Top

ಕೆರಾನ್ ಸೆಕ್ಟರ್‌ನಲ್ಲಿ ಗಡಿದಾಟಲು ಉಗ್ರರ ಯತ್ನ : ಆರು ಉಗ್ರರ ಹತ್ಯೆ

ಕೆರಾನ್ ಸೆಕ್ಟರ್‌ನಲ್ಲಿ ಗಡಿದಾಟಲು ಉಗ್ರರ ಯತ್ನ : ಆರು ಉಗ್ರರ ಹತ್ಯೆ
X

ಜಮ್ಮು-ಕಾಶ್ಮೀರ : ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ, ಉಗ್ರರ ನುಸುಳುವಿಕೆ ಮುಂದುವರೆದಿದೆ. ಭಾರತದ ಗಡಿಯೊಳಗೆ ನುಗ್ಗಲು ಯತ್ನಿಸಿದ ಆರು ಉಗ್ರರನ್ನು, ಭಾರತೀಯ ಸೇನಾಪಡೆ ಹೊಡೆದುಹಾಕಿದೆ.

ಕಾಶ್ಮೀರದ ಕುಪ್ವಾರ ಜಿಲ್ಲೆಯ ಕೆರಾನ್ ಸೆಕ್ಟರ್‌ನಲ್ಲಿ ಇಂದು ಬೆಳಗಿನ ಜಾವ, ಉಗ್ರರು ನುಸುಳಲು ಯತ್ನಿಸಿದ್ದಾರೆ. ಈ ವೇಳೆ ಗಸ್ತಿನಲ್ಲಿದ್ದ ಭಾರತೀಯ ಸೇನಾಪಡೆ ಗಮನಿಸಿ, ಗುಂಡಿನ ಕಾಳಗ ನಡೆಸಿದ್ದಾರೆ. ಉಗ್ರರು ಮತ್ತು ಭಾರತೀಯ ಸೇನಾಪಡೆಗಳ ನಡುವೆ ಕೆಲ ಕಾಲ ಗುಂಡಿನ ಚಕಮಕಿ ನಡೆದು, ಆರು ಉಗ್ರರನ್ನು ಕೊನೆಗೂ ಗುಂಡಿನದಾಳಿಯಲ್ಲಿ ಭಾರತೀಯ ಸೇನಾಪಡೆ ಹತ್ಯೆ ಮಾಡಿದೆ.

ಯೋಧರ ಗುಂಡಿನ ದಾಳಿಯಲ್ಲಿ 6 ಉಗ್ರರು ಹತರಾಗಿದ್ದು, ಘಟನಾ ಪ್ರದೇಶದಲ್ಲಿ ಮತ್ತಷ್ಟು ಉಗ್ರರು ಅಡಗಿರುವ ಕುರಿತು ಶಂಕೆ ವ್ಯಕ್ತವಾಗಿದೆ. ಈ ಕಾರಣಕ್ಕಾಗಿ ಕುಪ್ಪಾರ ಜಿಲ್ಲೆಯ ಕೆರಾನ್‌ ಸೆಕ್ಟರ್‌ನಲ್ಲಿ ಉಗ್ರ ನಿಗ್ರಹ ಪಡೆ ತನ್ನ ಕಾರ್ಯಾಚರಣೆಯಲ್ಲಿ ತೊಡಗಿದೆ. ಅಲ್ಲದೇ ಇನ್ನೂ ಉಗ್ರರು ಹಡಗಿದ್ದಾರೆಯೇ ಎಂಬ ಬಗ್ಗೆಯೂ ತನಿಖೆಯನ್ನು ಆರಂಭಿಸಿದೆ.

Next Story

RELATED STORIES