Top

ಮುನವಳ್ಳಿ ಶಾಸಕ ಪರಣ್ಣ ಮುನವಳ್ಳಿಗೆ ಬೆದರಿಕೆ ಪತ್ರ

ಮುನವಳ್ಳಿ ಶಾಸಕ ಪರಣ್ಣ ಮುನವಳ್ಳಿಗೆ ಬೆದರಿಕೆ ಪತ್ರ
X

ಕೊಪ್ಪಳ : ಗಂಗಾವತಿಯ ಮುನವಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಪರಣ್ಣ ಮುನವಳ್ಳಿಗೆ ಬೆದರಿಕೆ ಪತ್ರವೊಂದನ್ನು ಬರೆಯಲಾಗಿದೆ. ಈ ಮೂಲಕ ಹಣಕ್ಕೆ ಬೇಡಿಕೆ ಇಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ.

ದಿನಾಂಕ 6-6-2018ರ ಮಧ್ಯಾಹ್ನ 3.30ರ ಹಾಗೆ, ಈ ಬೆದರಿಕೆ ಪತ್ರವನ್ನು ಮುನವಳ್ಳಿ ಕಾರ್ಯಾಲಯದ ವಾಚ್‌ಮೆನ್‌ಗೆ ನೀಡಿ, ತಮ್ಮ ಶಾಸಕರಿಗೆ ತಲುಪಿಸುವಂತೆ ಆಗಂತುಕ ವ್ಯಕ್ತಿಯೊಬ್ಬ ಕೊಟ್ಟು ಹೋಗಿರುವುದಾಗಿ ತಿಳಿದು ಬಂದಿದೆ.

ಶಾಸಕರಿಗೆ ಬಂದಿರುವ ಪತ್ರದಲ್ಲಿ, "ಸರ್ ನೀವು ಕೇಳದ ಹಾಗೆ 2014ರ ಚುನಾವಣೆಯಿಂದ 2018ರ ಚುನಾವಣೆಯ ವರೆಗೆ ನಮ್ಮ ಕರೆನ್ಸಿಯನ್ನು ಬಳಸುತ್ತಾ, ಸಪ್ಲೈ ಮಾಡುತ್ತಾ ಸಹಕರಿಸಿದ್ದಕ್ಕೆ ಥ್ಯಾಂಕ್ಯೂ. ನೀವು ದಿನಾಂಕ 9-5-2018ರಂದು 500 ರೂ ಬೆಲೆಯ 1 ಕೋಟಿ ರೂಪಾಯಿಗಳ ಮಾಲ್‌ ತೆಗೆದುಕೊಂಡ ನಮಗೆ 50 ಲಕ್ಷಗಳನ್ನು ನೀಡದೇ ಪೋನ್‌ ಪಿಕ್‌ ಮಾಡದೇ ವಂಚಿಸಿರುತ್ತೀರಿ. ನಿಮಗೆ ಮೂರು ನಾಲ್ಕು ದಿನಗಳಲ್ಲಿ 10 ಲಕ್ಷ ರೂ ಕರೆನ್ಸಿ ವಿ ಆರ್ ಎಲ್‌ ಗೆ ಕಳಿಸುತ್ತೇವೆ. ಎಲ್‌ ಆರ್ ಎಲ್‌ ನಲ್ಲಿ ನಿಮಗೆ ಕೊಡಬೇಕೋ, ಪೊಲೀಸರಿಗೆ ಕೊಡಬೇಕೋ ನಿವೇ ನಿರ್ಧರಿಸಿಕೊಳ್ಳಿ. ನಮ್ಮ ಹುಡುಗರು ಬರ್ತಾರೆ. ನಮ್ಮ ಹಣ ನಮಗೆ ಕೊಡಿ. ನಿಮ್ಮ ಜೊತೆ ನಮ್ಮ ಹುಡುಗರು ಕೂಡ ಅರೆಸ್ಟ್ ಆಗ್ತಾರೆ. ಆಮೇಲೆ ನಿಮ್ಮಿಷ್ಟ(ಐಟಿ, ಸಿಬಿಐ, ಪ್ರೆಸ್‌) ಎಲ್ಲರಿಗೂ ನಂಬರ್ ಕೊಡಬೇಕಾಗುತ್ತದೆ" ಎಂದು ಬರೆದು ತಿಳಿಸಲಾಗಿದೆ.

ಈ ಪತ್ರವನ್ನು ಕಂಡ ಶಾಸಕರು ಕೊಪ್ಪಳ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು, ಉಪ ಪೊಲೀಸ್‌ ವರಿಷ್ಠಾಧಿಕಾರಿಗಳು ಗಂಗಾವತಿ ಹಾಗೂ ಪಿ ಐ ನಗರ ಠಾಣೆ ಗಂಗಾವತಿ ಇವರಿಗೆ ದೂರು ನೀಡಿದ್ದಾರೆ. ಕಿಡಿಗೇಡಿಗಳು ಕಳಿಸಿದ ಪತ್ರದ ಸಮೇತ ದೂರು ಸಲ್ಲಿಸಿರುವ ಶಾಸಕ ಮುನವಳ್ಳಿ, ಕೋಬ್ರಾ ಟೀಂ ಹೆಸರಿನಲ್ಲಿ ಕಿಡಿಗೇಡಿಗಳು ನನಗೆ 50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.

Next Story

RELATED STORIES