Top

ಕೆಜಿಎಫ್​ ಬಜೆಟ್​ ಎಷ್ಟು ಗೊತ್ತಾ? ಕೇಳಿದರೆ ಬೆಚ್ಚಿಬೀಳ್ತೀರಿ...

ಕೆಜಿಎಫ್​ ಬಜೆಟ್​ ಎಷ್ಟು ಗೊತ್ತಾ? ಕೇಳಿದರೆ ಬೆಚ್ಚಿಬೀಳ್ತೀರಿ...
X

ಲಕ್ಷ್ಮೀನಾರಾಯಣ

ರಾಕಿಂಗ್ ಸ್ಟಾರ್ ಕೆಜಿಎಫ್, ಕನ್ನಡ ಚಿತ್ರರಂಗದ ಅತ್ಯಂತ ಬಹುನಿರೀಕ್ಷಿತ ಚಿತ್ರ. 5 ಭಾಷೆಗಳಲ್ಲಿ ಈ ಚಿತ್ರ ಸಿದ್ದವಾಗುತ್ತಿದೆ. ಯಶ್ ಅವರ ಯಶಸ್ಸು ಹಾಗೂ ಅಭಿಮಾನಿಗಳನ್ನು ನಿರ್ಮಿಸುತ್ತಿರುವ ಈ ಚಿತ್ರ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಅತೀ ದೊಡ್ಡ ಬಜೆಟ್ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಬಾಹುಬಲಿ ರೀತಿ ಎರಡು ಭಾಗದ ಚಿತ್ರ ಇದಾಗುವ ಸುಳಿವು ಇದೆ.

ಹೌದು, ಕೆಜಿಎಫ್ ಚಿತ್ರದ ಬಜೆಟ್​ ಬರೋಬ್ಬರಿ 50 ಕೋಟಿ ರೂ. ಹಾಗಾಗಿ ಯಶ್ ಸಿನಿಮಾಗಳ ಈ ಹಿಂದಿನ ಎಲ್ಲಾ ಬಾಕ್ಸಾಫೀಸ್​ ದಾಖಲೆಗಳನ್ನು ಕೆಜಿಎಫ್​ ಧೂಳೀಪಟ ಮಾಡುವ ಸೂಚನೆ ಇದೆ.

[story-lines]

ಯಶ್ ಅವರ ಹಿಟ್ ಚಿತ್ರಗಳಲ್ಲಿ ಗೂಗ್ಲಿ, ರಾಜಾಹುಲಿ, ಮಿಸ್ಟರ್ ಅಂಡ್ ಮಿಸ್ಸೆಸ್ ರಾಮಾಚಾರಿ, ಗಜಕೇಸರಿ ಮುಂಚೂಣಿಯಲ್ಲಿ ನಿಲ್ಲುತ್ತವೆ. ಕೆಜಿಎಫ್​ ಸಿನಿಮಾ ಸಹ ಬಾಕ್ಸಾಫೀಸ್​ನಲ್ಲಿ ಈ ದಾಖಲೆಗಳನ್ನು ಧೂಳೆಬ್ಬಿಸಲಿದೆ ಎನ್ನಲಾಗಿದೆ.

ಬಾಲಿವುಡ್​ ರೇಂಜ್​ನಲ್ಲಿ ನಿರ್ಮಾಣವಾಗ್ತಿರೋ ಕೆಜಿಎಫ್ ಚಿತ್ರವನ್ನು ಉಗ್ರಂ ನಂತರ ಪ್ರಶಾಂತ್ ನೀಲ್ ನಿರ್ದೇಶಿಸುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್​​​​​ನಲ್ಲಿ ನಿರ್ಮಾಪಕ ವಿಜಯ್ ಕಿರಗಂದೂರ್ 50 ಕೋಟಿ ಹೂಡಿದ್ದಾರೆ.

