Top

ಚಿನ್ನದ ಕತ್ತಿಯಲ್ಲಿ ಕ್ಷೌರ ಮಾಡಿಸಿಕೊಳ್ಳಲು ಮುಗಿಬಿದ್ದ ಜನ.!!

ಚಿನ್ನದ ಕತ್ತಿಯಲ್ಲಿ ಕ್ಷೌರ ಮಾಡಿಸಿಕೊಳ್ಳಲು ಮುಗಿಬಿದ್ದ ಜನ.!!
X

[story-lines]

ಚಿಕ್ಕೋಡಿ : ಮಹಾರಾಜರು, ಆಗರ್ಭ ಶ್ರೀಮಂತರು ಬೆಳ್ಳಿ– ಬಂಗಾರದ ತಟ್ಟೆಯಲ್ಲಿ ಊಟ ಮಾಡುತ್ತಾರೆ ಎನ್ನುವುದನ್ನು ಕೇಳಿರಬಹುದು. ಆದ್ರೆ ಇಲ್ಲೊಬ್ಬ ಶೆವ್ ಮಾಡಲು ಚಿನ್ನದ ಶೆವರ ಅನ್ನ ಬಳಿಸಿ ಅಚ್ಚರಿ ಹುಟ್ಟಿಸಿದ್ದಾನೆ. ಈತನ ಬಳಿ ಶೆವ್ ಮಾಡಬೇಕೆಂದರೆ ವಾರದ ನಂತರ ಬುಕಿಂಗ್ ಮಾಡಬೇಕು. ಅರೇ ಶೆವ್ ಮಾಡೊಕೆ ಚಿನ್ನದ ಶೆವರ್ ನಾ ಅಂತಾ ಎನಪ್ಪಾ ಇದು ವಿಚಿತ್ರ ಅಂತಿರಾ.? ಹಾಗಿದ್ದರೆ ಈ ಸ್ಟೋರಿ ಓದಿ..

ಚಿನ್ನದ ಹಿಡಿಕೆಯ ಕತ್ತಿಯಿಂದ ಶೇವಿಂಗ್

ಇವರೆನು ಮಹಾರಾಜ ಅಲ್ಲಾ. ರಾಜ ಮನೆತನದ ವ್ಯಕ್ತಿಯು ಅಲ್ಲಾ. ಆದ್ರೆ ಇವರು ಶೆವ್ ಮಾಡಲು ಬಳಸೋದು ಚಿನ್ನದ ರೇಸರ್. ಇಲ್ಲಿ ಕ್ಷೌರ ಮಾಡಿಕೊಳ್ಳಲು ವಾರದ ಮೊದಲೇ ಬುಕಿಂಗ್ ಮಾಡಬೇಕು. ಹೌದು ಮಹಾರಾಷ್ಟ್ರದ ಸಾಂಗ್ಲಿಯ ಗಾಂವಬಾಗ್‌ನಲ್ಲಿರುವ ‘ಉಸ್ತ್ರಾ ಫಾರ್‌ ಮೆನ್ಸ್‌’ ಸಲೂನ್‌ ಮಾಲೀಕ ರಾಮಚಂದ್ರ ದತ್ತಾತ್ರೇಯ ಕಾಸೀದ್‌ ಇಂತಹದೊಂದು ಪ್ರಯೋಗ ಮಾಡುತ್ತಿದ್ದಾರೆ. 3.55 ಲಕ್ಷ ವೆಚ್ಚದಲ್ಲಿ 105 ಗ್ರಾಂ ನ 18 ಕ್ಯಾರೆಟ್‌ ಚಿನ್ನ ಬಳಸಿ ಈ ಸಾಧನವನ್ನು ಮಾಡಿಸಿಕೊಂಡಿದ್ದಾರೆ.

ಚಿಕ್ಕೋಡಿಯಲ್ಲಿದೆ ಗೋಲ್ಡನ್‌ ಶೇವ್ ಸಲೂನ್‌

ಚಿನ್ನದ ಹಿಡಿಕೆಯ ರೇಸರ್‌

ಸಾಂಗ್ಲಿಯ ಚಂದುಕಾಕಾ ಜ್ಯುವೆಲ್ಲರ್ಸ್‌ನವರು, ಪುಣೆಯ ಮಿಥುನ್‌ ರಾಣಾ ಎಂಬ ಕುಶಲಕರ್ಮಿಯಿಂದ ಈ ಶೆವರ್ ಅನ್ನ ಮಾಡಿಸಿದ್ದಾರೆ. ರಾಮಚಂದ್ರ ಅವರು, ತಿಂಗಳ ಹಿಂದೆ ನಡೆದ ತಮ್ಮ ತಂದೆ–ತಾಯಿಯ 33ನೇ ಮದುವೆ ವಾರ್ಷಿಕೋತ್ಸವದ ಸವಿನೆನಪಿನಲ್ಲಿ ಚಿನ್ನದ ಶೆವರ್ ಬಳಸುವುದಕ್ಕೆ ಶುರು ಮಾಡಿದ್ದಾರೆ. ಮೊದಲಿಗೆ, ತಂದೆ ದತ್ತಾತ್ರೇಯ ಅವರಿಗೇ ಇದರಿಂದ ಕ್ಷೌರ ಮಾಡಿದ್ದಾರೆ.

