ಕಸದ ಬುಟ್ಟಿಯಲ್ಲಿ ನವಜಾತ ಶಿಶು ಪತ್ತೆ : ಅಮ್ಮ ನಾ ಬೇಡವಾದ್ನಾ.?

[story-lines]
ಬೆಂಗಳೂರು : ಗಾರ್ಡನ್ ಸಿಟಿಯ ಗಾರ್ಬೇಜ್ ಬುಟ್ಟಿಯಲ್ಲಿ ನವಜಾತ ಶಿಶುವೊಂದನ್ನು ಎಸೆದು ಹೋಗಿರುವ ಘಟನೆ ನಡೆದಿದೆ.
ಕಳೆದ ಹಲವು ದಿನಗಳ ಹಿಂದೆಯಷ್ಟೇ ನವಜಾತ ಶಿಶುವನ್ನು ಆಡುಗೋಡಿಯ ಮಹಿಳಾ ಪೊಲೀಸ್ ಒಬ್ಬರು ತಾನೇ ಹಾಲುಣಿಸಿ, ಪೋಷಿಸಿದ್ದ ಘಟನೆ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಇಂತದ್ದೇ ಮತ್ತೊಂದು ಘಟನೆ ನಡೆದಿದೆ.
ಬ್ಯಾಟರಾಯನಪುರ ಪೊಲೀಸ್ ಠಾಣೆ ವ್ಯಾಪ್ತಿಯ ಟಿಂಬರ್ ಯಾರ್ಡ್ ಬಳಿಯ ಕಸದ ಬುಟ್ಟಿಯಲ್ಲಿ ನವಜಾತ ಶಿಶುವನ್ನು ಎಸೆದು ಹೋಗಲಾಗಿದೆ. ಮಗುವಿನ ಪರಿಸ್ಥಿತಿ ಕಂಡು ಮರುಗಿದ ಸಾರ್ವಜನಿಕರು, ಅಮ್ಮಾ ನಾ ಬೇಡವಾದ್ನ ಎಂಬಂತೆ ಅಳುತ್ತಿದ್ದ ಕಂದನ ಆಕ್ರಂದನಕ್ಕೆ, ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ.
ಘಟನಾ ಸ್ಥಳಕ್ಕೆ ಆಗಮಿಸಿದ ಬ್ಯಾಟರಾಯನಪುರ ಪೊಲೀಸ್ ಇನ್ಸ್ಪೆಕ್ಟರ್ ಶಿವಸ್ವಾಮಿಯವರನ್ನು ಒಳಗೊಂಡ ತಂಡ, ಮಗುವನ್ನು ರಕ್ಷಿಸಿ, ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಿದೆ. ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಹೀಗೆ ಕಸದ ಬುಟ್ಟಿಯಲ್ಲಿ ಮಗುವನ್ನು ಎಸೆದೋದ ತಾಯಿಗಾಗಿ ಹುಡುಕಾಟ ಶುರುಮಾಡಿದೆ.
ಒಟ್ಟಾರೆ ತಾಯಿಯ ಸ್ಥಾನ ಪಡೆಯೋಕೆ ಏಳೇಳು ಜನ್ಮದ ಪುಣ್ಯ ಮಾಡಿರಬೇಕು ಅಂತಾರೆ. ಅಲ್ಲದೇ ಮಕ್ಕಳ ಭಾಗ್ಯ ಪಡೆಯೋಕೆ ದೇವರ ಮೊರೆ ಹೋಗ್ತಾರೆ. ಬಂಜೆಯೆಂಬ ಸೊಲ್ಲ ಅಡಗಿಸೋ ಶಿವನೆ ಎಂದು ಅನೇಕರು ಬೇಡಿಕೊಳ್ಳುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ನವಜಾತ ಶಿಶುವನ್ನು ಕಸದ ಬುಟ್ಟಿಯಲ್ಲಿ ಎಸೆದೋದ ಆ ಮಹಾತಾಯಿಗೆ ಒಂಚೂರು ಕರುಳು ಚುರುಕ್ ಅನ್ನಲಿಲ್ವಾ.? ಅಮ್ಮಾ ನಾನು ಬೇಡವಾದ್ನಾ ಎಂಬ ಅಳುವಿನ ಅಕ್ರಂದನ ಆದ್ರೂ ಕೇಳಲಿಲ್ವಾ ಎಂಬುದೇ ಸಾರ್ವಜನಿಕರ ಪ್ರಶ್ನೆ.