ಕೆಜಿಎಫ್, ರಾಕಿಂಗ್​ ಸ್ಟಾರ್ ಯಶ್​ ಬಹಳ ಇಷ್ಟಪಟ್ಟು, ಅಷ್ಟೇ ಕಷ್ಟಪಟ್ಟು ನಟಿಸ್ತಿರೋ ಸಿನಿಮಾ. ಪ್ರಶಾಂತ್ ನೀಲ್ ಮಾಡಿಕೊಂಡಿರೋ ಕಥೆ ಮೇಲೆ ಯಶ್ ಸೇರಿದಂತೆ ಇಡೀ ಚಿತ್ರತಂಡಕ್ಕೆ ಬಹಳ ನಂಬಿಕೆ ಇದೆ. ಯಾವುದೇ ಕಾರಣಕ್ಕೂ ಈ ಸಿನಿಮಾ ಅಭಿಮಾನಿಗಳನ್ನ ನಿರಾಸೆಗೊಳಿಸಲ್ಲ ಅನ್ನೋ ಭರವಸೆ ಇದೆ. ಅದೇ ಕಾರಣಕ್ಕೆ 50ಕೋಟಿ ವೆಚ್ಚದಲ್ಲಿ ಸಿಕ್ಕಾಪಟ್ಟೆ ರಿಸ್ಕ್​ ತಗೊಂಡು ಈ ಚಿತ್ರವನ್ನ ನಿರ್ಮಾಣ ಮಾಡಲಾಗ್ತಿದೆ.

ಈ ಬಾರಿ ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲೂ ಬಿಡುಗಡೆ ಮಾಡಲಾಗುತ್ತಿದೆ. ಕೆಜಿಎಫ್​ ಮಣ್ಣಿನ ರಾಕಿ ಕಥೆಯನ್ನ ಏಕಕಾಲಕ್ಕೆ 5 ಭಾಷೆಗಳಲ್ಲಿ ತೆರೆಗೆ ತರಲಾಗ್ತಿದೆ. ಅದೇ ಕಾರಣಕ್ಕೆ ಚಿತ್ರ 200 ಕೋಟಿ ಕಲೆಕ್ಷನ್ ಮಾಡೋ, ಲೆಕ್ಕಾಚಾರದಲ್ಲಿದೆ ಚಿತ್ರತಂಡ.. ಬಾಹುಬಲಿ ರೀತಿ ಕೆಜಿಎಫ್ ಚಿತ್ರವನ್ನ ಎರಡು ಭಾಗಗಳಾಗಿ ತೆರೆಗೆ ತರಲಾಗ್ತಿದ್ದು, ಕನ್ನಡದ ಮಟ್ಟಿದೆ ಇದು ಮೊದಲ ಪ್ರಯತ್ನ.

70-80ರ ದಶಕದಲ್ಲಿ ನಡೆಯೋ ಕಥೆಯನ್ನ ಕೆಜಿಎಫ್ ಚಿತ್ರದಲ್ಲಿ ಹೇಳಲಾಗ್ತಿದೆ.. ಅದಕ್ಕೆ ತಕ್ಕಂತೆ ಒಂದಷ್ಟು ಅದ್ಧೂರಿ ಸೆಟ್ ಹಾಕಿ ಚಿತ್ರವನ್ನ ಶೂಟ್ ಮಾಡಲಾಗ್ತಿದೆ..ಚಿತ್ರದಲ್ಲಿ ಯಶ್ ರಾಕಿ ಅನ್ನೋ ಪಾತ್ರದಲ್ಲಿ ಬಣ್ಣ ಹಚ್ಚಿದ್ದು, ಅದು ಎರಡು ಶೇಡ್​ಗಳಿರೋ ಪಾತ್ರಾನಾ..? ಅಥವಾ ಯಶ್ ಡಬಲ್ ರೋಲ್​ನಲ್ಲಿ ನಟಿಸ್ತಿದ್ಧಾರಾ..? ಅನ್ನೋದು ಇನ್ನಷ್ಟೆ ಗೊತ್ತಾಗ್ಬೇಕಿದೆ.

Next Story

RELATED STORIES