ಒಬ್ಬರ ಶೇವಿಂಗ್‌ಗೆ ರೂ 200 ಚಾರ್ಜ್‌

‘ವೃತ್ತಿಯಲ್ಲಿ ವಿಶೇಷತೆ ಅಳವಡಿಸಿಕೊಳ್ಳುವ ಮೂಲಕ ಗ್ರಾಹಕರನ್ನು ಸೆಳೆಯಲು ಈ ಬಂಗಾರದ ರೇಜರ್‌ ಮಾಡಿಸಿದ್ದಾರೆ. ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದ್ದು ಇದರಿಂದ ಶೇವಿಂಗ್ ಮಾಡಿದರೆ ₹200 ಪಡೆಯುತ್ತಾರೆ. ಬಹುತೇಕರು ಇದನ್ನೇ ಬಳಸುವಂತೆ ಕೇಳುತ್ತಾರೆ. ಸಾಂಗ್ಲಿ ಸುತ್ತಮುತ್ತಲಿನ 50 ಕಿ.ಮೀ. ದೂರದಿಂದಲೂ ಯುವಕರು ಇಲ್ಲಿಗೆ ಬಂದು ಬಂಗಾರದ ರೇಜರ್‌ನಿಂದಲೇ ಶೇವ್ ಮಾಡಿಸಿಕೊಂಡು ಹೋಗುತ್ತಾರೆ. ಈ ಹೊಸ ಪ್ರಯೋಗದಿಂದಾಗಿ ರಾಮಚಂದ್ರ ದತ್ತಾತ್ರೇಯ ಕಾಸೀದ್‌ಗೆ ಉದ್ಯೋಗದಲ್ಲಿ ವೃದ್ದಿಯಾಗಿದಯಂತೆ.

ಸಾಂಗ್ಲಿ‘ಉಸ್ತ್ರಾ ಫಾರ್‌ ಮೆನ್ಸ್‌’ ಸಲೂನ್‌ ಮಾಲೀಕ ರಾಮಚಂದ್ರ ದತ್ತಾತ್ರೇಯ ಕಾಸೀದ್‌

50 ಕಿಲೋಮೀಟ್‌ನಿಂದ ಬರ್ತಾರಂತೆ ಶೇವಿಂಗ್‌ಗಾಗಿ ಜನರು

ಚಿಕ್ಕೋಡಿಯಿಂದ ಕೇವಲ 5೦ ಕಿಮಿ ಅಂತರದಲ್ಲಿರುವ ಈ ಸಲೂನು ಈಗ ಬಾರೀ ಸದ್ದು ಮಾಡುತ್ತಿದೆ. ಕಟೀಂಗ್ ಅಂಗಡಿಯಲ್ಲೂ ಇಂತಹ ಪ್ರಯೋಗ ಮಾಡಿರೋದು ಎಲ್ಲರಿಗೂ ಅಶ್ಚರ್ಯವನ್ನು ಉಂಟುಮಾಡಿದೆ. ಚಿನ್ನದಿಂದ ಶೇವ್‌ ಮಾಡಿಸಿಕೊಳ್ಳಲು ಸಾಕಷ್ಟು ಜನ ಆಗಮಿಸುತ್ತಿದ್ದಾರೆ. ಒಟ್ಟಿನಲ್ಲಿ ಇಂತಹದ್ದು ಸುತ್ತಮುತ್ತ ರಾಜ್ಯ ಹಾಗೂ ಗ್ರಾಮಗಳಲ್ಲಿಯೂ ಎಲ್ಲಿಯೂ ಬಳಸಿಲ್ಲ. ಸಾರ್ವಜನಿಕರಿಗೆ ಇದೊಂದು ಹೊಸತನವಾಗಿದೆ. ಇದರಿಂದ ಜನರು ಶೇವ್ ಮಾಡಿಕೊಳ್ಳಲು ರಾಮಚಂದ್ರ ದತ್ತಾತ್ರೇಯ ಕಾಸೀದ್‌ ಸಲೂನ್‌ನಲ್ಲಿ ಕ್ಯೂ ನಿಂತಿದ್ದಾರೆ. ಈ ಮೂಲಕ ‘ಉಸ್ತ್ರಾ ಫಾರ್‌ ಮೆನ್ಸ್‌’ ಸಲೂನ್‌, ಚಿನ್ನದ ಶೇವಿಂಗ್ ಸಲೂನ್‌ ಆಗೇ ಫೇಮಸ್‌ ಆಗಿದೆ..

ವರದಿ : ರವೀಂದ್ರ ಚೌಗುಲೆ, TV5 ಚಿಕ್ಕೋಡಿ

Next Story

RELATED STORIES