Top

ವೇದಿಕೆಯ ಮೇಲೆ ಮತದಾರರಿಗೆ ಎನ್​. ಮಹೇಶ್​ ಸಾಷ್ಟಾಂಗ ನಮಸ್ಕಾರ

ವೇದಿಕೆಯ ಮೇಲೆ ಮತದಾರರಿಗೆ ಎನ್​. ಮಹೇಶ್​ ಸಾಷ್ಟಾಂಗ ನಮಸ್ಕಾರ
X

ಚಾಮರಾಜನಗರ: ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಿಸಿದ ಮತದಾರರಿಗೆ ಸಾಷ್ಟಾಂಗ ನಮಸ್ಕಾರ ಮಾಡುವ ಮೂಲಕ ಬಹುಜನ ಸಮಾಜವಾದಿ ಪಕ್ಷದ ಎನ್​. ಮಹೇಶ್ ಕೃತಜ್ಞತೆ ಅರ್ಪಿಸಿದರು.

ಕೊಳ್ಳೇಗಾಲ ತಾಲೂಕಿನ ಸಂತೆಮರಹಳ್ಳಿಯಲ್ಲಿ ನಡೆದ ಕೃತಜ್ಞತಾ ಸಭೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಮಂಡಿಯೂರಿ ಎನ್ ಮಹೇಶ್ ನಮಸ್ಕರಿಸಿದರು.

ಅಭೂತ ಪೂರ್ವ ಜಯಗಳಿಸಲು ಕಾರಣಕರ್ತರಾದ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಮತದಾರರಿಗೆ ವಂದಿಸಿದರು. ಎನ್​. ಮಹೇಶ್ ಸಮ್ಮಿಶ್ರ ಸರಕಾರದಲ್ಲಿ ಪ್ರಾಥಮಿಕ ಮತ್ತು ಫ್ರೌಢ ಶಿಕ್ಷಣ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಇದೇ ವೇಳೆ ಮೊದಲ ಪ್ರಯತ್ನದಲ್ಲೇ ಜಯ ಗಳಿಸಿದ ಬಗ್ಗೆ ಸಂತಸ ವ್ಯಕ್ತಪಡಿಸಿದ ಮಹೇಶ್​, ನನಗೆ ನಿರೀಕ್ಷೆಗೂ ಮಿರಿದ ಸಚಿವ ಸ್ಥಾನವನ್ನು ನೀಡಲಾಗಿದೆ. ಸಿಕ್ಕ ಅವಕಾಶದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

Next Story

RELATED STORIES