Top

ಫಿಫಾ ಪುಟ್ಬಾಲ್​ಗೆ 4 ದಿನ ಬಾಕಿ : ಸ್ಟೇಡಿಂ ಹೇಗೆ ರಡಿಯಾಗಿದೆ ಗೊತ್ತಾ.?

ಫಿಫಾ ಪುಟ್ಬಾಲ್​ಗೆ 4 ದಿನ ಬಾಕಿ : ಸ್ಟೇಡಿಂ ಹೇಗೆ ರಡಿಯಾಗಿದೆ ಗೊತ್ತಾ.?
X

ಎಲ್ನೋಡಿದ್ರು ಇಷ್ಟು ದಿನ ಕ್ರಿಕೆಟ್​​ ಅನ್ನುತ್ತಿದ್ದ ಜನ ಇದೀಗ ಫುಟ್ಬಾಲ್​,​ ಫುಟ್ಬಾಲ್​​​ ಅಂತೀದ್ದಾರೆ. ಹೌದು​​​ ಈ ಬಾರಿಯ ಫಿಫಾ ವಿಶ್ವಕಪ್​​​​​ ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಯುವಂತೆ ಮಾಡಿದೆ.. ಅದರಲ್ಲೂ ಉಪಖಂಡದ ದೊಡ್ಡರಾಷ್ಟ್ರದಲ್ಲಿ ನಡೆಯುತ್ತಿರುವುದು ಅಭಿಮಾನಿಗಳಿಗೆ ಒಂದ್​​ ಪೆಗ್​​ ಎಕ್ಸ್​​ಟ್ರಾ ಗುಂಡ್​​ ಹಾಕ್ದೊಷ್ಟೇ ಕಿಕ್​​​ ಕೋಡ್ತಾ ಇದೆ...

ಆರಂಭಕ್ಕೂ ಮುನ್ನವೇ ಕಿಕ್​​ ಕೊಡ್ತಾ ಇದೆ ಫಿಫಾ..!

ಯೆಸ್​​​.. ಈ ಬಾರಿಯ ಫಿಫಾ ವಿಶ್ವಕಪ್​​ ಆರಂಭಕ್ಕೆ ಮುನ್ನವೇ ಸಾಕಷ್ಟು ಕುತೂಹಲ ಮೂಡಿಸಿದೆ. ಕ್ರೀಡಾಭಿಮಾನಿ ಪಾಲಿಗೆ ಈ ಬಾರಿಯ ಫಿಫಾ ಸಿಕ್ಕಾಪಟ್ಟೆ ಕಿಕ್​​ ಕೊಡ್ತಾ ಇದೆ..ಫಿಫಾ ವಿಶ್ವಕಪ್​​ಗೆ ಇನ್ನು ಕೇವಲ ನಾಲ್ಕೇ ದಿನಗಳು ಮಾತ್ರ ಬಾಕಿ ಉಳಿದಿದ್ದು, ಅಭಿಮಾನಿಗಳಲ್ಲಿ ತಮ್ಮ ನೆಚ್ಚಿನ ಆಟಗಾರರನ್ನ ಸ್ಟೇಡಿಯಂನಲ್ಲಿ ನೋಡಲು ಕಾತರದಿಂದ ಕಾಯುತ್ತಿದ್ದಾರೆ.

ರಷ್ಯಾದಲ್ಲಿ ವಿಶ್ವಕಪ್​​​ ನಡೆಯುತ್ತಿರುವುದಕ್ಕೆ ಹೆಚ್ಚಾಯ್ತು ಕಿಕ್..!

ಹೌದು.. ಫಿಫಾ ವಿಶ್ವಕಪ್​​​ ಈ ಬಾರಿ ಉಪಖಂಡದ ದೊಡ್ಡರಾಷ್ಟ್ತ ರಷ್ಯಾದಲ್ಲಿ ನಡೆಯುತ್ತಿರುವುದು ಅಭಿಮಾನಿಗಳಲ್ಲಿ ಸಾಕಷ್ಟು ಕಿಕ್​​​ ಕೊಡ್ತಾ ಇದೆ.. ​​​ಚುಮು ಚುಮು ಚಳಿ ಹಿಮಗಡ್ಡೆಗಳ ನಡುವೆ ಸ್ಟೇಡಿಯಂನಲ್ಲಿ ನಡೆಯುವ ಮ್ಯಾಚ್​​​ಗೆ ಸೂಪರ್​​​ ಕಿಕ್​​ ಕೊಡೋದ್ರಲ್ಲಿ ಸುಳ್ಳಲ್ಲ.. ಇಷ್ಟುದಿನ ಹೆಚ್ಚಾಗಿ ಯುರೋಪ್​​​ ರಾಷ್ಟ್ರಗಳಲ್ಲಿ ನಡೆದಿರುವ ಫಿಫಾ ರಷ್ಯಾದಲ್ಲಿ ನಡೆಯುತ್ತಿರುವ ಕೂಡಾ ಸಂತಸ ಹಿಮ್ಮಡಿ ಮಾಡಿದೆ..ಇನ್ನು ರಷ್ಯಾ ಸರ್ಕಾರವು ಸಹ ಫಿಫಾ ವಿಶ್ವಕಪ್​​​ನ್ನ ಯಶಸ್ವಿಯಾಗಿ ನಡೆಸಲು ಸಾಕಷ್ಟು ತಯಾರಿ ಮಾಡಿಕೊಂಡು ಕಾರ್ಯ ನಿರ್ವಹಿಸುತ್ತಿದೆ..

