Top

ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಪಿಡಿಓ

ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಪಿಡಿಓ
X

ಗದಗ : ಜಿಲ್ಲೆಯ ಪಿಡಿಓ ಒಬ್ಬರು ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಾರೆ. ಪಿಡಿಓ ಪಡೆದ ವೀಡಿಯೋ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಮಹಿಳಾ ಪಿಡಿಓ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಂದಹಾಗೇ, ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಕೊರ್ಲಹಳ್ಳಿ ಗ್ರಾಮಪಂಚಾಯ್ತಿಯ ಪಿಡಿಓ ಅಕ್ಕಮಹಾದೇವಿ ಹಿರೇಮಠ, ಪಹಣಿ ನೀಡಲು ನಾಲ್ಕು ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು. ಈ ಬೇಡಿಕೆಗೆಯ ಅನುಸಾರ ಮೊದಲ ಕಂತಾಗಿ, ಎರಡು ಸಾವಿರ ಲಂಚ ನೀಡುವಾಗ, ಯುವಕರು ಮೊಬೈಲ್‌ನಲ್ಲಿ ರಹಸ್ಯವಾಗಿ ಸೆರೆಹಿಡಿದಿದ್ದಾರೆ. ಈ ಮೂಲಕ ಕೊರ್ಲಹಳ್ಳಿ ಗ್ರಾಮ ಪಂಚಾಯ್ತಿಯ ಪಿಡಿಓ ಲಂಚಾವತಾರ ಹೊರಬಿದ್ದಿದೆ.

ಕೊರ್ಲಹಳ್ಳಿಯ ಪಿಡಿಓ ಅಕ್ಕಮಹಾದೇವಿ ಹಿರೇಮಠ, ಲಂಚ ವಸೂಲಿಯ ದಂಧೆಗೆ ಇಳಿದಿದ್ದರು. ಇದರಿಂದ ಬೇಸತ್ತಿದ್ದ ಗ್ರಾಮದ ಯುವಕರು, ಲಂಚಕ್ಕೆ ಬೇಡಿಕೆ ಇಟ್ಟು, ಲಂಚ ಪಡೆಯುವ ಪಿಡಿಓ ಹೇಗಾದರೂ ಮಾಡಿ ಹತೋಠಿಗೆ ತರಬೇಕು ಎಂದು ಪ್ಲಾನ್‌ ಮಾಡಿದ್ದಾರೆ.

ಯುವಕರ ಪ್ಲಾನ್‌ ಸಕ್ಸಸ್‌ ಆಗೋಕೆ ಹೆಚ್ಚು ಕಾಲವೇನು ಬೇಕಾಗಿಲ್ಲ. ಕೆಲವು ದಿನಗಳ ನಂತ್ರ, ಗ್ರಾಮದ ವ್ಯಕ್ತಿಯೊಬ್ಬರು ಪಹಣಿ ಪತ್ರ ನೀಡುವಂತೆ ಗ್ರಾಮಪಂಚಾಯ್ತಿಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ಪರಿಶೀಲಿಸಿದ ಪಿಡಿಓ ಅಕ್ಕಮಹಾದೇವಿ ಹಿರೇಮಠ, ಕಂಪ್ಯೂಟರ್ ಆಪರೇಟರ್ ಈರಣ್ಣ ಮೂಲಕ, ನಾಲ್ಕು ಸಾವಿರ ಬೇಡಿಕೆ ಇಟ್ಟಿದ್ದಾರೆ. ಹೀಗೆ ಕೊಟ್ರೇ ಮಾತ್ರ ಪಹಣಿ ಪತ್ರ ನೀಡುವುದಾಗಿ ತಿಳಿಸಿದ್ದಾರೆ. ಇದೇ ಸಮಯಕ್ಕಾಗಿ ಕಾದು ಕುಳಿತಿದ್ದ ಗ್ರಾಮದ ಯುವಕರು, ಪಿಡಿಓಗೆ ಲಂಚ ನೀಡುವ ಹಣ ಮೊದಲ ಕಂತಿನಲ್ಲೇ ರಹಸ್ಯ ಕಾರ್ಯಾಚರಣೆ ಮಾಡಿ, ಹಣ ನೀಡೋದನ್ನು ವೀಡಿಯೋ ಮಾಡಿಕೊಂಡಿದ್ದಾರೆ.

ಈ ವೀಡಿಯೋವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದು, ಲಂಚದ ದಂಧೆಗೆ ಇಳಿದಿರುವ ಪಿಡಿಓ ಅಕ್ಕಮಹಾದೇವಿ ಹಿರೇಮಠ ಲಂಚಾವತಾರ ಜಗಜ್ಜಾಹಿರವಾಗಿದೆ. ಈ ಸಂಬಂಧ ಪಿಡಿಓ ಅವರನ್ನು ಅಮಾನತ್ತುಗೊಳಿಸುವಂತೆ ಒತ್ತಾಯಿಸಬೇಕು ಎಂದು ಕೊರ್ಲಹಳ್ಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಅಲ್ಲದೇ ಸೂಕ್ತ ಕ್ರಮ ಕೈಗೊಂಡು, ಲಂಚ ಮುಕ್ತ ಗ್ರಾಮಪಂಚಾಯ್ತಿ ಆಡಳಿತ ನಡೆಸುವಂತೆ ಮನವಿ ಮಾಡಿದ್ದಾರೆ.

Next Story

RELATED STORIES