Top

ದ್ರೋಣಾಚಾರ್ಯ ಅವತಾರದಲ್ಲಿ ಶಿವಣ್ಣ..!

ದ್ರೋಣಾಚಾರ್ಯ ಅವತಾರದಲ್ಲಿ ಶಿವಣ್ಣ..!
X

ವೈವಿಧ್ಯಮಯ ಪಾತ್ರಗಳಿಂದ ಸ್ಯಾಂಡಲ್​ವುಡ್​ ಕಿಂಗ್ ಆಗಿ ದರ್ಬಾರ್ ಮಾಡ್ತಿರೋ ನಟ ಶಿವರಾಜ್​ಕುಮಾರ್. ಸದ್ಯ ಶಿವಣ್ಣ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೆಲ್ಲದರ ಮಧ್ಯೆ ಸೆಂಚುರಿ ಸ್ಟಾರ್ ಅಭಿನಯದ ಮತ್ತೊಂದು ವಿಭಿನ್ನ ಚಿತ್ರಕ್ಕೆ ವೇದಿಕೆ ಸಿದ್ಧವಾಗಿದೆ.

ಒಂದ್ಕಡೆ ಶಿವಣ್ಣನ ದಿ ವಿಲನ್ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ವರ್ಕ್​​ ಜೋರಾಗಿ ನಡೀತಿದೆ.. ಮತ್ತೊಂದ್ಕಡೆ ಕವಕ ಮತ್ತು ರುಸ್ತುಂ ಸಿನಿಮಾಗಳಲ್ಲಿ ಶಿವಣ್ಣ ಬಿಡುವಿಲ್ಲದೇ ನಟಿಸ್ತಿದ್ದಾರೆ. ಇವೆರಡು ಸಿನಿಮಾಗಳ ನಂತ್ರ ಮತ್ತೇನು..? ಅನ್ನೋ ಪ್ರಶ್ನೆಗೆ ದ್ರೋಣ ಅನ್ನೋ ಉತ್ತರ ಸಿಕ್ಕಿದೆ.ಭರ್ಜರಿ ಫೋಟೋಶೂಟ್ ಸಹ ನಡೆದಿದ್ದು, ಶೀಘ್ರದಲ್ಲೇ ದ್ರೋಣನ ದರ್ಬಾರ್ ಶುರುವಾಗಲಿದೆ.

ಇತ್ತೀಚೆಗಷ್ಟೆ ಪ್ರಮೋದ್ ಚಕ್ರವರ್ತಿ ನಿರ್ದೇಶನದ ಚಿತ್ರದಲ್ಲಿ ಶಿವರಾಜ್​ಕುಮಾರ್ ನಟಿಸೋ ಸುದ್ದಿ ಕೇಳಿಬಂದಿತ್ತು. ನಟ ಕಮ್ ನಿರ್ದೇಶಕ ಪ್ರಮೋದ್​ ಈ ಬಾರಿ ಒಂದು ವಿಭಿನ್ನ ಪಾತ್ರದಲ್ಲಿ ಶಿವಣ್ಣನನ್ನ ತೋರಿಸೋ ಪ್ರಯತ್ನ ಮಾಡಿದ್ದಾರೆ. ಈ ಹಿಂದೆ ಚಿತ್ರಕ್ಕೆ ಹರಿಹರ ಅನ್ನೋ ಟೈಟಲ್ ಫೈನಲ್ ಮಾಡಿದ್ರು ನಿರ್ದೇಶಕರು. ಸದ್ಯ ದ್ರೋಣ ಅಂತ ಟೈಟಲ್​​ ಬದಲಿಸಿರೋ ಪ್ರಮೋದ್, ಸ್ಕ್ರಿಪ್ಟ್​​ನಲ್ಲಿ ಕೊಂಚ ಬದಲಾವಣೆ ಮಾಡ್ಕೊಂಡು ನಿರ್ದೇಶನಕ್ಕಿಳಿದ್ದಾರೆ.