[story-lines]

ಎಲ್ಲಾ ಡಿಟ್ರಿಕ್ಷನ್ಸ್​​ಗೂ ರೆಡ್​​ ಸಿಗ್ನಲ್​​​​..!

ರಷ್ಯಾ ಸರ್ಕಾರ ಈ ಬಾರಿಯ ಫುಟ್ಬಾಲ್​​​ ಯಶಸ್ವಿಗೊಳಿಸುವ ಕಾರಣಕ್ಕಾಗಿ ತನ್ನ ಕೆಲವು ನೀತಿ ನಿರ್ಬಂಧಗಳಿಗೆ ಸದ್ಯ ಫುಲ್​​ಸ್ಟಾಪ್​​ ಇಟ್ಟಿದೆ. ಟೂರಿಸಂ ಡೌಲಪ್​​​ಮೆಂಟ್​ಗಾಗಿ ವಿಶ್ವಕಪ್​ ಸದುಪಯೋಗ ಪಡಿಸಿಕೊಳ್ಳುವ ಸಲುವಾಗಿ ಸ್ವಲ್ಪ ರಿಸ್ಕ್​​​​ ತೆಗೆದುಕೊಳ್ಳಲು ರಷ್ಯಾ ಸರ್ಕಾರ ಮುಂದಾಗಿದೆ.. ಸಲಿಂಗಾಕಾಮಿಗಳಿಗೆ ಅವಕಾಶ, ವೇಷ್ಯಾವಾಟಿಕೆಗೆ ಗ್ರೀನ್​​ ಸಿಗ್ನಲ್​, ಸಾರ್ವಜನಿಕವಾಗಿ ಮದ್ಯ ಮಾರಾಟ ಸೇರಿದಂತೆ ಹಲವು ಕಾಯ್ದೆಯನ್ನ ಸದ್ಯದ ಮಟ್ಟಿಗೆ ತೆರವು ಮಾಡಿದೆ.

ನವ ವಧುವಂತೆ ಸಿಂಗಾರಗೊಂಡ ರಷ್ಯಾ

ಹೌದು..ರಷ್ಯಾ ಮೊದಲೇ ಮೈ ಜುಮ್ಮೇನಿಸುವ ಚಳಿಯ ದೇಶ, ನೀವು ಒಮ್ಮೆಯಾದ್ರು ಫಿಫಾ ವಿಶ್ವಕಪ್​​​ ಮುಗಿಯುವ ಮುನ್ನ ರಷ್ಯಾಗೆ ಹೋಗಲೇಬೇಕು ಅನಿಸುತ್ತದೆ. ವಿಶ್ವಕಪ್​​​​ ಹಿನ್ನಲೆ ರಷ್ಯಾ ನವ ವಧುವಿನಂತೆ ಸಿಂಗಾರಗೊಂಡಿದೆ.. ಮದುವೆಗೆ ವಧುವನ್ನ ಹೇಗೆ ಸಿಂಗಾರ ಮಾಡ್ತಾರೋ ಹಾಗೇ ರಷ್ಯಾವನ್ನ ಪುಟೀನ್​​ ಸರ್ಕಾರ ಸಿಂಗಾರಗೊಳಿಸಿದೆ. ಫುಟ್ಬಾಲ್​​​​ ಅಭಿಮಾನಿಗಳಿಗೆ ಮನಸ್ಸಿಗೆ ಮುದ ನೀಡಿವ ಸ್ಥಳಗಳು ಮತ್ತು ಇಡೀ ಜಗತ್ತು ನಾಚಿ ನೀರಾಗುವ ರೀತಿ ಸಿಂಗಾರ ಮಾಡಲಾಗಿದೆ.. ಪ್ರವಾಸೋದ್ಯಮ ಪ್ರದೇಶಗಳಿಗೆ ಮಹತ್ವ ನೀಡಿದ್ದು, ಫೈಸ್ಟಾರ್​​ ಹೋಟೆಲ್,​ ರಸ್ತೆಗಳ ವ್ಯವಸ್ಥೆ ಮತ್ತು ಸೂಕ್ತ ಟ್ರಾವೆಲ್ಸ್​​​ ಸೌಲಭ್ಯಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ.. ​​​ ​​​

ಫುಟ್ಬಾಲ್​​​​ ಪ್ರೇಮಿಗಳಿಗೆ ಆಹ್ವಾನ ನೀಡದ ಪುಟೀನ್..!

