ಷಣ ನೀಡಿರುವುದು ಎಷ್ಟು ಸರಿ ಎಂಬ ಮಾತುಗಳು ಕೇಳಿ ಬಂದಿತ್ತು. ಇದನ್ನ ಗಂಭೀರವಾಗಿ ಪರಿಗಣಿಸಿರುವ ಸಿಎಂ ಕುಮಾರಸ್ವಾಮಿ, ಬಂಡೇಪ್ಪ ಕಾಶೆಂಪುರ ಬಳಿ ಇರುವ ಸಹಕಾರಿ ಖಾತೆಯನ್ನು ಜಿಟಿಡಿಗೆ ನೀಡಲು ಚಿಂತನೆ ನಡೆದಿದ್ದು, ಕಾಶೆಂಪುರ ಅವರ ಖಾತೆಯೂ ಬದಲಾವಣೆ ಆಗುವ ಸಾಧ್ಯತೆ ಎನ್ನಲಾಗಿದೆ.

Next Story

RELATED STORIES