Top

ವಿದ್ಯುತ್​ ಕಂಬ ಸಾಗಿಸುತ್ತಿದ್ದ ಟ್ರ್ಯಾಕ್ಟರ್​ ಉರುಳಿ: ನಾಲ್ವರು ಸಾವು

ವಿದ್ಯುತ್​ ಕಂಬ ಸಾಗಿಸುತ್ತಿದ್ದ ಟ್ರ್ಯಾಕ್ಟರ್​ ಉರುಳಿ: ನಾಲ್ವರು ಸಾವು
X

ರಾಯಚೂರು: ವಿದ್ಯುತ್ ಕಂಬ ಸ್ಥಳಾಂತರಿಸುವ ಸಂದರ್ಭದಲ್ಲಿ ಟ್ರ್ಯಾಕ್ಟರ್ ಪಲ್ಟಿಯಾಗಿ ನಾಲ್ವರು ಮೃತಪಟ್ಟ ಧಾರುಣ ಘಟನೆ ನಡೆದಿದೆ.

ರಾಯಚೂರು ಜಿಲ್ಲೆಯ ಸಿಂಧನೂರು ತಾಲುಕಿನ ಸಾಸಲುಮರ ಕ್ಯಾಂಪ್ ನಿಂದ ಸಿಂಧನೂರು ವರೆಗೆ ವಿದ್ಯುತ್ ಕಂಬ ಅಳವಡಿಸುವ ಕಾರ್ಯ ಜರುಗುತ್ತಿತ್ತು. ಈ ಸಂದರ್ಭದಲ್ಲಿ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ವೇಳೆ ಶ್ರೀರಾಂಪುರ ಜಂಕ್ಷನ್ ಕ್ರಾಸ್ ಬಳಿ ಟ್ರಾಕ್ಟರ್ ಟ್ರಾಲಿ ಕೊಂಡಿ ಕಳಚಿ ಮುಗುಚಿ ಬಿದ್ದಿದೆ. ಟ್ರಾಲಿ ಮುಗುಚಿ ಬಿದ್ದ ರಭಸಕ್ಕೆ ಸ್ಥಳದಲ್ಲೆ ಮೂವರು ಸಾವನ್ನಪ್ಪಿ ನಾಲ್ವರು ಗಾಯಗೊಂಡಿದ್ದರು. ಒರ್ವ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಹಸುನೀಗಿದ್ದಾನೆ.

ಘಟನೆಯಲ್ಲಿ ಚಾಲಕ ಮಲ್ಲಿಕಾರ್ಜುನ (30), ರಮೇಶ (25), ನಾಗರಾಜ(35) ಹಾಗು ಶರಣಪ್ಪ (34) ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಘಟನಾ ಸ್ಥಳಕ್ಕೆ ಸಿಂಧನೂರು ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಶವಗಳನ್ನು ಶವ ಪರೀಕ್ಷೆಗಾಗಿ ರಾಯಚೂರಿನ ರಿಮ್ಸ ಆಸ್ಪತ್ರೆಗೆ ಕಳುಹಿಸಲಾಗಿದ್ದು ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Next Story

RELATED STORIES