ಫಿಫಾ ವಿಶ್ವಕಪ್​​​​ ಟೂರ್ನಿ ರಷ್ಯಾದಲ್ಲಿ ಆಯೋಜನೆ ಮಾಡಿದ ಹಿನ್ನಲೆ ಟೂರಿಸಂ ಡೌಲಪ್​​​ಮೆಂಟ್​ಗಾಗಿ ಮತ್ತು ಫಿಪಾ ವಿಶ್ವಕಪ್​​ ವೀಕ್ಷಣೆ ಮಾಡಲು ಅಭಿಮಾನಿಗಳಲ್ಲ ಸೆಳೆಯಲು. ರಷ್ಯಾ ಅಧ್ಯಕ್ಷ ಪುಟೀನ್​ ಫಿಫಾ ವಿಶ್ವಕಪ್​​​​​ಗೆ ​ಆಹ್ವಾನ ನೀಡಿದ್ದಾರೆ.. ಕ್ರೀಡಾಭಿಮಾನಿಗಳ ಅವಶ್ಯಕತೆಗೆ ತಕ್ಕಂತೆ ರಷ್ಯಾವನ್ನ ರೂಪಿಸಿದ್ದು ನಿಮ್ಮ ಆಗಮನಕ್ಕಾಗಿ ​ರಷ್ಯಾ ಸಿಂಗಾರ ಗೊಂಡಿದೆ ಕಾದು ಕುಳಿತಿದ್ದಾಳೆ ಎಂದು ನೀವು ಆಗಮಿಸಿ ಎಂದು ಪುಟೀನ್‌ ಹೇಳಿದ್ದಾರೆ.

ಮನೆಗೆ ಅರ್ಜಂಟೀನ ಬಣ್ಣ ಬಳಿಸಿದ ಅಭಿಮಾನಿ..!

ಹೌದು ಅಭಿಮಾನ ಅಂದ್ರೆ ಹಾಗೇ ರೀ. ನಮ್ಮ ನೆಚ್ಚಿನ ಆಟಗಾರನ ಬಗ್ಗೆ ನಾವು ಮಾರು ಹೋಗುವ ಕ್ಷಣಗಳೆ ಇಲ್ಲ.. ಫಿಫಾ ವಿಶ್ವಕಪ್​​​​ ಆರಂಭಕ್ಕೂ ಮುನ್ನವೇ ಅಭಿಮಾನಿಗಳ ಯಾವ ಮಟ್ಟಕ್ಕೆ ಹುಚ್ಚು ಹೆಚ್ಚಿಸಿದೆ ಎಂದ್ರೆ ತಮ್ಮ ನೆಚ್ಚಿನ ಫುಟ್ಬಾಲ್​​​ ​ಆಟಗಾರನಿಗಾಗಿ ಡಿಫ್ರೆಂಟ್​​ ಡ್ರಸ್, ಹೇರ್​ಸ್ಟೈಲ್​​​ ಮಾಡೋದು ನೋಡೆ ಇದ್ದೇವೆ. ಆದ್ರೆ ಕಲ್ಕತ್ತಾದಲ್ಲಿ ಅಭಿಮಾನಿಯೊಬ್ಬ ತಮ್ಮ ಮನೆಗೆ ಅರ್ಜಂಟೀನಾ ಬಣ್ಣ ಬಳಿಸುವ ಮೂಲಕ ತನ್ನ ಅಭಿಮಾನದ ಪರಾಕಷ್ಟತೆ ಮೆರೆದಿದ್ದಾನೆ..

ಫಿಫಾ ವಿಶ್ವಕಪ್​​ಗೆ ಆರಂಭಕ್ಕೆ ನಾಲ್ಕು ದಿನ ಮಾತ್ರ ಉಳಿದಿದ್ದು, ಈಗಾಗಲೇ ರಷ್ಯಾ ಸೂಪರ್​ ಆಗೇ ಸಿಂಗಾರಗೊಂಡಿದೆ. ಈ ಸಿಂಗಾರದ ರಸದೌತಣವನ್ನ ಸವಿಯಲು ಅಭಿಮಾನಿಗಳನ್ನ ತನ್ನತ್ತ ಸೆಳೆಯುತ್ತಿದ್ದು. ಫುಟ್ಬಾಲ್​​​ ಅಭಿಮಾನಿಗಲ್ಲಿ ಒಂದ್​​ಪೇಗ್ ಹೆಚ್ಚಾಗಿಯೇ​​​ ಹಾಕಿದ ರೀತಿ ಕಿಕ್​​ ಕೊಡ್ತಾ ಇರೋದು ಮಾತ್ರ ಸುಳ್ಳಲ್ಲ.

ಪವನ್​​ ಕೆ ಲಕ್ಷ್ಮೀಕಾಂತ್​​, ಸ್ಪೋರ್ಟ್​​​ ಬ್ಯೂರೋ ಟಿವಿ5

Next Story

RELATED STORIES