ಮಹಾಭಾರತದ ಗುರುಗಳಾದ ದ್ರೋಣಚಾರ್ಯರ ಹೆಸರಿನಲ್ಲಿ ನಿರ್ಮಾಣವಾಗ್ತಿರೋ ಈ ಚಿತ್ರದಲ್ಲಿ ಶಿವಣ್ಣ ಪ್ರೈಮರಿ ಸ್ಕೂಲ್ ಟೀಚರ್ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ. ಇದೊಂದು ಪಕ್ಕಾ ಫ್ಯಾಮಿಲಿ ಕಥೆ. ರಿವೇಂಜ್‌, ಸೆಂಟಿಮೆಂಟ್, ಕಾಮಿಡಿ ಜೊತೆಗೆ ಒಂದೊಳ್ಳೆ ಸಂದೇಶವನ್ನ ಸಿನಿಮಾ ಹೊತ್ತು ಬರ್ತಿದೆ. ಶಿವಣ್ಣ ಇಲ್ಲಿ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕಂಠೀರವ ಸ್ಟುಡಿಯೋದಲ್ಲಿ ದ್ರೋಣ ಚಿತ್ರಕ್ಕಾಗಿ ಭರ್ಜರಿ ಫೋಟೋಶೂಟ್ ನಡಿಸಿದ್ದು, ಶಿವಣ್ಣ ಸಿಂಪಲ್ ಮತ್ತು ಅಷ್ಟೆ ಯಂಗ್ ಅಂಡ್ ಎನರ್ಜಿಟಿಕ್ ಆಗಿ ಕಾಣಿಸಿಕೊಂಡಿದ್ಧಾರೆ.. ಸ್ಟಿಲ್ಸ್​​ ನೋಡ್ತಿದ್ರೆ, ಶಿವಣ್ಣ ಲೇಖನಿ ಹಿಡಿದು ಸಮಾಜಕ್ಕೆ ಒಂದೊಳ್ಳೆ ಸಂದೇಶ ಸಾರೋಕೆ ಬರ್ತಿರೋದು ಗೊತ್ತಾಗ್ತಿದೆ. ಶಾಲೆಯ ಮಕ್ಕಳ ಜೊತೆಗೆ ಸಮಾಜವನ್ನ ತಿದ್ದುವ ಗುರುವಾಗಿ ಶಿವಣ್ಣ ಮೋಡಿ ಮಾಡುವ ಸುಳಿವು ಸಿಕ್ತಿದೆ.

ಜೂನ್ 22ರಂದು ಗೀತಾ ಶಿವರಾಜ್​ಕುಮಾರ್ ಹುಟ್ಟುಹಬ್ಬ. ಅಂದೇ ಹನುಮಂತ್ ನಗರದ ರಾಮಾಂಜನೇಯ ದೇವಸ್ಥಾನದಲ್ಲಿ ದ್ರೋಣ ಚಿತ್ರದ ಮುಹೂರ್ತಕ್ಕೆ ಸಿದ್ಧತೆ ನಡೆದಿದೆ. ಜುಲೈ ಫಸ್ಟ್ ವೀಕ್​ನಿಂದ ಸಿನಿಮಾ ಚಿತ್ರೀಕರಣಕ್ಕೆ ಚಾಲನೆ ಕೊಡಲಿದ್ದಾರೆ ನಿರ್ದೇಶಕರು. ದ್ರೋಣ ಚಿತ್ರಕ್ಕೆ ಛಾಯಾಗ್ರಾಹಕರಾಗಿ ಜಗದೀಶ್ ವಾಲಿ, ಸಂಗೀತ ನಿರ್ದೇಶಕರಾಗಿ ರಾಮ್​ ಕ್ರಿಶ್ ಆಯ್ಕೆಯಾಗಿದ್ದಾರೆ. ಮಾಲಿವುಡ್ ಮೆಗಾಸ್ಟಾರ್ ಮಮ್ಮುಟಿ ಜೊತೆ ನಟಿಸಿ ಸೈ ಅನ್ನಿಸಿಕೊಂಡಿರುವ ಇನಿಯಾ ದ್ರೋಣ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

Next Story

RELATED STORIES